Advertisement

ಎಸ್ಟಿ ಮೀಸಲಾತಿ ನಮ್ಮ ಹಕ್ಕು; ರಾಮಲಿಂಗಪ್ಪ

03:29 PM Nov 27, 2020 | Suhan S |

ಹೂವಿನಹಡಗಲಿ: ಪ್ರಸ್ತುತ ಕುರುಬ ಜನಾಂಗದವರಾದ ನಾವು ಎಸ್ಟಿಮೀಸಲಾತಿ ಕೇಳುತ್ತಿರುವುದು ನಮ್ಹಕ್ಕು. ಬದಲಾಗಿ ಸರ್ಕಾರ ಕೊಡುವ  ಭಿಕ್ಷೆಯಲ್ಲ ಎಂದು ಎಸ್ಟಿ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನಕಾರ್ಯದರ್ಶಿ ರಾಮಲಿಂಗಪ್ಪ ಹೇಳಿದರು.

Advertisement

ಪಟ್ಟಣದ ಕನಕ ಸಮುದಾಯ ಭನವದಲ್ಲಿ ತಾಲೂಕು ಕುರುಬಸಮಾಜ ಹಾಗೂ ಎಸ್ಟಿ ಮೀಸಲಾತಿಹೋರಾಟ ಸಮಿತಿ ಹಮ್ಮಿಕೊಂಡಿದ್ದಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರುರಾಜ್ಯದಲ್ಲಿ ಬಹು ಸಂಖ್ಯಾತರಿರುವ ಕುರುಬಸಮಾಜದವರು ಮೂಲತಃಬುಡಕಟ್ಟು ಜನಾಂಗಕ್ಕೆ ಸೇರಿದವರಿದ್ದು ನಿಜವಾದ ಎಸ್‌ಟಿ ಮೀಸಲಾತಿ ಸೌಲಭ್ಯದಿಂದವಂಚಿತರಾಗಿದ್ದೇವೆ. ಈಗಾಗಲೇಈ ಹಿಂದೆ ರಾಜ್ಯದಲ್ಲಿ ನಮ್ಮ ಜನಾಂಗಕ್ಕೆ ಎಸ್‌ಟಿ ಮೀಸಲಾತಿ ಸೌಲಭ್ಯ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಇದನ್ನು ಹಿಂದಕ್ಕೆ ಪಡೆದರು.

ಕಾರಣ ಈಗ ಮೀಸಲಾತಿಸೌಲಭ್ಯ ಪಡೆದುಕೊಳ್ಳಲುನಮ್ಮ ಜನಾಂಗದ ನಾಯಕರುಪಕ್ಷಾತೀತವಾಗಿ ಹೋರಾಟ ಕೈಗೊಂಡಿದ್ದಾರೆ. ಜೊತೆಯಲ್ಲಿ ನಮ್ಮಕಾಗಿನೆಲೆ ಕನಕ ಗುರು ಪೀಠದ ಶ್ರೀಗಳು ನೇತೃತ್ವ ವಹಿಸಿಕೊಂಡಿದ್ದು ನಮಗೆ ನಿಜವಾಗಿ ನ್ಯಾಯ ದೊರಕುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದರು.

ಜಿಲ್ಲಾ ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಧ್ಯಕ್ಷಐಯಾಳ್‌ ತಿಮ್ಮಪ್ಪ ಮಾತನಾಡಿ, ಡಿ.27 ರಂದು ಸಿಂಧನೂರಲ್ಲಿ ನಮ್ಮ ವಿಭಾಗ ಮಟ್ಟದ ಬೃಹತ್‌ ಸಭೆಕರೆಯಲಾಗಿದ್ದು ಸಭೆಯಲ್ಲಿ ನಮ್ಮ ಜನಾಂಗದ ಶಕ್ತಿ ತೋರಿಸಬೇಕಾಗಿದೆ. ಮೀಸಲಾತಿ ಪಡೆದುಕೊಳ್ಳಲು ಯಾವ ಹೋರಾಟಕ್ಕೂ ಸಹ ಸಿದ್ಧ ಎಂದರು.

ಎಸ್‌.ಟಿ ಮೀಸಲಾತಿ ಹೋರಾಟಸಮಿತಿ ರಾಜ್ಯ ನಿರ್ದೇಶಕ ಬಿ.ಹನುಮಂತಪ್ಪ, ವಿಭಾಗದ ಮಟ್ಟದಉಪಾಧ್ಯಕ್ಷ ಎಂ. ಪರಮೇಶ್ವರಪ್ಪ, ರಾಮಾಂಜೀಯ, ಎಸ್‌.ಟಿ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಎಚ್‌. ಮುಂತಾದವರು ಮಾತನಾಡಿ ಎಸ್‌.ಟಿ ಮೀಸಲಾತಿನಮ್ಮ ನಿಜವಾದ ಹಕ್ಕಾಗಿದೆ ಅದನ್ನು ನಾವು ಪಡೆದುಕೊಳ್ಳುವವರೆಗೂನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

Advertisement

ತಾಲೂಕು ಘಕಟದ ಪ್ರಧಾನಕಾರ್ಯದರ್ಶಿ ಗುರುವಿನ ರವೀಂದ್ರ ಸ್ವಾಗತಿಸಿದರು.ಸಂಘಟನಾ ಕಾರ್ಯದರ್ಶಿಚಿದಾನಂದ ನಿರೂಪಿಸಿದರು.ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ, ತಾ.ಪಂಸದಸ್ಯ ಈಟಿ ಲಿಂಗರಾಜು,ಮೈಲಾರಲಿಂಗೇಶ್ವರ ಕಾರ್ಣಿಕದಗೊರವಯ್ಯ ರಾಮಣ್ಣ, ಪುರಸಭೆ ಸದಸ್ಯೆ ಆರ್‌. ನಿರ್ಮಲ ಕುರಿ ಮತ್ತು ಉಣ್ಣೆ ಆಭಿವೃದ್ಧಿ ಸೋಸೈಟಿಅಧ್ಯಕ್ಷ ದುಶ್ಯಂತಪ್ಪ, ಆರ್‌.ಚೈತನ್ಯ, ಶಿವಕುಮಾರ್‌, ಎಸ್‌. ಮಲ್ಲಿಕಾರ್ಜುನ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next