Advertisement
ಹಿಂದಿನ ಅವಧಿಯ ಸ್ಥಾಯಿ ಸಮಿತಿ ಸದಸ್ಯರ ಅಧಿಕಾರಾವಧಿ ನ.9ರಂದೇ ಮುಗಿದಿದ್ದು, ಆ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಡಿ.5ರಂದು ಚುನಾವಣೆ ನಿಗದಿಪಡಿಸಿದ್ದಾರೆ. ಇನ್ನೊಂದೆಡೆ ಸ್ಥಾಯಿ ಸಮಿತಿ ಆಕಾಂಕ್ಷಿಗಳು ತಮ್ಮ ಪಕ್ಷದ ವರಿಷ್ಠರ ಬಳಿ ಪ್ರಮುಖ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.
Related Articles
Advertisement
ಮೈತ್ರಿಗೆ ತಲಾ ನಾಲ್ಕು ಸ್ಥಾಯಿ ಸಮಿತಿ: 12 ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ತಲಾ ನಾಲ್ಕು ಸ್ಥಾಯಿ ಸಮಿತಿಗಳನ್ನು ಹಂಚಿಕೆ ಮಾಡಬೇಕು ಎಂದು ಈಗಾಗಲೇ ಚರ್ಚೆ ನಡೆಯುತ್ತಿದೆ. ಆದರೆ, ಯಾವ ಪಕ್ಷಕ್ಕೆ ಯಾವ ಸಮಿತಿ ನೀಡಬೇಕೆಂಬುದು ನಿರ್ಧಾರವಾಗಿಲ್ಲ. ಆದ್ದರಿಂದ ಮೇಯರ್, ಉಪಮೇಯರ್ ಆಯ್ಕೆಯಂತೆ ಎರಡು ಪಕ್ಷಗಳ ರಾಜ್ಯ ನಾಯಕರು ಅಖಾಡಕ್ಕೆ ಧುಮುಕುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಇನ್ನು ರಮೀಳಾ ಉಮಾಶಂಕರ್ ನಿಧನದಿಂದ ತೆರವಾಗಿದ್ದ ಉಪಮೇಯರ್ ಸ್ಥಾನಕ್ಕೂ ಡಿ.5ರಂದೇ ಚುನಾವಣೆ ನಡೆಯಲಿದೆ. ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಭಿನ್ನಮತ ಶುರುವಾಗಿದ್ದು, ನಾಗಪುರ ವಾರ್ಡ್‌ನ ಭದ್ರೇಗೌಡ, ವಿ.ನಾಗೇನಹಳ್ಳಿಯ ರಾಜಶೇಖರ್ ಹಾಗೂ ಕಾವಲ್ ಭೈರಸಂದ್ರದ ನೇತ್ರಾ ನಾರಾಯಣ್ ಅವರು ಉಪಮೇಯರ್ ಗಾದಿಗಾಗಿ ಲಾಬಿ ನಡೆಸಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳುಕಾಂಗ್ರೆಸ್: ಸೌಮ್ಯಾ ಶಿವಕುಮಾರ್, ಲಾವಣ್ಯ ಗಣೇಶ್ ರೆಡ್ಡಿ, ಲತಾ ರಾಥೋಡ್, ಕೇಶವ ಮೂರ್ತಿ ಹಾಗೂ ಉದಯ್ ಕುಮಾರ್. ಜೆಡಿಎಸ್: ಉಮೇಸಲ್ಮಾ, ಇಮ್ರಾನ್ ಪಾಷಾ, ಐಶ್ವರ್ಯಾ, ಹೇಮಲತಾ ಗೋಪಾಲಯ್ಯ. ಪಕ್ಷೇತರರು: ಆನಂದ್, ಲಕ್ಷ್ಮೀ ನಾರಾಯಣ್(ಗುಂಡಣ್ಣ), ಮುಜಾಹಿದ್ ಪಾಷಾ, ಚಂದ್ರಪ್ಪರೆಡ್ಡಿ.