ದೇವನಹಳ್ಳಿ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿಯ ಮೊದಲ ಹಾಗೂ ದ್ವಿತೀಯ ಭಾಷೆ ಪರೀಕ್ಷೆ ಸುಗಮವಾಗಿ ನಡೆಯಿತು. ಜಿಲ್ಲೆಯ ಒಟ್ಟು 52 ಕೇಂದ್ರಗಳಲ್ಲಿ 13,192 ವಿದ್ಯಾರ್ಥಿಗಳ ಪೈಕಿ 12,588 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ, 471 ಮಂದಿ ಗೈರಾದರು. ವಿದ್ಯಾರ್ಥಿಗಳ ತಪಾಸಣೆ: ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಯಿತು.
ಆರೋಗ್ಯ ಇಲಾಖೆಯ ಮಾರ್ಗ ಸೂಚನೆಯಂತೆ ಪ್ರತಿಯೊಬ್ಬರನ್ನೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿ, ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ, ಮಾಸ್ಕ್ಕೊಟ್ಟು ಪರೀಕ್ಷೆ ಕೇಂದ್ರದೊಳಗೆ ವಿದ್ಯಾರ್ಥಿಗಳನ್ನು ಕಳುಹಿಸಿದರು. ಪರೀಕ್ಷೆ ಕೇಂದ್ರ ದ ಮುಂಭಾಗದಲ್ಲಿ ಬಾಕ್ಸ್ ಹಾಕಿ, ವಿದ್ಯಾರ್ಥಿಗಳು ನಿಲ್ಲುವಂತೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಸೂಚಿಸಲಾಗಿತ್ತು. ಅಲ್ಲದೆ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರಗಳಿಗೆ ಬರಲು ಅನುಕೂಲವಾಗುವಂತೆ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬಿಎಂಟಿಸಿ, ಖಾಸಗಿ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಅಡೆತಡೆಯಿಲ್ಲದೆ ಪರೀಕ್ಷೆ ಕೇಂದ್ರಗಳಿಗೆ ಬಂದು ಪರೀಕ್ಷೆ ಬರೆಯುವಂತಾಯಿತು. ಅದರ ನಡುವೆ ಕೆಲ ವಿದ್ಯಾರ್ಥಿಗಳು ಅವರ ಪೋಷಕರ ಜೊತೆಗೆ ಸ್ವಂತ ವಾಹನಗಳಲ್ಲಿ ಬಂದು ಪರೀಕ್ಷೆ ಬರೆದರು. ಪರೀಕ್ಷೆ ಕೇಂದ್ರದ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ದೇವನಹಳ್ಳಿ: ಒಟ್ಟು ವಿದ್ಯಾರ್ಥಿಗಳು 3,322, ಹಾಜರಾದವರು 3139, ಗೈರಾದವರು 183, ಕಂಟೈನ್‌ಮೆಂಟ್‌ನಿಂದ ಬಂದವರು 22 ಮಂದಿ.
ಹೊಸಕೋಟೆ: ಒಟ್ಟು ವಿದ್ಯಾರ್ಥಿಗಳು 3484, ಹಾಜರಾದವರು 3367, ಗೈರಾದವರು 117, ಕಂಟೈನ್‌ಮೆಂಟ್‌ನಿಂದ ಬಂದವರು 08 ಮಂದಿ.
ನೆಲಮಂಗಲ: ಒಟ್ಟು ವಿದ್ಯಾರ್ಥಿಗಳು 2,820, ಹಾಜರಾದವರು 2,731, ಗೈರಾದವರು 89. ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದವರು 01 ಮಂದಿ.
ದೊಡ್ಡಬಳ್ಳಾಪುರ: ಒಟ್ಟು ವಿದ್ಯಾರ್ಥಿಗಳು 3,433, ಹಾಜರಾದವರು 3,351, ಗೈರಾದವರು 82, ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದವರು 03 ಮಂದಿ.