Advertisement

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

02:36 AM May 19, 2022 | Team Udayavani |

ಬೆಂಗಳೂರು: ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶವನ್ನು ಇಂದು (ಮೇ 19) ಮಧ್ಯಾಹ್ನ 12.30ಕ್ಕೆ ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಪ್ರಕಟಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಗೆ ಮಂಡಳಿ ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ಲಭ್ಯವಾಗಲಿದೆ.

Advertisement

ವಿದ್ಯಾರ್ಥಿಗಳು ನೋಂದಣಿ ಮಾಡಿರುವ ಮೊಬೈಲ್‌ಗ‌ಳಿಗೂ ಫ‌ಲಿತಾಂಶದ ಸಂದೇಶ ಬರಲಿದೆ.

ಫ‌ಲಿತಾಂಶವು //kseeb.kar.nic.in, //sslc.karnataka.gov.in, //karresults.nic.in ವೆಬ್‌ಸೈಟ್‌ಗಳಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಲಭ್ಯವಾಗಲಿದೆ.

ಸಹಾಯವಾಣಿ
ಫ‌ಲಿತಾಂಶ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಮ್ಹಾ®Õ… ಸಹಾಯದೊಂದಿಗೆ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಸಹಾಯವಾಣಿ ತೆರೆದಿದೆ. ಒತ್ತಡ ದಲ್ಲಿರುವವರು 080-46110007 ಸಂಖ್ಯೆಗೆ ಕರೆ ಮಾಡಿದರೆ ಅವರಿಗೆ ಟೆಲಿ ಕೌನ್ಸೆಲಿಂಗ್‌ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next