ಚಿಕ್ಕೋಡಿ: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ದೆಹಲಿ ಮತ್ತು ಶಿರಡಿ ವರೆಗೆ ಪ್ರತಿನಿತ್ಯ ವಿಮಾನಗಳನ್ನು ಪ್ರಾರಂಭಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಣೇಶವಾಡಿ ಗ್ರಾಮಕ್ಕೆ ಆಗಮಿಸಿದ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿದ ವಿ.ಪ.ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಕಾರ್ಯಕರ್ತರ ತಂಡ ಬೆಳಗಾವಿ ಕರ್ನಾಟಕದ ಎರಡನೆ ರಾಜ್ಯದಾನಿಯಾಗಿದೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹಲವು ವರ್ಷಗಳಿಂದ ಈ ಭಾ =ಗದ ಪ್ರಯಾಣಿಕರಿಗೆ ಬೇರೆ ಬೇರೆ ರಾಜ್ಯಗಳಿಗೆ ತೆರಳಲು ಅನುಕೂಲಕರವಾದ ನಿಲ್ದಾಣವಾಗಿದೆ.
ಈ ನಿಲ್ದಾಣದಿಂದ ಮುಖ್ಯವಾಗಿ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಾಠಾ ಲೈಪ ಇನ್ಪಂಟ್ರಿ ಟ್ರೆನಿಂಗ್ ಸೆಂಟರ, ಟಿ.ಎ.ಬಟಾಲಿಯನ್, ಮಿಲಿಟರಿ ಆಸ್ಪತ್ರೆ ಹಾಗು ಜೆ.ಎಲ್.ವಿಂಗ್ ಇಂತಹ ಪ್ರಮುಖ ಮಿಲಿಟರಿ ಕಚೇರಿಗಳಿದ್ದು, ಈ ಕಚೇರಿಗಳ ಸಿಬ್ಬಂದಿಗಳಿಗೆ ಹಾಗೂ ಈ ಭಾಗದಲ್ಲಿ ವಿವಿಧ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಯಾನಿಕರು ದೆಹಲಿಯಲ್ಲಿರುವ ಮುಖ್ಯ ಕಚೇರಿಗಳಿಗೆ ಪ್ರಯಾಣ ಮಾಡಲು ಬೆಳಗಾವಿ-ದೆಹಲಿ ದೈನಂದಿನ ಒಂದು ಬಾರಿ ವಿಮಾನ ಪ್ರಾರಂಭಿಸಿರುವುದು ಅತ್ಯವಶ್ಯಕವಾಗಿದೆ. ಅದೇ ರೀತಿ ಮಹಾರಾಷ್ಟ್ರದ ರಾಜ್ಯದ ಶಿರಡಿ ಶ್ರೀ ಸಾಯಿಬಾಬಾ ದರ್ಶಣಕ್ಕೆ ಹೋಗುವ ಭಕ್ತಾದಿಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡುತ್ತಾರೆ. ಭಕ್ತಾಧಿಗಳ ಅನುಕೂಲಕ್ಕಾಗಿ ಬೆಳಗಾವಿ-ಶಿರಡಿಗೆ ದೈನಂದಿನ ಒಂದು ಬಾರಿ ವಿಮಾನ ಪ್ರಾರಂಭಿಸಬೇಕು ಎಂದು ಗಡಿ ಭಾಗದ ಜನರ ಬೇಡಿಕೆಯಾಗಿದೆ. ಸಚಿವರು ಕೂಡಲೇ ಬೆಳಗಾವಿ-ದೆಹಲಿ ಮತ್ತು ಬೆಳಗಾವಿ-ಶಿರಡಿ ಮಾರ್ಗವಾಗಿ ವಿಮಾನಯಾನ ಪ್ರಾರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮನವಿ ಮಾಡಿದರು.