Advertisement

ಎಸ್‌ಎಸ್ಎಲ್‌ಸಿ ಫಲಿತಾಂಶ : ಗ್ರೇಡಿಂಗ್ ವ್ಯವಸ್ಥೆಯಲ್ಲಿ ಜಿಲ್ಲಾವಾರು ಸ್ಥಾನವಿಲ್ಲ

05:26 PM May 19, 2022 | Team Udayavani |

ಬೆಂಗಳೂರು: ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಎಸ್‌ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶದ ಗುರುವಾರ ಪ್ರಕಟವಾಗಿದ್ದು, 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

Advertisement

ಹಿಂದೆ ಶೇಕಡಾವಾರು ಫಲಿತಾಂಶದ ಆಧಾರದ ಮೇಲೆ ಯಾವ ಜಿಲ್ಲೆ ಪ್ರಥಮ , ದ್ವಿತೀಯ ಹೀಗೆ ಕೊನೆಯ ಸ್ಥಾನ ಪಡೆದಿದೆ ಎಂದು ರ್ಧರಿಸಲಾಗುತ್ತಿತ್ತು. ಈಗ ಗ್ರೇಡ್ ವ್ಯವಸ್ಥೆಯಿಂದ ಆ ಪರಿಕಲ್ಪನೆ ಇಲ್ಲವಾಗಿದೆ.

‘ಈ ಬಾರಿಯ ಫಲಿತಾಂಶದಲ್ಲಿ ಉತ್ತೀರ್ಣರಾದವರ ಶೇಕಡವಾರು ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ (2020-21 ಹೊರತುಪಡಿಸಿ) ಅತ್ಯಧಿಕವಾಗಿದ್ದು, ಶೇ. 85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಪೈಕಿ 3,920 ಶಾಲೆಗಳಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಶೇ.100ರಷ್ಟು ಬಂದಿದೆ.

‘ಶೂನ್ಯ ಫಲಿತಾಂಶ ಬಂದಿರುವ ಶಾಲೆಗಳು ಹಾಗೂ ಉತ್ತೀರ್ಣ ಪ್ರಮಾಣ ಕಡಿಮೆ ಇರುವ ಶಾಲೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರೋಪಾಯಗಳನ್ನು ಕಂಡು ಹಿಡಿಯಲಾಗುತ್ತದೆ’ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

‘ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳು ‘ಎ’ ದರ್ಜೆಯ (ಶೇ.75-100) ಫಲಿತಾಂಶ ಪಡೆದಿವೆ. ಯಾದಗಿರಿ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳು ‘ಬಿ’ ದರ್ಜೆಯ (ಶೇ.60ರಿಂದ ಶೇ.75ರ ಒಳಗೆ) ಫಲಿತಾಂಶ ಪಡೆದಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next