Advertisement

ಬಳ್ಳಾರಿ: ರಾಜ್ಯದಲ್ಲಿ ರಾಜಕೀಯ ಸೌಲಭ್ಯಗಳನ್ನೇ ಕಾಣದ ಹಲವಾರು ಜಾತಿಗಳಿದ್ದರೂ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಹೊಂದಿರುವ ವೀರಶೈವ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಾಡಿದೆ. ಅಂತಹದ್ದರಲ್ಲಿ ಹಿಂದುಳಿದ ಕುರುಬ ಸಮುದಾಯ ಎಸ್ಟಿ ಮೀಸಲು ಕೇಳುವುದನ್ನು ರಾಜಕೀಯ ಎನ್ನುವುದು ಸರಿಯೇ? ಎಂದು ಮಾಜಿ ಸಚಿವ, ಹಾಲಿ ವಿಧಾನಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಟಿ ಮೀಸಲಾತಿ ಕೇಳುವುದು ಕುರುಬ ಸಮುದಾಯದ ಹಕ್ಕಾಗಿದೆ. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ. ಹಿಂದುಳಿದ ಆಯೋಗದಿಂದ ಶಿಫಾರಸ್ಸು ಮಾಡದೇ ಇದ್ದರೂ ರಾಜ್ಯದಲ್ಲಿ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆಅಭಿವೃದ್ಧಿ ನಿಗಮ ರಚನೆಯಾಗಿದೆ. ಆ ಸಮುದಾಯದಿಂದ ಈವರೆಗೆ ಏಳುಜನರು ರಾಜ್ಯದ ಮುಖ್ಯಮಂತ್ರಿಗಳು ಆಗಿದ್ದಾರೆ.ರಾಜಕೀಯವಾಗಿ ಇಷ್ಟೆಲ್ಲ ಅಭಿವೃದ್ಧಿಯಾಗಿರುವವೀರಶೈವ ಸಮುದಾಯಕ್ಕೆ ಅಭಿವೃದ್ಧಿ ನಿಗಮ ರಚನೆಯಾದರೆ ಅದು ರಾಜಕೀಯ ಅಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅನೇಕ ತಳ ಸಮುದಾಯದ ಜಾತಿಗಳಿಗೆ ಈವರೆಗೂ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಅಂಥ ಸಮುದಾಯಗಳಿಗೆ ನಿಗಮ ಏಕೆ ಮಾಡಲಿಲ್ಲ. ಎಸ್‌ಟಿಮೀಸಲಾತಿಗಾಗಿ ನಾವು ಹೋರಾಟ ಮಾಡುವುದು ರಾಜಕೀಯವಾದರೆ, ಬೇರೆಯವರು ಮಾಡುವುದು ಏನು? ಎಂದು ಮರು ಪ್ರಶ್ನಿಸಿದರು.ಕುರುಬ ಸಮುದಾಯ ಬ್ರಿಟಿಷ ಆಡಳಿತದಲ್ಲೇ ಎಸ್ಟಿಪಟ್ಟಿಯಲ್ಲಿ ಸೇರಿಸಿತ್ತು. ಮಾಜಿ ಸಿಎಂ ದಿ. ದೇವರಾಜ್‌ಅರಸು ಅವರ ಆಡಳಿತಾವಧಿ ಯಲ್ಲಿ ಎಸ್ಟಿಗೆ ಸೇರಿಸಲುಕೇಂದ್ರಕ್ಕೆ ಶಿಫಾರಸ್ಸು ಮಾಡಿ, ಲೋಕಸಭೆಯಲ್ಲಿ ಚರ್ಚಿಸಲಾಯಿತಾದರೂ ಅದು ಕಾರ್ಯರೂಪಪಡೆಯಲಿಲ್ಲ. ಕುರುಬ ಪರ್ಯಾಯ ಪದಗಳಾದ ತಮಿಳುನಾಡಿನ ಕುರುಂಬ, ಆಂಧ್ರದ ಕುರುಮ, ಕಾಡು ಕುರುಬ, ಗೊಂಡ, ರಾಜಗೊಂಡಕ್ಕೆ ಎಸ್‌ಟಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಕುರುಬ ಪದವನ್ನು ಮಾತ್ರ ಕೈಬಿಡಲಾಗಿದೆ. ಅದಕ್ಕಾಗಿ ದಶಕಗಳಿಂದ ಹೋರಾಟನಡೆಸುತ್ತಲೇ ಬಂದಿದ್ದು, ಇದೀಗ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದವರು ವಿವರಿಸಿದರು.

ಹಾಲುಮತ ಸಾಂಸ್ಕೃತಿಕ ವೈಭವ; ತಿಂಥಿಣಿ ಬ್ರಿಡ್ಜ್ ನ ಶ್ರೀ ಹಾಲುಮತ ಕನಕ ಗುರುಪೀಠದ ಸ್ವಾಮೀಜಿ ಕಳೆದ 13 ವರ್ಷಗಳಿಂದ ಹಾಲುಮತ ಸಾಂಸ್ಕೃತಿಕ ವೈಭವ ಸಮಾರಂಭವನ್ನು ಆಯೋಜಿಸುತ್ತಾ ಬಂದಿದ್ದಾರೆ.ಅದೇ ರೀತಿ ಈ ಬಾರಿಯೂ ಜ. 12, 13,14 ರಂದು ಮೂರು ದಿನಗಳ ಕಾಲ ನಡೆಯಲಿದೆ. ಜ. 12ರಂದುಬೀರದೇವರ ಉತ್ಸವ, ಸಮುದಾಯದ ನೂತನಗ್ರಾಪಂ ಸದಸ್ಯರ ಸಮಾವೇಶ ನಡೆಯಲಿದೆ. 13ರಂದುಸುಡುಗಾಡು ಸಿದ್ದರು-ಟಗರು ಜೋಗಿಗಳು ಮತ್ತುಹೆಳವರ ಸಮಾವೇಶ, ಜ. 14ರಂದು ಬೊಮ್ಮಗೊಂಡೇಶ್ವರ-ಸಿದ್ದರಾಮೇಶ್ವರ ಉತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಮಾಜಿಸದಸ್ಯ ಕೆ.ಎಸ್‌.ಎಲ್‌. ಸ್ವಾಮಿ, ಎಸ್‌ಟಿ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಶಾಂತಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎರ್ರೆಗೌಡ, ಪಾಲಿಕೆಮಾಜಿ ಉಪಮೇಯರ್‌ ಬೆಣಕಲ್‌ ಬಸವರಾಜಗೌಡ,ಕೆ.ಮಲ್ಲಿಕಾರ್ಜುನ, ಬಿ.ಎಂ.ಪಾಟೀಲ್‌, ಕುರುಬರ ಸಂಘದ ನಿರ್ದೇಶಕ ಕೆ.ಆರ್‌.ಮಲ್ಲೇಶ್‌ ಕುಮಾರ್‌, ಜೀವೇಶ್ವರಿ ರಾಮಕೃಷ್ಣ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next