Advertisement

ಸಹಕಾರ ಕ್ಷೇತ್ರದ ಮೂಲಕ ಆತ್ಮನಿರ್ಭರ ಗುರಿ ಸಾಧನೆ

12:36 PM Nov 13, 2020 | Suhan S |

ಬೆಂಗಳೂರು: ರೈತರಿಗೆ, ಹೈನುಗಾರರಿಗೆ, ಮೀನುಗಾರರಿಗೆ, ಸಣ್ಣಪುಟ್ಟ ಕೆಲಸಗಳಲ್ಲಿ ನಿರತರಾಗಿರುವವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಅಗತ್ಯವಿದೆ. “ಆತ್ಮನಿರ್ಭರ ಭಾರತ’ ಅಡಿಯಲ್ಲಿ ಲಭ್ಯವಾದ ಹಣ ಸೇರಿದಂತೆ 39300 ಕೋಟಿ ರೂ. ಗಳನ್ನು ಸಂಗ್ರಹಿಸಿ ವಿವಿಧ ಕೃಷಿ ಚಟುವಟಿಕೆಗಳಿಗೆ ಸೌಲಭ್ಯ ಒದಗಿಸಲು ರಾಜ್ಯದ 4 ವಿಭಾಗಗಳಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದ್ದಾರೆ. 67ನೇ ರಾಷ್ಟ್ರೀಯ ಸಹಕಾರ ಸಪ್ತಾಹದ ಹಿನ್ನೆಲೆಯಲ್ಲಿ ಸಂದರ್ಶನದಲ್ಲಿ ಅವರು ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

Advertisement

 ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನಿಮಗೆ ಅದೇ ಕ್ಷೇತ್ರದ ಸಚಿವ ಸ್ಥಾನ ದೊರೆತಿದೆ. ಏನು ಗುರಿ ಇಟ್ಟುಕೊಂಡಿದ್ದೀರಾ? :

43 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು, 2 ಕೋಟಿ 30 ಲಕ್ಷಕ್ಕೂ ಹೆಚ್ಚು ಸದಸ್ಯರಿಂದ ಕೂಡಿರುವ ನಮ್ಮ ರಾಜ್ಯದ ಸಹಕಾರಿ ವ್ಯವಸ್ಥೆಯನ್ನು ಸಮಗ್ರ ಬೆಳವಣಿಗೆ ಯತ್ತ ಕೊಂಡೊಯ್ಯಬೇಕು ಎಂಬ ಗುರಿಯಿದೆ.

ರಾಜ್ಯದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಹಕಾರ ಸಚಿವರಾಗಿ ಏನು ಮಾಡಿದ್ದೀರಿ?  :

ಕೋವಿಡ್ ಸೋಂಕಿನ ಸಂದರ್ಭದಲ್ಲಿ ಉ  ನ್ನಗಳ ಸಾಗಾಟ ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಮಸ್ಯೆ ಯನ್ನು ಕೈಗೆತ್ತಿಕೊಂಡು ಕೃಷಿ ಮಾರುಕಟ್ಟೆ ಸಮಿತಿಗಳ ಕಾರ್ಯದ ಬಗ್ಗೆ ಗಮನಹರಿಸಿ, ರೈತರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಗಳನ್ನು ಕಂಡುಕೊಳ್ಳಲಾಯಿತು. ರೈತರಿಗೆ ಅವರ ಬೆಳೆಗೆ ಗರಿಷ್ಟ ಬೆಲೆ ಸಿಗುವಂತೆ ಮಾಡಲು ಅವರ ಉತ್ಪನ್ನವನ್ನು ಎಪಿಎಂಸಿಯಲ್ಲಿ, ಅಗತ್ಯವೆನಿಸಿದರೆ ಹೊರಗಡೆಯೂ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡ ಲಾಯಿತು.

Advertisement

ಕೋವಿಡ್ ಸಂದರ್ಭದಲ್ಲಿ ನಿಮ್ಮ ಇಲಾಖೆ ಯಾವ ರೀತಿ ಸ್ಪಂದಿಸಿದೆ ? :

ಎಪಿಎಂಸಿ, ಅಪೆಕ್ಸ್‌ ಸಹಕಾರ ಸಂಸ್ಥೆಗಳು ಮತ್ತಿತರ ಸಂಸ್ಥೆಗಳಿಂದ 53 ಕೋಟಿ ರೂ. ಸಂಗ್ರಹಿಸಿ ಕೋವಿಡ್ ಪರಿಹಾರ ನಿಧಿಗೆ ನೀಡಲಾಯಿತು. ಅದರ ಜತೆಗೆ ಕೋವಿಡ್ ಸಂದರ್ಭದಲ್ಲಿ ನಿಸ್ವಾರ್ಥ ಮನೋಭಾವ ದಿಂದ ಸೇವೆ ಸಲ್ಲಿಸುತ್ತಿದ್ದ ಪ್ರತಿ ಆಶಾ ಕಾರ್ಯಕರ್ತೆಗೆ 3000 ರೂ. ನಂತೆ 42524 ಮಹಿಳೆಯರಿಗೆ 12.75 ಕೋಟಿ ರೂ. ನೀಡಲಾಯಿತು.

ಆತ್ಮನಿರ್ಭರ ಭಾರತ” ಕಲ್ಪನೆಯಡಿ ಸಾಲ ವಿತರಿಸುವ ಆರ್ಥಿಕ ಸಂಕಲ್ಪ ಕಾರ್ಯಕ್ರಮ ಯಶಸ್ವಿಯಾಗಿದೆಯಾ? :

ಶೇಕಡ ನೂರರಷ್ಟು ಯಶಸ್ವಿಯಾಗಿದೆ.

ಬಹುತೇಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು ಗಳು ನಷ್ಟದಲ್ಲಿವೆ. ಬಲವರ್ಧನೆಗೆ ಏನು ಕ್ರಮ ಕೈಗೊಂಡಿದ್ದೀರಿ? :

ನಾನು ಸಚಿವನಾಗಿ ಬಹುತೇಕ ಬ್ಯಾಂಕುಗಳಿಗೆ ಭೇಟಿ ನೀಡಿದ್ದೇನೆ. ಅವರ ಕಾರ್ಯಕ್ಷಮತೆಯನ್ನು ಅವಲೋಕಿಸಿದ್ದೇನೆ. ಅಗತ್ಯ ಸೂಚನೆಗಳನ್ನು ನೀಡಿದ್ದೇನೆ. ಕೆಲವೇ ದಿನಗಳಲ್ಲಿ ಎಲ್ಲ ಜಿಲ್ಲಾ ಸಹಕಾರ ಬ್ಯಾಂಕುಗಳು ರೈತರ ಪೂರ್ಣ ಅಗತ್ಯಗಳನ್ನು ಪೂರೈಸುವಂತೆ ಮಾಡಲು ಪ್ರಯತ್ನಿಸುತ್ತೇನೆ.

ಸಹಕಾರ ಸಪ್ತಾಹದ ಸಂದರ್ಭದಲ್ಲಿ ಸಹಕಾರಿಗಳಿಗೆ ಸಂದೇಶ ಏನು? :

ಸಹಕಾರ ತತ್ವದಲ್ಲಿ ನಂಬಿಕೆ ಇರಿಸಿಕೊಂಡು, ಆಚರಣೆಯಲ್ಲಿ ಬದ್ಧತೆ ಬೆಳೆಸಿಕೊಂಡು ಕೆಲಸ ಮಾಡಲಿ. ಪ್ರಸ್ತುತ ಸಂದರ್ಭದಲ್ಲಿ ಕೋವಿಡ್ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಕೈಗಳನ್ನು ಸ್ವತ್ಛವಾಗಿಟ್ಟುಕೊಂಡು ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಿ.

 

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next