Advertisement

ಭಗ್ನ ಪ್ರೇಮಿಯಿಂದ SSLC ವಿದ್ಯಾರ್ಥಿನಿಯ ಕೊಚ್ಚಿ ಕೊಲೆ !

11:52 AM Nov 28, 2018 | Team Udayavani |

ಚಿಕ್ಕಬಳ್ಳಾಪುರ: ಪ್ರೀತಿ ಒಪ್ಪದ ಕಾರಣಕ್ಕೆ ಯುವಕನೊಬ್ಬ  ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದು ಅಟ್ಟಹಾಸ ಮೆರೆದ ಭೀಕರ ಘಟನೆ ಬುಧವಾರ ದೊಡ್ಡ ಬಳ್ಳಾಪುರದ ಗಂಗಾಧರಪುರದಲ್ಲಿ  ನಡೆದಿದೆ. 

Advertisement

ಕೀರ್ತನಾ(15) ಎಂಬ ವಿದ್ಯಾರ್ಥಿನಿ ಹತ್ಯೆಗೀಡಾದ ದುರ್‌ದೈವಿ. ಹತ್ತಿರದ ಸಂಬಂಧಿಯೇ ಆದ ನವೀನ್‌ ಎಂಬಾತ ಹತ್ಯೆಗೈದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆತನಿಗೆ ಚಿಕಿತ್ಸೆಗೆ ನೀಡಲಾಗುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ಇಬ್ಬರೂ ಸಂಬಂಧಿಕರಾಗಿದ್ದರಿಂದ ಮನೆಯವರು ಕೀರ್ತನಾಗೆ 18 ವರ್ಷ ತುಂಬಿದ ಬಳಿಕ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ನವೀನ್‌ ನನ್ನು ಮದುವೆ ಆಗಲು ಕೀರ್ತನಾಗೆ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ.

ಕೀರ್ತನಾ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ಆಕ್ರೋಶಗೊಂಡು  ನವೀನ್‌ ಮಚ್ಚಿನಿಂದ ಕತ್ತು ಕತ್ತರಿಸಿ ಭೀಕರ ಕೃತ್ಯ ಎಸಗಿದ್ದಾನೆ . ಸ್ಥಳದಲ್ಲೇ ಕೀರ್ತನಾ ಸಾವನ್ನಪ್ಪಿದ್ದಾಳೆ.

ದೊಡ್ಡ ಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next