ಇಲ್ಲೊಂದು ಚಿತ್ರತಂಡ ಇದೇ ಕುಂಬಳಕಾಯಿ ಒಡೆಯುವ ಪದ್ದತಿಯನ್ನು ವಿಭಿನ್ನವಾಗಿ ಆಚರಿಸಿ ಸುದ್ದಿಯಾಗಿದೆ. “ಸ್ಟಾಲ್’ ಎನ್ನುವ ಹೊಸಬರ ಚಿತ್ರದ ಚಿತ್ರೀಕರಣದ ಕೊನೆದಿನ ಬರೋಬ್ಬರಿ 16 ಕೆ.ಜಿ ತೂಕದ ಕುಂಬಳಕಾಯಿಯನ್ನು ಚಿತ್ರತಂಡದ ಇಬ್ಬರು ಸೇರಿಕೊಂಡು ಒಡೆದು ಚಿತ್ರೀಕರಣಕ್ಕೆ ಅಂತ್ಯ ಹಾಡಲಾಯಿತು.
ಇಂಥದ್ದೊಂದು ವಿಭಿನ್ನ ರೀತಿಯಲ್ಲಿ ಶೂಟಿಂಗ್ ಮುಗಿಸಿದ್ದರ ಬಗ್ಗೆ ಮಾತನಾಡುವ ಚಿತ್ರದ ನಿರ್ಮಾಪಕಿ ಶಾಲಿನಿ ಎಂ, “ನಮ್ಮ ಚಿತ್ರದ ಟೈಟಲ್ ವಿಭಿನ್ನವಾಗಿದೆ. ಹಾಗೆಯೇ ಸಿನಿಮಾದ ಶೂಟಿಂಗ್ ಕೊನೆದಿನ ಕೂಡ ಏನಾದ್ರೂ ಹೊಸ ರೀತಿ ಪ್ರಯೋಗ ಮಾಡಬೇಕೆಂಬ ಯೋಚನೆ ಇತ್ತು.
ಇದನ್ನೂ ಓದಿ:ವಿನೋದ್ ಕಣ್ಣಲ್ಲಿ ಶ್ಯಾಡೋ ಕನಸು : ಆ್ಯಕ್ಷನ್ ಹೀರೋನ ಫ್ಯಾಮಿಲಿ ಎಂಟರ್‌ಟೈನರ್
ಹಾಗಾಗಿ ಇಲ್ಲಿಯವರೆಗೂ ಅನೇಕರು ಕಣ್ಣಾರೆ ಕಂಡಿರದ ಬೃಹದಾಕಾರದ ಕುಂಬಳಕಾಯಿ ಒಡೆಯೋಣ ಅಂಥ ಚಿತ್ರತಂಡದೊಂದಿಗೆ ಚರ್ಚಿಸಲಾಯಿತು. ಕೊನೆಗೆ ಎಲ್ಲಾ ಕಡೆಗಳಲ್ಲಿ ಹುಡುಕಿದ ಮೇಲೆ ಹೊಸದುರ್ಗದ ರೈತರೊಬ್ಬರು ಬೆಳೆದ ಅಂಥದ್ದೊಂದು ಕುಂಬಳಕಾಯಿ ಸಿಕ್ಕಿತು. ಅದನ್ನು ತಂದು ಶೂಟಿಂಗ್ ಸೆಟ್‌ನಲ್ಲಿ ಒಡೆಯುವ ಮೂಲಕ ಶೂಟಿಂಗ್ ಮುಗಿಸಿದ್ದೇವೆ’ ಎನ್ನುತ್ತಾರೆ.