Advertisement

ಎಸೆಸೆಲ್ಸಿ ವಿದ್ಯಾರ್ಥಿಗಳೇ, ವಿಜಯೀಭವ!

12:41 AM Jul 18, 2021 | Team Udayavani |

ಪ್ರೀತಿಯ ವಿದ್ಯಾರ್ಥಿಗಳೇ,
ಎಸೆಸೆಲ್ಸಿ ಪರೀಕ್ಷೆಯು ಜು.19ರಂದು ಮತ್ತು 21ರಂದು ನಡೆಯಲಿದೆ. 19 ರಂದು ಪ್ರಧಾನ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ಶಾಸ್ತ್ರದ ಪರೀಕ್ಷೆಗಳು ನಡೆಯಲಿವೆ. 21ರಂದು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ಪರೀಕ್ಷೆಗಳು ನಡೆಯಲಿವೆ. ಎರಡೂ ಪರೀಕ್ಷೆ ಗಳಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ. ಒಂದು ಪ್ರಶ್ನೆಯನ್ನು ನೀಡಿ, ಆ ಪ್ರಶ್ನೆಗೆ ಉತ್ತರವಾಗಿ ನಾಲ್ಕು ಆಯ್ಕೆಗಳನ್ನು ಕೊಟ್ಟಿರುತ್ತಾರೆ. ಅವುಗಳಲ್ಲಿ ಸರಿ ಯಾದ ಆಯ್ಕೆಯನ್ನು ನೀವು ಬರೆಯಬೇಕು. ಈಗಾ ಗಲೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸ ಲಾಗಿದೆ. ಅವನ್ನು ಚೆನ್ನಾಗಿ ಅಧ್ಯಯನ ಮಾಡಿ. ಬಹು ಆಯ್ಕೆಯ ಪ್ರಶ್ನೆಗಳ ಬಗ್ಗೆ ನಿಮ್ಮ ಅಧ್ಯಾಪಕ ರು ಹೇಳಿರುತ್ತಾರೆ. ಅದರ ಜತೆಗೆ, ಇತರ ಶಾಲೆ ಗಳಲ್ಲಿ ಓದುವ ವಿದ್ಯಾರ್ಥಿಗಳ ಪರಿಚಯವಿದ್ದರೆ, ಅವರ ಶಾಲೆಯಲ್ಲಿ ಕಲಿಸಿದಂತಹ ಬಹುಆಯ್ಕೆಯ ಪ್ರಶ್ನೆಗಳ ಮಾದರಿಯನ್ನೂ ತರಿಸಿಕೊಂಡು, ಅದನ್ನೂ ಒಮ್ಮೆ ಗಮನಿಸಿ.

Advertisement

ಒಎಂಆರ್‌: ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಗಳನ್ನು ಪ್ರತ್ಯೇಕವಾಗಿ ನೀಡುವರು. ಉತ್ತರ ಪತ್ರಿಕೆ ಯನ್ನು ಒಎಂಆರ್‌(ಆಪ್ಟಿಕಲ್‌ ಮಾರ್ಕ್‌ ರೆಕಗ್ನಿ ಶನ್‌) ಎನ್ನುವರು. ಈ ಉತ್ತರ ಪತ್ರಿಕೆಯ ಮಾದ ರಿ ಯನ್ನು ಎಸೆಸೆಲ್ಸಿ ಬೋರ್ಡ್‌ ಈಗಾ ಗಲೇ ಪ್ರಕಟಿಸಿದೆ. ಈ ಬಗ್ಗೆ ನಿಮ್ಮ ಶಾಲೆ ಯಲ್ಲಿ ಈಗಾಗಲೇ ವಿವರಿಸಿರಬಹುದು. ಅದನ್ನು ಅಧ್ಯಯನ ಮಾಡಿ. ನಿಮ್ಮ ಆಯ್ಕೆಯ ಉತ್ತರವನ್ನು ಕಪ್ಪು ಅಥವಾ ನೀಲಿ ಬಾಲ್‌ ಪೆನ್ನಿಂದ ಗುರುತಿಸ ಬೇಕು. ಪ್ರಶ್ನೆಪತ್ರಿಕೆಯಲ್ಲಿ 2-4 ಖಾಲಿ ಹಾಳೆಗಳಿ ರು ತ್ತವೆ. “ರಫ್ ವರ್ಕ್‌’ನ್ನು ಆ ಖಾಲಿ ಹಾಳೆ ಯ ಲ್ಲಿಯೇ ಮಾಡಬೇಕು. ಉತ್ತರ ಪತ್ರಿಕೆಯಾದ ಒಎಂಆರ್‌ ಹಾಳೆಯಲ್ಲಿ, ಉತ್ತರವನ್ನು ಗುರುತಿಸು ವುದನ್ನು ಬಿಟ್ಟು ಮತ್ತೇ ನನ್ನೂ ಮಾಡಬಾರದು. ಪ್ರಧಾನ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ಶಾಸ್ತ್ರದಲ್ಲಿ ತಲಾ 40 ಪ್ರಶ್ನೆಗಳಿಗೆ, ಒಟ್ಟು 120 ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಕಾಲಾ ವಕಾಶ 3 ಗಂಟೆಗಳು. ಹಾಗೆಯೇ ಭಾಷಾ ವಿಷ ಯ ಗಳಲ್ಲೂ 120 ಪ್ರಶ್ನೆಗಳಿಗೆ 3 ಗಂಟೆಯ ಅವಧಿ ಯಲ್ಲಿ ಉತ್ತರ ಬರೆಯಬೇಕಾಗುತ್ತದೆ.

ಪರೀಕ್ಷಾ ಸಾಮಗ್ರಿಗಳು: ನಾಳೆ ಬೆಳಗ್ಗೆ ಪರೀಕ್ಷೆ ಇದೆ ಎಂದರೆ ಹಿಂದಿನ ರಾತ್ರಿಯೇ ಸಿದ್ಧತೆಗಳನ್ನು ನಡೆಸ ಬೇಕು. ಮೊದಲು ನಿಮ್ಮ ಹಾಲ್‌ ಟಿಕೆಟ್‌’ ತೆಗೆದಿ ಟು rಕೊಳ್ಳಿ. ಪಾಸ್‌ಪೋರ್ಟ್‌ ಅಳತೆಯ ಎರಡು ಭಾವ ಚಿತ್ರಗಳನ್ನು ಜಾಮಿಟ್ರಿ ಬಾಕ್ಸ್‌ ಒಳಗೆ ಇಟ್ಟುಕೊಳ್ಳಿ. ಅಕಸ್ಮಾತ್‌ ನಿಮ್ಮ ಪ್ರವೇಶಪತ್ರ ಕಳೆದು ಹೋದರೆ, ತಾತ್ಕಾಲಿಕ ಪ್ರವೇಶಪತ್ರ ಪಡೆಯಲು ಈ ಭಾವಚಿತ್ರಗಳು ನೆರವಾಗುತ್ತವೆ. ಪರೀಕ್ಷಾ ಕೇಂದ್ರ ನಿಮ್ಮ ಮನೆಯಿಂದ ಎಷ್ಟು ದೂರವಿದೆ? ಅಲ್ಲಿಗೆ ಹೋಗಲು ಯಾವ ಯಾವ ಸಂಚಾರ ಸಾಧನಗಳಿವೆ ಎನ್ನುವುದನ್ನು ತಿಳಿದುಕೊಳ್ಳಿ. ಪರೀಕ್ಷೆ ಬರೆಯಲು ಒಳ್ಳೆಯ ನೀಲಿ, ಕಪ್ಪು ಇಂಕ್‌ ಬಾಲ್‌ ಪೆನ್‌ ಬೇಕಾಗುತ್ತದೆ. ಕೈಗಡಿಯಾರವನ್ನು ಎತ್ತಿಟ್ಟು ಕೊಳ್ಳಿ. ಪರೀಕ್ಷಾ ದಿನ ಕಟ್ಟಿಕೊಂಡು ಹೋಗಿ.

ಕಡೇ ಕ್ಷಣದ ಅಭ್ಯಾಸ ಬೇಡ: ಪರೀûಾ ದಿನ ಬೆಳಿಗ್ಗೆ ಪ್ರಾತಃರ್ವಿಧಿಗಳನ್ನು ಮುಗಿಸಿ. ನಿಮ್ಮ ಪಠ್ಯ ಪುಸ್ತಕ ಹಾಗೂ ನಿಮ್ಮ ನೋಟ್ಸ್‌ ಮುಂತಾದ ಅಧ್ಯಯನ ಸಾಮಗ್ರಿಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಕಡೆಯ ಕ್ಷಣದಲ್ಲಿ ಹೊಸದಾಗಿ ಯಾವುದನ್ನೂ ವಿವರವಾಗಿ ಓದಲು ಹೋಗಬೇಡಿ.

ಲಘು ಉಪಾಹಾರ: ಪರೀಕ್ಷಾ ದಿನ ಲಘು ಉಪಾ ಹಾರ ಸೇವಿಸಿ. ಹಿತ-ಮಿತವಾಗಿ ಸೇವಿಸಿ. ಇಡ್ಲಿ, ದೋಸೆ, ರೊಟ್ಟಿ, ಚಪಾತಿಯನ್ನು ತಿನ್ನಬಹುದು. ಚಿತ್ರಾನ್ನ, ಪಲಾವ್‌, ಬಿರಿಯಾನಿ, ಬಿಸಿಬೇಳೆಬಾತ್‌, ಮೊಸರನ್ನ, ಉದ್ದಿನ ವಡೆ, ಪೂರಿ, ಮಸಾಲೆ ದೋಸೆಗಳನ್ನು ತಿನ್ನಬೇಡಿ. ಸಿಹಿ ಪದಾರ್ಥಗಳನ್ನು ತಿನ್ನಲೇಬೇಡಿ. ಕಾರಣ, ಹೊಟ್ಟೆ ಕೆಟ್ಟರೆ ಬಹಳ ಕಷ್ಟ. ಪರೀûಾ ಕೇಂದ್ರಕ್ಕೆ ಒಂದು ಬಾಟಲ್‌ ಶುದ್ಧ ನೀರನ್ನು ಕೊಂಡೊಯ್ಯಿರಿ.

Advertisement

ಟೆನ್ಶನ್ ಬೇಡ: ಪರೀಕ್ಷೆಯ ಬಗ್ಗೆ ಯಾವುದೇ ಭಯ ವನ್ನೂ ಇಟ್ಟುಕೊಳ್ಳಬೇಡಿ. ಟೆನÒನ್‌ ಮಾಡಿ ಕೊಳ್ಳಬೇಡಿ. ಧೈರ್ಯವಾಗಿ ಹೋಗಿ. ನಿಮಗೆ ಭಯವಾಗುತ್ತಿದೆ’ ಎನಿಸಿದರೆ ಕುಳಿತ ಕಡೆಯ ಲ್ಲಿಯೇ ಒಮ್ಮೆ ಆಳವಾಗಿ ಉಸಿರಾಡಿ. ಅನಂತರ ಆತ್ಮ ವಿಶ್ವಾಸ ದಿಂದ ಪರೀûಾ ಕೊಠಡಿಯನ್ನು ಪ್ರವೇ ಶಿಸಿ. ಸೋಲಿನ ಬಗ್ಗೆ ಚಿಂತಿಸದಿರಿ. ನನ್ನ ಕೈಯಲ್ಲಿ ಸಾಧ್ಯವಾದುದನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ’ ಎಂಬ ಪಾಸಿಟಿವ್‌ ಮನೋ ಭಾವದಿಂದ ಉತ್ತರ ಬರೆಯಿರಿ. ಆಗ ಯಶಸ್ಸು ನಿಮ್ಮದಾಗುತ್ತದೆ.

ಅರ್ಧ ಗಂಟೆ ಮೊದಲು ಹೋಗಿ
ಪರೀಕ್ಷೆ ಆರಂಭವಾಗುವುದಕ್ಕೆ ಕನಿಷ್ಠ ಅರ್ಧ ಗಂಟೆ ಮೊದಲೇ ಪರೀûಾ ಕೇಂದ್ರಕ್ಕೆ ಹೋಗಿ. ಪರೀಕ್ಷಾ ಕೊಠಡಿ ಹಾಗೂ ನಿಮ್ಮ ರಿಜಿಸ್ಟರ್‌ ನಂಬರ್‌ ಇರುವ ಟೇಬಲ್‌ ನೋಡಿಕೊಳ್ಳಿ. ನೆರಳಿರುವ ಕಡೆ ಕುಳಿತುಕೊಳ್ಳಿ. ಸಾಧ್ಯವಾದಷ್ಟು ಏಕಾಂತದಲ್ಲಿರಿ. ಗಂಭೀರವಾಗಿರಿ. ಗೆಳೆಯರೊಡನೆ ಹರಟಬೇಡಿ. ಚರ್ಚೆಗಳು ನಿಮ್ಮ ಮೂಡನ್ನು ಹಾಳು ಮಾಡುತ್ತವೆ. ಪರೀûಾ ಕೊಠಡಿಯನ್ನು ಪ್ರವೇಶಿಸುವ 10-15 ನಿಮಿಷಗಳ ಮೊದಲು ಎರಡು ಲೋಟ ನೀರನ್ನು (ಅರ್ಧ ಲೀಟರಿನ ಬಾಟಲಿಯನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು) ಕುಡಿಯಿರಿ. ಈ ಹೆಚ್ಚುವರಿ ನೀರು ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲುದು.

ಕೋವಿಡ್‌ ಇದ್ದರೂ ಪ್ರವೇಶ
ಕೋವಿಡ್‌ ಇದ್ದರೂ ಪರೀಕ್ಷೆ ಬರೆಯಬಹುದು. ಕೋವಿಡ್‌ ಬಂದಿರುವ ಮಕ್ಕಳೂ ಸಹ ಪರೀಕ್ಷೆಯನ್ನು ಬರೆಯಬಹುದು. ಅವರಿಗಾಗಿ ಪ್ರತ್ಯೇಕ ಕೋವಿಡ್‌ ಆರೈಕೆಯ ಕೇಂದ್ರಗಳಲ್ಲಿ ಉತ್ತರ ಬರೆಯುವ ಏರ್ಪಾಡನ್ನು ಮಾಡಿರುವರು. ಈ ಬಗ್ಗೆ ಮುಂಚಿತವಾಗಿ ನಿಮ್ಮ ಶಾಲೆಯಲ್ಲಿ ವಿಚಾರಿಸಿ.

– ಡಾ| ನಾ. ಸೋಮೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next