ನವದೆಹಲಿ: ಭಾರತ ತಂಡದ ಸ್ಟಾರ್ ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ರಾಯ್ ಬರೇಲಿಯಲ್ಲಿ ತಮ್ಮ ಹೆಸರಿನ ಕ್ರೀಡಾಂಗಣವನ್ನು ಹೊಂದಿರುವ ಮೊದಲ ಮಹಿಳೆಯಾಗಿದ್ದಾರೆ.
ಎಂಸಿಎಫ್ ರಾಯ್ ಬರೇಲಿ ಹಾಕಿ ಸ್ಟೇಡಿಯಂ ಅನ್ನು ‘ರಾಣಿ ಗರ್ಲ್ಸ್ ಹಾಕಿ ಟರ್ಫ್ʼ ಎಂದು ಮರುನಾಮಕರಣ ಮಾಡಲಾಗಿದೆ. ರಾಣಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಆಟಗಾರರೊಂದಿಗೆ ಸಂವಹನ ನಡೆಸುತ್ತಿರುವ ಮತ್ತು ಇತರ ಸಿಬಂದಿ ಸದಸ್ಯರೊಂದಿಗೆ ಕ್ರೀಡಾಂಗಣವನ್ನು ಉದ್ಘಾಟಿಸುತ್ತಿರುವ ಚಿತ್ರಗಳನ್ನು ಹಾಕಿದ್ದಾರೆ.
ಇದೊಂದು ನನ್ನ ಪಾಲಿನ ಹೆಮ್ಮೆಯ ಮತ್ತು ಭಾವನಾತ್ಮಕ ಕ್ಷಣವಾಗಿದೆ. ನನ್ನ ಹೆಸರಿನ ಕ್ರೀಡಾಂಗಣವಿರುವುದು ಮತ್ತು ಈ ಗೌರವಕ್ಕೆ ಪಾತ್ರರಾದ ಮೊದಲ ಮಹಿಳೆ ಎಂಬ ಸಂತಸ ನನನಾಗಿದೆ. ಇದು ಭವಿಷ್ಯದ ಮಹಿಳಾ ಹಾಕಿ ತಾರೆಯರಿಗೆ ಸ್ಫೂರ್ತಿಯಾಗಲಿ ಎಂದವರು ಹೇಳಿದರು. 28ರ ಹರೆಯದ ರಾಂಪಾಲ್ ಟೋಕಿಯೊ ಒಲಿಂಪಿಕ್ಸ್ ಬಳಿಕ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರು ವಿಶ್ವಕಪ್ ಮತ್ತು 2022ರ ಕಾಮನ್‌ವೆಲ್ತ್ ಗೇಮ್ಸ್‌ನಿಂದ ದೂರ ಉಳಿದಿದ್ದರು. ಅವರು 2021-22ರ ಎಫ್ಐಎಚ್ ವನಿತಾ ಸಾಕಿ ಪ್ರೊ ಲೀಗ್‌ನಲ್ಲಿ ಆಡಿದ ಬಳಿಕ ಇದೀಗ ತಂಡಕ್ಕೆ ಮರಳುತ್ತಿದ್ದಾರೆ.