ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ.
ರಸ್ತೆಬದಿಯಲ್ಲಿ ಕುಳಿತು ತಿನಿಸುಗಳು, ಕಾಳುಗಳನ್ನು ಮಾರುವ ವ್ಯಾಪಾರಿ ಅಬ್ದುಲ್ ರೆಹ್ಮಾನ್ (90) ತಮ್ಮ ಅಂತ್ಯಕ್ರಿಯೆಗೆಂದು 1 ಲಕ್ಷ ರೂ. ಕೂಡಿಟ್ಟಿದ್ದರು.
ಕಳ್ಳರು ಅದನ್ನು ಕಳವು ಮಾಡಿದ್ದರಿಂದ ದುಃಖಿತರಾಗಿದ್ದ ರೆಹ್ಮಾನ್‌ಗೆ ಹಿರಿಯ ಜಿಲ್ಲಾ ಎಸ್‌ಪಿ ಸಂದೀಪ್ ಚೌಧರಿ ತಮ್ಮ ಕೈಯಾರೆ 1 ಲಕ್ಷ ರೂ. ಹಣವನ್ನು ನೀಡಿ ಸಾಂತ್ವನ ಹೇಳಿದ್ದಾರೆ.
ಅಬ್ದುಲ್ ರೆಹ್ಮಾನ್ ಶ್ರೀನಗರದ ಬೊಹ್ರಿ ಕಡಲ್ ಪ್ರದೇಶದ ರಸ್ತೆಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು. ಏಕಾಂಗಿಯಾಗಿರುವ ಅವರು ತಮ್ಮ ಅಂತ್ಯಕ್ರಿಯೆಗೆ ಇರಲಿ ಎಂದು 1 ಲಕ್ಷ ರೂ. ಕೂಡಿಟ್ಟು, ಅದನ್ನು ತಮ್ಮೊಂದಿಗೇ ಇಟ್ಟುಕೊಂಡಿದ್ದರು.
ಇದನ್ನೂ ಓದಿ:ಇದು ಪಾರ್ಟಿ ಪೋಸ್ಟರ್ ಅಲ್ಲ.. ಮದುವೆ ಆಮಂತ್ರಣ!
ಈ ವಿಷಯವನ್ನು ತಿಳಿದ ಕಳ್ಳರು ರೆಹ್ಮಾನ್‌ಗೆ ಚೆನ್ನಾಗಿ ಬಾರಿಸಿ ಹಣವನ್ನು ಕದ್ದೊಯ್ದಿದ್ದಾರೆ. ಇಂತಹ ಅಮಾನವೀಯ ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಸಂದೀಪ್ ಚೌಧರಿ ಮಾನವೀಯತೆಯ ಬೆಳಕನ್ನು ಬೀರಿದ್ದಾರೆ.