Advertisement

5.20 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಕಾಮಗಾರಿಗೆ ಚಾಲನೆ

04:52 PM Sep 19, 2022 | Team Udayavani |

ಆಳಂದ: ಬರುವ ದಿನಗಳಲ್ಲಿ ಅಮರ್ಜಾ ಅಣೆಕಟ್ಟೆ ಪ್ರವಾಸೋದ್ಯಮ ತಾಣವಾಗಿಸಿ ಶಿವನ ಪ್ರತಿಮೆ ಸ್ಥಾಪನೆ ಮತ್ತು ಪಟ್ಟಣದ ಹಳೆ ಚೆಕ್‌ ಪೋಸ್ಟ್‌ ಸ್ಥಳದಲ್ಲಿ ಸರ್ದಾರ ವಲ್ಲಾಭಭಾಯ್‌ ಪಟೇಲರ ಪ್ರತಿಮೆ ಸ್ಥಾಪನೆ ಕೈಗೊಳ್ಳಲಾಗುವುದು ಎಂದು ಶಾಸಕ ಸುಭಾಷ ಗುತ್ತೇದಾರ ಪ್ರಕಟಿಸಿದರು.

Advertisement

ಪಟ್ಟಣದ ಮಟಕಿ ರಸ್ತೆಯ ಸರ್ಕಾರಿ ಆಸ್ಪತ್ರೆ ಬಳಿಯ ತಾಲೂಕು ಸಾರ್ವಜನಿಕ ಕ್ರೀಡಾಂಗಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯ 2.20ಕೋಟಿ ರೂ. ಹಾಗೂ ಕ್ರೀಡಾ ಇಲಾಖೆಯ ಮೂರು ಕೋಟಿ ಸೇರಿ ಒಟ್ಟು 5.20ಕೋಟಿ ರೂ. ವೆಚ್ಚದ ಅನುದಾನದಲ್ಲಿ ಸುಸಜ್ಜಿತ ಸಾರ್ವಜನಿಕ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಇಂತ ಎಲ್ಲ ಕೆಲಸಗಳಿಗೆ ಮುಖ್ಯಮಂತ್ರಿಗಳು ಹಾಗೂ ಕೆಕೆಆರ್‌ಡಿಬಿಯಿಂದ ನಿರೀಕ್ಷೆ ಮೀರಿ
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ದೊರೆಯುತ್ತಿದೆ.

ಈ ಅನುದಾನದಡಿ ಕೈಗೆತ್ತಿಕೊಂಡ ಶಾಲೆ, ಕಾಲೇಜುಗಳ ಕಟ್ಟಡ, ರಸ್ತೆ ನಿರ್ಮಾಣ, ಸಮುದಾಯ ಭವನ ದೇವಸ್ಥಾನ, ಉದ್ಯಾನವನ, ನೀರಾವರಿಯಂತ ಕಾಮಗಾರಿಗಳಲ್ಲಿ ಯಾವುದೇ ರಾಜೀಮಾಡಿಕೊಳ್ಳದೇ ಗುಣಮಟ್ಟತೆಗೆ ಒತ್ತು ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಕ್ರೀಡಾಂಗಣಕ್ಕೆ 2.20ಕೋಟಿ ರೂ. ಅನುದಾನದಲ್ಲಿ ಜಿಪಂಗೆ ಕಾಮಗಾರಿ ವಹಿಸಿದ್ದ ವಿಶ್ರಾಂತಿಕೋಣೆ, ಆಡಳಿತ ಕಚೇರಿ, ಕಂಟ್ರೋಲ್‌ ರೂಮ್‌ ಸೇರಿ ಆವರಣ ಗೋಡೆ ಕಾಮಗಾರಿ ನಡೆಯಲಿದೆ. ಸಾಲದ್ದಕ್ಕೆ ಕ್ರೀಡಾ ಇಲಾಖೆಯ 3ಕೋಟಿ ರೂ. ವೆಚ್ಚದ ಕಾಮಗಾರಿಯ ಕ್ರಿಯಾ ಯೋಜನೆಗೆ ಸೂಚಿಸಿದ್ದು, ಇದರಲ್ಲಿ ಹೊರಾಂಗಣ ಜಿಮ್‌, ವಾಯುವಿಹಾರ, ಮಕ್ಕಳ ಪಾರ್ಕ ಮತ್ತು ಕ್ರೀಡಾ ಕುಳಿತು ನೋಡುವ ಪಾಟುಣಿಕೆಯಂತ ಸುಸಜ್ಜಿತ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಪೊಲೀಸ್‌ ಮೈದಾನದಲ್ಲಿ 1.85ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ಮತ್ತು ಜಿಮ್‌, ಪಾರ್ಕ್‌ ನಡೆಯಲಿದೆ. ಇದಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ತಾಲೂಕಿನ ಜೀವನಾಡಿ ಅಮರ್ಜಾ ಅಣೆಕಟ್ಟೆ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಇಲಾಖೆಯಿಂದ 10ಕೋಟಿ ರೂ. ನೀಡಲಾಗಿದೆ. ಅಲ್ಲದೇ ಕೆಕೆಆರ್‌ಡಿಬಿಯಿಂದ ಹೊಸದಾಗಿ ಮತ್ತೆ 10ಕೋಟಿ ರೂ. ಸೇರಿ 20ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ, ಬೋಟಿಂಗ್‌ ಕೆಲಸ ಮತ್ತು 5 ಕೋಟಿ ರೂ. ಗಳಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ ಜೊತೆಗೆ ಶಿವನ ಪ್ರತಿಮೆ ಸ್ಥಾಪಿಸಲು ಒಟ್ಟು 25 ಕೋಟಿಯಲ್ಲಿ ಅಣೆಕಟ್ಟೆಯಲ್ಲಿ ಕಾಮಗಾರಿಗೆ ಖರ್ಚು ಮಾಡಲಾಗುತ್ತಿದೆ ಎಂದು ವಿವರಿಸಿದರು.

Advertisement

ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಜಿಪಂ ಸಹಾಯಕ ಇಂಜಿನಿಯರ್‌ ಲಿಂಗರಾಜ ಪೂಜಾರಿ, ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ, ಸಂತೋಷ ಹೂಗಾರ, ಆಸ್ಮಿàತಾ ಚಿಟಗುಪ್ಪಕರ್‌, ಮುಖಂಡ ಸಿದ್ಧು ಪೂಜಾರಿ, ರಾಜು ಷಣ್ಮೂಖ, ಮಿರು, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮಹಾಂತಪ್ಪ ಹಾಳಮಳಿ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next