Advertisement

ಡಾ| ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಮೊದಲ ಲಸಿಕೆ ಹಾಕಿಸಿಕೊಂಡ ನರ್ಸಿಂಗ್‌ ಸಿಬ್ಬಂಧಿ ಶೋಭಾ

04:17 PM Jan 16, 2021 | Team Udayavani |
ಉಡುಪಿ : ಡಾ| ಟಿಎಂ ಪೈ ಆಸ್ಪತ್ರೆಯಲ್ಲಿ ಮೊದಲ ಕೋವಿಡ್‌ ಲಸಿಕೆಯನ್ನು ನರ್ಸಿಂಗ್‌ ಸಿಬಂದಿ ಶೋಭಾ ಅವರು ಹಾಕಿಸಿಕೊಂಡರು.ನಂತರ ಮಾತನಾಡಿದ ಅವರು ಕಳೆದೊಂದು 9 ತಿಂಗಳಿನಿಂದ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳನ್ನು ನೋಡಿಕೊಳ್ಳುತ್ತಿದ್ದೇವೆ. ರೋಗಿಗಳ ನೋವು ಬಹಳ ಹತ್ತಿರದಿಂದ ಕಂಡಿದ್ದೇವೆ. ಕೋವಿಡ್‌ ಲಸಿಕೆ ಕೋವಿಡ್‌ನಿಂದ ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಲಸಿಕೆ ತೆಗೆದುಕೊಂಡು ಅರ್ಧ ಗಂಟೆ ವಿಶ್ರಾಂತಿ ಪಡೆದುಕೊಂಡಿದ್ದೇನೆ. ಇದೀಗ ಮತ್ತೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next