Advertisement

ನಿಮ್ಮ ಶಾಲೆಗೂ ಭೇಟಿ ನೀಡಬಹುದು ಟೋಕಿಯೊ ಒಲಿಂಪಿಕ್ಸ್‌ ಸಾಧಕರು!

08:45 PM Nov 20, 2021 | Team Udayavani |

ನವದೆಹಲಿ: ನೀರಜ್‌ ಚೋಪ್ರಾ, ಪಿ.ವಿ. ಸಿಂಧು, ಲವ್ಲಿನಾ ಬೊರ್ಗೊಹೇನ್‌, ರವಿ ದಹಿಯಾ, ಭಾರತ ಹಾಕಿ ತಂಡದ ಆಟಗಾರರು ಸೇರಿದಂತೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆಗೈದ ಭಾರತ 75 ಸ್ಟಾರ್‌ ಕ್ರೀಡಾಪಟುಗಳು ನಿಮ್ಮ ಶಾಲೆಗೂ ಭೇಟಿ ನೀಡಬಹುದು!

Advertisement

ಹೌದು, ಭಾರತೀಯ ಒಲಿಂಪಿಕ್ಸ್‌ ತಂಡದ ಎಲ್ಲ ಕ್ರೀಡಾಪಟುಗಳು 2023ರ ಆಗಸ್ಟ್‌ 15ರೊಳಗೆ 75 ಶಾಲೆಗಳಿಗೆ ಭೇಟಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಮನವಿ ಮಾಡಿದ್ದರು. ಅದರಂತೆ ಒಟ್ಟು 75 ಶಾಲೆಗಳಿಗೆ 75 ಕ್ರೀಡಾಪಟುಗಳು ಮುಂದಿನ ಎರಡು ವರ್ಷಗಳಲ್ಲಿ  ಫಿಟ್‌ ಇಂಡಿಯಾ ಮಿಷನ್‌’ ಅಭಿಯಾನದ ವ್ಯಾಪ್ತಿಯಲ್ಲಿ ಭೇಟಿ ನೀಡಲಿದ್ದಾರೆ. ಶಾಲೆಗಳ ಯಾದಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

ಜನವರಿಯಲ್ಲೇ ಆರಂಭ:

ಈ ವೇಳೆ ಕ್ರೀಡಾ ಸಾಧಕರು ವಿದ್ಯಾರ್ಥಿಗಳೊಂದಿಗೆ ಸುಮಾರು ಒಂದು ಗಂಟೆ ಸಮಯ ಕಳೆಯಲಿದ್ದಾರೆ. ಜತೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಅವರಿಗೆ ಸ್ಫೂರ್ತಿ ತುಂಬಲಿದ್ದಾರೆ. ಅಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಜತೆಗೆ ಫಿಟ್‌ ಇಂಡಿಯಾ ಕ್ವಿಜ್‌ನಲ್ಲೂ ಭಾಗವಹಿಸಲಿದ್ದಾರೆ. ಮುಂದಿನ ವರ್ಷ ಜನವರಿಯಿಂದಲೇ ಇದಕ್ಕೆ ಚಾಲನೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next