ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜಾಲತಾಣದ ವಿಳಾಸವನ್ನು ಬದಲಾಯಿಸಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಂದು ಬದಲಾಯಿಸಲಾಗಿದೆ.
ಆದ್ದರಿಂದ ಜಾಲತಾಣದ ವಿಳಾಸ //sslc.karnataka.gov.in ವನ್ನು ಇ-ಆಡಳಿತದ ನೆರವಿನಿಂದ //kseab.karnataka.gov.inಎಂದು ಅಭಿವೃದ್ಧಿಪಡಿಸಲಾಗಿದೆ. ಈ ಜಾಲತಾಣ ಜ.10ರಿಂದಲೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.
ಎಸೆಸೆಲ್ಸಿ ಪರೀಕ್ಷೆಗಳು, ಮಂಡಳಿಯ ಇತರ ಪರೀಕ್ಷೆಗಳು, ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಚಟುವಟಿಕೆಗಳ ಆನ್‌ಲೈನ್ ಕಾರ್ಯಗಳು, ಶಾಲಾ/ಬಿಇಒ ಲಾಗಿನ್ ಸೇರಿ ಇತರ ಸೇವೆಗಳು ಹೊಸ ವಿಳಾಸದಲ್ಲಿ ಲಭ್ಯವಾಗಲಿವೆ.
ಈ ಕುರಿತು ಜಿಲ್ಲಾ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಮುಖ್ಯಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಮಾಹಿತಿ ನೀಡುವಂತೆ ಮಂಡಳಿಯ ನಿರ್ದೇಶಕರು ತಿಳಿಸಿದ್ದಾರೆ.