Advertisement
ನಟ ನಟಿಯರ ಕಾರ್ ದರ್ಬಾರ್ಯಾರ ಬಳಿಯೂ ಇಲ್ಲದಂಥ ಕಾರು ಅಥವಾ ಅತೀ ದುಬಾರಿ ಕಾರು ಓಡಾಡಿಸಿಕೊಂಡು ಇರಬೇಕೆನ್ನುವುದು ಹಾಲಿವುಡ್, ಬಾಲಿವುಡ್ ಸೆಲೆಬ್ರಿಟಿಗಳ ಕನಸುಗಳಲ್ಲಿ ಒಂದು. ಕಳೆದ ವರ್ಷ ನಟ ಜಾನ್ ಅಬ್ರಹಾಂ “ಭಾರತದಲ್ಲೇ ಯಾರ ಬಳಿಯೂ ಇಲ್ಲದ ಕಾರು ನನ್ನ ಬಳಿ ಇದೆ’ ಎಂದು ಹೇಳುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. ಯಾವುದದು? ಎಂದು ಕೇಳಿದ್ದಕ್ಕೆ ನಿಸ್ಸಾನ್ ಜಿಎಟಿ ಆರ್ ಬ್ಲ್ಯಾಕ್ ಎಡಿಷನ್ ಮಾಡೆಲ್ ಎಂದು ಹೇಳಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. ಅಷ್ಟಕ್ಕೂ ಅವರೇನು ಸುಳ್ಳು ಹೇಳಿರಲಿಲ್ಲ. ಆಗಷ್ಟೇ ಬಿಡುಗಡೆಯಾಗಿದ್ದ 2 ಕೋಟಿ ರೂ. ಬೆಲೆಯ ಕಾರಿಗೆ ಅವರೇ ಮೊದಲ ಕಸ್ಟಮರ್ ಆಗಿದ್ದರು. ನಿಸ್ಸಾನ್ ಕಂಪೆನಿ, ಅವರನ್ನೇ ಹೊಸ ಕಾರ್‌ನ ಅನಾವರಣಕ್ಕೆ ಕರೆಯಿಸಿಕೊಂಡಿತ್ತು ಕೂಡ.
Related Articles
Advertisement
ಕಾರ್‌ಗಳ ಕ್ರೇಜ್ ಹೊಂದಿರುವ ನಟ-ನಟಿಯರು ಸ್ಯಾಂಡಲ್‌ವುಡ್‌ನಲ್ಲೂ ತೀರ ಕಡಿಮೆ ಎನ್ನುವಂತಿಲ್ಲ ವಾದರೂ ಉಳಿದವರಿಗೆ ಹೋಲಿಸಿಕೊಂಡರೆ ಸ್ವಲ್ಪ ಕಡಿಮೆಯೇ. ಆದರೂ ಕೋಟಿ ರೂ.ಗೆ ಹತ್ತಿರದ ಕಾರುಗಳು ಕಳೆದೊಂದು ದಶಕದಲ್ಲಿ ಮಿಂಚೆದ್ದ ಬಹುತೇಕ ನಟ-ನಟಿಯರ ಬಳಿ ಇದ್ದೇ ಇದೆ. ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ಅತಿ ದುಬಾರಿ ಬೆಲೆಯ ಕಾರು ಹೊಂದಿರುವ ನಟ. ಹಮ್ಮರ್, ಜಾಗÌರ್, ಕಾಂಟೆಸ್ಸಾ, ಆಡಿ, ರೇಂಜ್ ರೋವರ್, ಬೆಂಜ್, ಫಾರ್ಚೂನರ್, ಕೂಪರ್ ಕಾರುಗಳನ್ನು ಆತ ಹೊಂದಿದ್ದಾರೆ. ಆಡಿ ಆರ್8 ಇತ್ತೀಚೆಗಷ್ಟೇ ಖರೀದಿಸಿರುವ ಕಾರಾಗಿದೆ. ಸುದೀಪ್ ಕೂಡ ಕಡಿಮೆ ಏನಿಲ್ಲ. ಜಾಗ್ವಾರ್, ಬಿಎಂಡಬ್ಲೂ, ಎಂಡೋವರ್ ಹೀಗೆ ಸುದೀಪ್ ಹೊಂದಿರುವ ಕಾರ್‌ಗಳ ಪಟ್ಟಿ ಬೆಳೆಯುತ್ತದೆ. ಒಟ್ಟಾರೆ ಇವರಲ್ಲಿ ಹೆಚ್ಚಿನವರಿಗೆ ಕಾರ್‌ಗಳನ್ನು ಖರೀದಿಸುವುದು ಖಯಾಲಿ ಆಗಿದ್ದರೆ, ಕೆಲವರು ಪ್ರತಿಷ್ಠೆಗಾಗಿ ದುಬಾರಿ ಕಾರಿನಲ್ಲಿ ಓಡಾಡುತ್ತಾರೆ.
ಮೆಸ್ಸಿಗೂ ದುಬಾರಿ ಕಾರೇ ಸರ್ವಸ್ವಅರ್ಜೆಂಟೀನಾ ತಂಡದ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ವಿಪರೀತ ಕಾರ್ ಕ್ರೇಜ್. ಅದೆಷ್ಟೆಂದರೆ ದುಬಾರಿ ಕಾರುಗಳನ್ನು ಹೊಂದಿರಬೇಕೆನ್ನುವ ಹೆಬ್ಬಯಕೆ ಅವರದು. ಮೆಸ್ಸಿ ಸಂಗ್ರಹದಲ್ಲಿ ಸಾಕಷ್ಟು ದುಬಾರಿ ಕಾರುಗಳಿವೆ. ಆಡಿ, ಫೆರಾರಿ, ಮಸೆರಟಿ ಕಂಪನಿಗಳಿಗೆ ಸೇರಿದ ನ್ಪೋರ್ಟ್ಸ್ ಕಾರುಗಳು ಅವರ ಫೇವರಿಟ್. ಮಸೆರಿಟಿ ಗ್ರ್ಯಾನ್ ಟರಿಸ್ಮೋ ಎಂಸಿ ಸ್ಟ್ರಾಡಾಲ್ ಹಾಗೂ ಇದೇ ಕಂಪನಿಯ ಎಸ್ ಕಾಂಪಾಕ್ಟ್ ಮೆಸ್ಸಿ ಬಳಿ ಇರುವ ಅತ್ಯಂತ ದುಬಾರಿ ಕಾರು. ಮೂರ್‍ನಾಲ್ಕು ಸೆಕೆಂಡ್‌ಗಳಲ್ಲಿ 0-100 ವೇಗದಲ್ಲಿ ಚಲಿಸುವ ಸಾಮರ್ಥ್ಯದ ಬೊಂಬಾಟ್ ಕಾರು. ಉಳಿದಂತೆ ಟೊಯೊಟಾ ಪ್ರಯಾಸ್, ಲೆಕ್ಸಸ್ 4 àಲ್ಸ್ ಡ್ರೆ„ವ್, ಆಡಿ8 ಸ್ಪೈಡರ್, ಆಡಿ ಕ್ಯೂ ಸರಣಿಯ ಕಾರುಗಳು ಹಾಗೂ ಡೋಡ್ಜ್ ಎಸ್‌ಆರ್‌ಟಿ8 ಹೈಎಂಡ್ ಕಾರುಗಳು ಹಾಗೂ ಫೆರಾರಿ ಎಫ್430 ಸ್ಪೈಡರ್ ಮೆಸ್ಸಿ ಸಂಗ್ರಹದಲ್ಲಿವೆ. ಕ್ರಿಕೆಟಿಗರ ಕಾರೂ, ಕ್ರೇಜೂ
ಕ್ರಿಕೆಟ್ ಆಟಗಾರರು ಕಾರು ಖಯಾಲಿಯಿಂದ ಹೊರತಾಗಿಲ್ಲ. ಕಳೆದೆರಡು ದಶಕಗಳಲ್ಲಿ ಬಂದು ಹೋಗಿರುವ ಹಾಗೂ ಸದ್ಯ ತಂಡದಲ್ಲಿರುವ ಸ್ಟಾರ್ ಆಟಗಾರರೂ ಒಂದಲ್ಲಾ ಒಂದು ರೀತಿಯಿಂದ ಲಕ್ಸುರಿ ಕಾರಿನ ಬಗ್ಗೆ ಆಸಕ್ತಿ ಹೊಂದಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್‌ಗೆ ಕಾರ್ ಬಗ್ಗೆ ಇರುವ ಮೋಹದಿಂದಲೇ ಫಾರ್ಮುಲಾ ಒನ್ ಮುಖ್ಯಸ್ಥ ಬೆರ್ನಿ ಎಕ್ಲುಸ್ಟೋನ್ ಹಿಂದೊಮ್ಮೆ ಆಹ್ವಾನ ನೀಡಿ ಕರೆಸಿಕೊಂಡಿದ್ದು. ಫೆರಾರಿ ಕಾರುಗಳನ್ನು ತೆಂಡೂಲ್ಕರ್ ಇಷ್ಟಪಡುತ್ತಿದ್ದರು. ಅವರಲ್ಲಿ ಪೋರ್ಷೆ, ಮರ್ಸಿಡೀಸ್ ಬೆಂಜ್, ಬಿಎಂಡಬ್ಲ್ಯು ಕಂಪನಿಗಳ ಪ್ರಮುಖ ಕಾರುಗಳಿವೆ. ಬಗೆ ಬಗೆಯ ಬೈಕ್‌ಗಳನ್ನು ಹೊಂದಿರುವ ಧೋನಿಗೆ ಹಮ್ಮರ್ ಇಷ್ಟವಾದ ಕಾರು. ಇನ್ನೊಂದು ವಿಶೇಷ ಏನೆಂದರೆ ಧೋನಿಗೆ ಬೈಕ್‌ಗಳನ್ನು ತಮಗಿಷ್ಟವಾಗುವಂತೆ ವಿನ್ಯಾಸಗೊಳಿಸುವ ಹವ್ಯಾಸವಿದೆ. ಆಡಿ ಕಾರುಗಳನ್ನು ಅತಿಯಾಗಿಯೇ ಇಷ್ಟಪಡುವ ವಿರಾಟ್ ಕೋಹ್ಲಿ, ಹಮ್ಮರ್ ಪ್ರಿಯಕರ ಹರ್ಭಜನ್ ಸಿಂಗ್, ರವೀಂದ್ರ ಜಡೇಜಾ, ಯುವರಾಜ್ ಸಿಂಗ್ ಅವರೂ ಧೋನಿ ಸಾಲಿಗೆ ಸೇರುವವರೇ ಆಗಿದ್ದಾರೆ. ಕೋಹ್ಲಿ ಸಾಮಾನ್ಯವಾಗಿ ಆಡಿಯ ಅತಿ ದುಬಾರಿ ನ್ಪೋರ್ಟ್ಸ್ ಕಾರುಗಳಲ್ಲಿಒಂದಾದ ಆರ್8 10 ಪ್ಲಸ್ ಕಾರಿನಲ್ಲೇ ಓಡಾಡುತ್ತಾರೆ. ವೀರೇಂದ್ರ ಸೆಹವಾಗ್ ಬಳಿ ನಾಲ್ಕು ಕೋಟಿ ರೂ. ಮೌಲ್ಯದ ಬೆಂಟಿÉ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಟಾರ್ ಕಾರು ಇದೆ. – ಗಣಪತಿ ಅಗ್ನಿಹೋತ್ರಿ