Advertisement

ಕ್ರೀಡಾಂಗಣ ನಿರ್ಮಾಣ-ಕ್ರೀಡಾಪಟುಗಳಿಗೆ ಸೌಕರ್ಯ

08:01 AM Jan 17, 2019 | Team Udayavani |

ಬೀದರ: ಜಿಲ್ಲೆಯ ಕ್ರೀಡಾಪಟುಗಳಿಗಾಗಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿ, ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುವುದಾಗಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಭರವಸೆ ನಿಡಿದರು.

Advertisement

ನಗರದ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ 2018-19ನೇ ಸಾಲಿನ ಜಿಲ್ಲಾ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಬೀದರನಲ್ಲಿ ಅದ್ಭುತವಾದ ಕ್ರೀಡಾ ಪ್ರತಿಭೆಗಳಿದ್ದು, ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಹಿನ್ನಡೆ ಅನುಭವಿಸುತ್ತಿದ್ದಾರೆ. ಕ್ರೀಡಾ ಅಭಿಮಾನಿಗಳಿಗಾಗಿ ಸೂಕ್ತ ಕ್ರೀಡಾ ಸೌಕರ್ಯಗಳನ್ನು ಒದಗಿಸುವ ಮೂಲಕ ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಾಧನೆ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಪ್ರತಿಯೊಬ್ಬರು ಮಾನಸಿಕವಾಗಿ, ಶಾರೀರಿಕವಾಗಿ ಸದೃಢವಾಗಿರಬೇಕಾದರೆ ಕ್ರೀಡೆ ಮುಖ್ಯವಾಗಿದೆ. ಸರಕಾರಿ ನೌಕರರರು ಪ್ರತಿನಿತ್ಯ ಕಚೇರಿಗಳಲ್ಲಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಒತ್ತಡದ ಬದುಕಿನಿಂದ ಹೊರಬರಬೇಕಾದರೆ, ನಾವು ಕ್ರೀಡೆಗಳ ಮೊರೆ ಹೋಗಬೇಕಾಗುತ್ತದೆ. ಇಂದು ಮಾನವ ಒತ್ತಡದ ಬದುಕಿನಲ್ಲಿ ನಾನಾ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದು, ಪ್ರತಿಯೊಬ್ಬರು ಮಾತ್ರೆ ತೆಗೆದುಕೊಂಡು ಜೀವನ ನಡೆಸುವ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಮುಕ್ತಿ ನೀಡಬೇಕಾದರೆ ಪ್ರತಿಯೊಬ್ಬರು ಯೋಗ ಮತ್ತು ಕ್ರೀಡೆಗಳಲ್ಲಿ ಪ್ರತಿನಿತ್ಯ ಭಾಗವಹಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸರ್ಕಾರಿ ನೌಕರರಿಗೆ ವಿವಿಧ ರೀತಿಯ ಆಟೋಟಗಳು ನಡೆದವು. ಕಬಡ್ಡಿ, ವಾಲಿಬಾಲ್‌, ಚೆಸ್‌, ಕೇರಂ, ಬಾಸ್ಕೇಟ್ ಬಾಲ್‌, ಬ್ಯಾಡ್‌ಮಿಂಟನ್‌, ಗುಂಡು ಎಸೆತ, ಕರಕುಶಲ ಕಲೆಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿದವು.

Advertisement

ಮುಖ್ಯ ಗುರು ಶಾಂತಕುಮಾರ, ರಾಜಕುಮಾರ ಮಾಳಗೆ, ಯೋಗೇಂದ್ರ ಯದಲಾಪುರೆ, ರಾಜಕುಮಾರ ಪಾಟೀಲ, ರಮೇಶ ಕೆ.ಮಠಪತಿ, ಶಿವಾಜಿ ಚಿಟಗೇರೆ, ಪೀಟರ್‌, ಅಮೃತ ಎನ್‌. ಅಷ್ಟಗಿ, ರಾಜಶೇಖರ ಮಂಗಲಗಿ, ಬಸವರಾಜ ಜೆಕ್ಕಾ, ಸೋಹೆಲ ಅಹ್ಮದ, ಪ್ರಭುಲಿಂಗ ತೂಗಾಂವಕರ್‌, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸರೆಡ್ಡಿ, ನಾಸೀರ್‌, ಶ್ರೀಪತಿ ಮೇತ್ರೆ, ಶಿವಕುಮಾರ ಗಡ್ಡೆ, ಶಿವಶಂಕರ ವಡ್ಡಿ, ಶಿವಕುಮಾರ ಗೌರೆ ಸೇರಿದಂತೆ ಅನೇಕರು ಇದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next