Advertisement

ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಮೌಲ್ಯಮಾಪನ: ನಿಷೇಧಾಜ್ಞೆೆ

11:17 PM Apr 08, 2019 | sudhir |

ಉಡುಪಿ: ಎಸ್‌.ಎಸ್‌.ಎಲ್‌. ಸಿ. ಪರೀಕ್ಷೆಯ ಮೌಲ್ಯಮಾಪನವು ಎ. 10ರಿಂದ ಪ್ರಾರಂಭವಾಗಿ 10 ದಿನಗಳ ವರೆಗೆ ನಡೆಯಲಿದ್ದು, ಮೌಲ್ಯ ಮಾಪನ ಮುಗಿದು ಪ್ರಶ್ನೋತ್ತರ ಪತ್ರಿಕೆಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀûಾ ಮಂಡಳಿ ಮಲ್ಲೇಶ್ವರ ಬೆಂಗಳೂರು ಇಲ್ಲಿಗೆ ಸಾಗಿಸುವ ವರೆಗೆ ಜಿಲ್ಲೆಯ ಮೌಲ್ಯ ಮಾಪನ ಕೇಂದ್ರ ಗಳಾದ ಯು. ಕಮಲಾಬಾಯಿ ಪ್ರೌಢಶಾಲೆ ಕಡಿಯಾಳಿ, ಆದಿ ಉಡುಪಿ ಪ್ರೌಢಶಾಲೆ ಆದಿ ಉಡುಪಿ, ಟಿ.ಎ. ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜಿಬೆಟ್ಟು, ಸರಕಾರಿ ಪ್ರೌಢಶಾಲೆ ವಳಕಾಡು, ಕ್ರಿಶ್ಚಿಯನ್‌ ಪ್ರೌಢಶಾಲೆ ಉಡುಪಿ, ಸರಕಾರಿ ಬಾಲಕಿಯರ ಪ.ಪೂ. ಕಾಲೇಜು ಉಡುಪಿ ಈ ಮೌಲ್ಯಮಾಪನ ಕೇಂದ್ರಗಳ 200 ಮೀಟರ್‌ ವ್ಯಾಪ್ತಿಯಲ್ಲಿ ಸೆಕ್ಷನ್‌ 144 (1)ರಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.

Advertisement

ಮೌಲ್ಯಮಾಪನ ಕೇಂದ್ರಗಳ ಸುತ್ತ ಮೊಬೈಲ್‌ ಬಳಕೆ, ಮೌಲ್ಯ ಮಾಪನ ಸಾಮಗ್ರಿಗಳನ್ನು ಪರೀûಾ ಕೇಂದ್ರ ದಿಂದ ಹೊರಗಡೆ ತೆಗೆದುಕೊಂಡು ಹೋಗುವುದನ್ನೂ ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next