Advertisement

ಯುಟ್ಯೂಬ್‌ನಲ್ಲಿ ಸ್ಟಾರ್‌ ಟೀಸರ್‌ ಟ್ರೆಂಡಿಂಗ್‌

10:43 AM Sep 11, 2017 | Team Udayavani |

ಕನ್ನಡದ ಒಂದಷ್ಟು ಟ್ರೇಲರ್‌ಗಳು ಹಾಡುಗಳು ಯುಟ್ಯೂಬ್‌ನಲ್ಲಿ ಸಖತ್‌ ಸೌಂಡ್‌ ಮಾಡುವ ಮೂಲಕ ಟ್ರೆಂಡಿಂಗ್‌ನಲ್ಲಿವೆ. ಈ ಮೂಲಕ ಆ ಸಿನಿಮಾಗಳ ನಿರೀಕ್ಷೆ ಕೂಡಾ ಹೆಚ್ಚುತ್ತಿವೆ. ಇತ್ತೀಚೆಗಷ್ಟೇ “ಭರ್ಜರಿ’ ಚಿತ್ರದ ಹಾಡು ಹಾಗೂ ಟ್ರೇಲರ್‌ ಯುಟ್ಯೂಬ್‌ ಟ್ರೆಂಡಿಂಗ್‌ನಲ್ಲಿತ್ತು. ಈಗ ಇಬ್ಬರು ಸ್ಟಾರ್‌ ನಟರ ಚಿತ್ರಗಳ ಟೀಸರ್‌ಗಳು ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿವೆ. ಅದು ದರ್ಶನ್‌ ಹಾಗೂ ಸುದೀಪ್‌ ಅವರ ಚಿತ್ರಗಳು.

Advertisement

ಹೌದು, ದರ್ಶನ್‌ ಅಭಿನಯದ “ತಾರಕ್‌’ ಚಿತ್ರದ ಟೀಸರ್‌ ಶುಕ್ರವಾರ ಸಂಜೆ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಹೊತ್ತಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ ಈ ಟೀಸರ್‌ನ ವೀಕ್ಷಣೆ ಈಗ ಮೂರು ಲಕ್ಷ ದಾಟಿ ಮುನ್ನುಗ್ಗುತ್ತಿದೆ. ಸದ್ಯ “ತಾರಕ್‌’ ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಅಭಿಮಾನಿಗಳು ಟೀಸರ್‌ ಇಷ್ಟಪಟ್ಟಿದ್ದಾರೆ. “ಮಿಲನ’ ಪ್ರಕಾಶ್‌ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್‌, ದೇವರಾಜ್‌, ಶ್ರುತಿ ಹರಿಹರನ್‌, ಸಾನ್ವಿ ಸೇರಿದಂತೆ ಅನೇಕರು ನಟಿಸಿದ್ದಾರೆ.

ದರ್ಶನ್‌ ಅವರ ರಬ್ಬಿ ಆಟದ ಮೂಲಕ ಆರಂಭವಾಗುವ “ತಾರಕ್‌’ ಟೀಸರ್‌ನಲ್ಲಿ ದರ್ಶನ್‌ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನು ಅಭಿಮಾನಿಗಳು ಕೂಡಾ ಇಷ್ಟಪಟ್ಟಿದ್ದಾರೆ. ಇದು ದರ್ಶನ್‌ ಅವರ “ತಾರಕ್‌’ ಟೀಸರ್‌ ವಿಷಯವಾದರೆ, ಸುದೀಪ್‌ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ “ರಾಜು ಕನ್ನಡ ಮೀಡಿಯಂ’ ಚಿತ್ರದ ಟೀಸರ್‌ ಕೂಡಾ ದೊಡ್ಡ ಯಶಸ್ಸು ಕಂಡಿದೆ.

“ರಾಜು ಕನ್ನಡ ಮೀಡಿಯಂ’ನಲ್ಲಿ ಸುದೀಪ್‌ ಶ್ರೀಮಂತ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು, ಚಿತ್ರತಂಡ ಸುದೀಪ್‌ ಅವರ ಹುಟ್ಟುಹಬ್ಬ ದಿನ ಟೀಸರ್‌ವೊಂದನ್ನು ಬಿಡುಗಡೆ ಮಾಡಿತ್ತು. ಸುದೀಪ್‌ ಅವರು ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅದ್ಧೂರಿ ಬ್ಯಾಕ್‌ಡ್ರಾಪ್‌ನಲ್ಲಿ ಶೂಟ್‌ ಮಾಡಿದ ಈ ಟ್ರೇಲರ್‌ ಬಿಡುಗಡೆಯಾದ ಎಂಟು ದಿನಕ್ಕೆ 10 ಲಕ್ಷ ಮಂದಿ ವೀಕ್ಷಿಸುವ ಮೂಲಕ ಟೀಸರ್‌ ಹಿಟ್‌ಲಿಸ್ಟ್‌ ಸೇರಿದೆ.

ಸುದೀಪ್‌ ಅವರ ಲುಕ್‌, ಅವರ ಗ್ರ್ಯಾಂಡ್‌ ಎಂಟ್ರಿಯನ್ನು ಅಭಿಮಾನಿಗಳು ಇಷ್ಟಪಡುವ ಮೂಲಕ “ರಾಜು ಕನ್ನಡ ಮೀಡಿಯಂ’ ಕೂಡಾ ಯುಟ್ಯೂಬ್‌ನಲ್ಲಿ ಕ್ಲಿಕ್‌ ಆಗಿದೆ. ಸುದೀಪ್‌ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಿಲಿಯನೇರ್‌ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಗುರುನಂದನ್‌ ನಾಯಕರಾಗಿ ನಟಿಸಿದ್ದು, ಕೆ.ಎ.ಸುರೇಶ್‌ ಈ ಚಿತ್ರದ ನಿರ್ಮಾಪಕರಾದರೆ, ನರೇಶ್‌ ನಿರ್ದೇಶನ ಚಿತ್ರಕ್ಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next