Advertisement

ಮನೆಯ ಅಂದ ಹೆಚ್ಚಿಸುವ ಮೆಟ್ಟಿಲು

09:41 PM Oct 04, 2019 | mahesh |

ಮನೆಯನ್ನು ಅಂದಗೊಳಿಸಬೇಕು, ಆಕರ್ಷಕವಾಗಿ ಮತ್ತು ವಿನೂತನವಾಗಿ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಅದಕ್ಕಾಗಿ ಸಾಕಷ್ಟು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಾರೆ. ಮನೆ ಸುಂದರವಾಗಿರಬೇಕಾದರೆ ಮನೆಯ ಪ್ರತಿಯೊಂದು ವಿಷಯಗಳತ್ತವೂ ಆಸಕ್ತಿ ವಹಿಸಬೇಕು. ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ.

Advertisement

ಮನೆಯ ಮುಂದಿರುವ ನಾವು ಬಳಸುವ ಮನೆಯ ಮೆಟ್ಟಿಲು ಕೂಡ ಮನೆಯ ಅಂದವನ್ನು ನಿರ್ಧರಿಸುತ್ತವೆ. ಬಳಕೆ ಮಾಡುತ್ತಾರೆಯೇ ಹೊರತು ಮೆಟ್ಟಿಲಿಗಳ ಮೂಲಕ ಮನೆಯ ಅಂದ ಹೆಚ್ಚಿಸುವತ್ತ ಯೋಚಿಸುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಅದು ನಿರ್ಲಕ್ಷ್ಯಕ್ಕೊಳಗಾಗುತ್ತದೆ. ಮೆಟ್ಟಿಲನ್ನು ಸುಂದರವಾಗಿ, ಕ್ರಿಯಾಶೀಲವಾಗಿ ಮಾಡುವುದರಿಂದ ಮನೆಯ ಸೌಂದರ್ಯ ಖಂಡಿತವಾಗಿಯೂ ಹೆಚ್ಚಾಗುತ್ತದೆ.

ಮನೆ ಕಟ್ಟುವಾಗಲೇ ಮೆಟ್ಟಿಲುಗಳನ್ನು ಹೆಚ್ಚು ಕ್ರಿಯಾತ್ಮಕವಾಗಿ ನಿರ್ಮಿಸುವುದು ಮತ್ತು ನಿರ್ಮಿಸಿರುವ ಮನೆಯ ಮೆಟ್ಟಿಲುಗಳನ್ನು ಬಣ್ಣ, ಅಲಂಕಾರಗಳ ಮೂಲಕ ಅಂದಗೊಳಿಸುವುದು. ಈಗಾಗಲೇ ನಿರ್ಮಿಸಿರುವ ಮನೆಗಳಲ್ಲಿ ಮೆಟ್ಟಿಲುಗಳನ್ನು ಅಲಂಕಾರ, ಬಣ್ಣಗಳ ಮೂಲಕ ಅಂದಗೊಳಿಸಬಹುದು.

1 ಮೆಟ್ಟಿಲುಗಳಲ್ಲಿ ಪೈಂಟಿಂಗ್‌
ಹೆಚ್ಚಿನ ಸಂದರ್ಭಗಳಲ್ಲಿ ಮನೆಗಳಲ್ಲಿ ಗೋಡೆಗಳನ್ನು ಚಿತ್ರ ಬರೆಯುವುದಕ್ಕಾಗಿ ಬಳಸುತ್ತಾರೆ. ಅದರ ಬದಲು ಮೆಟ್ಟಲುಗಳಲ್ಲಿ ಪೈಂಟಿಂಗ್‌ ಮಾಡಬಹುದು. ಇದರಿಂದ ಮೆಟ್ಟಿಲುಗಳು ಖಾಲಿ ಅನಿಸುವುದಿಲ್ಲ.

2 ಬಣ್ಣಗಳ ಆಯ್ಕೆ
ಮೆಟ್ಟಿಲುಗಳಿಗೆ ಬಣ್ಣಗಳ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಕಪ್ಪು ಮತ್ತು ಬಿಳಿ ಬಣ್ಣ ಯಾವತ್ತೂ ಮಹತ್ವ ಕಳೆದುಕೊಳ್ಳದ ಬಣ್ಣ. ಆದ್ದರಿಂದ ಕಪ್ಪು ಮತ್ತು ಬಿಳಿಬಣ್ಣವನ್ನು ಮನೆಯ ಮೆಟ್ಟಿಲುಗಳಿಗೆ ಬಳಸಬಹುದು.

Advertisement

3 ಕೋಸ್ಟಲ್‌ ಆಟಿಕ್‌
ಕೋಸ್ಟಲ್‌ ಆಟಿಕ್‌ ಅಥವಾ ಪಾಸ್ಟಲ್‌ ಶೇಡ್‌ ಮೂಲಕ ಮನೆಯ ಮೆಟ್ಟಿಲುಗಳನ್ನು ಅಂದಗೊಳಿಸಬಹುದು. ನಿಮಗೆ ಬೇಕಾದ, ಮನೆಯ ಬಣ್ಣಕ್ಕೆ ಹೊಂದಿಕೊಂಡ ಕೋಸ್ಟಲ್‌ ಆಟಿಕ್‌ ಬಳಸಿ ಮನೆಯನ್ನು ಅಂದಗೊಳಿಸಬಹುದು.

4 ಪ್ಲೋರಲ್‌ ವಾಲ್‌ಪೇಪರ್‌
ಹೂವಿನ ವಾಲ್‌ಪೇಪರ್‌ಗಳನ್ನು ಬಳಸಿ ಮನೆಯ ಮೆಟ್ಟಿಲಿಗಳನ್ನು ಅಂದಗೊಳಿಸಬಹುದು. ಇದು ಮನೆಯನ್ನು ಆಕರ್ಷಕಗೊಳಿಸುತ್ತದೆ.

ಮನೆ ನಿರ್ಮಿಸುವಾಗಲೇ ಮನೆಯ ಮೆಟ್ಟಲಿಗಳು ಹೇಗಿರಬೇಕೆಂಬುದನ್ನು ತಿಳಿದು ನಿರ್ಮಿಸಿದರೆ ಮನೆಯ ಅಂದ ಇನ್ನಷ್ಟೂ ಹೆಚ್ಚುತ್ತದೆ. ಮೆಟ್ಟಿಲುಗಳನ್ನು ಹಲವು ವಿಧಗಳಲ್ಲಿ ನಿರ್ಮಿಸಲು ಸಾಧ್ಯ.

-  ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next