Advertisement

ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ: ಸಿದ್ಧತೆಗಳು ಪೂರ್ಣ

01:00 AM Mar 20, 2019 | Harsha Rao |

ಉಡುಪಿ/ಬ್ರಹ್ಮಾವರ: ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ವಲಯದ ಸುಮಾರು 76 ಶಾಲೆಗಳ 3,749 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 

Advertisement

ಉಡುಪಿ ವಲಯದಲ್ಲಿ ಸರಕಾರಿ ಪ್ರೌಢಶಾಲೆಯ 922, ಅನುದಾನಿತ ಪ್ರೌಢಶಾಲೆಯ 1,151 ಹಾಗೂ ಅನುದಾನರಹಿತ ಶಾಲೆಗಳ 1,291 ವಿದ್ಯಾರ್ಥಿಗಳಲ್ಲಿ 1,701 ಹುಡುಗರು, 1,674 ಹುಡುಗಿಯರು ಸೇರಿ ಒಟ್ಟು 3,364 ವಿದ್ಯಾರ್ಥಿಗಳು. ಪುನರಾವರ್ತಿತರಲ್ಲಿ 111 ಹುಡುಗರು, 59 ಹುಡುಗಿಯರು ಸೇರಿ ಒಟ್ಟು 170 ವಿದ್ಯಾರ್ಥಿಗಳು. 
ಖಾಸಗಿ ಶಾಲೆಗಳಲ್ಲಿ  107 ಹುಡುಗರು, 43 ಹುಡುಗಿಯರು ಸೇರಿ ಒಟ್ಟು 150 ವಿದ್ಯಾರ್ಥಿಗಳು. ಖಾಸಗಿ ಪುನರಾವರ್ತಿತರಲ್ಲಿ 19 ಹುಡುಗರು, 12 ಹುಡುಗಿಯರು ಸೇರಿ ಒಟ್ಟು 31 ವಿದ್ಯಾರ್ಥಿಗಳು ಸೇರಿದಂತೆ ವಲಯದಲ್ಲಿ ಒಟ್ಟು 1,938 ಹುಡುಗರು, 1,788 ಹುಡುಗಿಯರು ಪರೀಕ್ಷೆ ಬರೆಯಲಿದ್ದಾರೆ. 

ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ 2 ಖಾಸಗಿ ಕೇಂದ್ರಗಳಿವೆ. ಪರೀûಾ ಕೇಂದ್ರದ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಉತ್ತರ ಪತ್ರಿಕೆಗಳನ್ನಿಡಲು ಉಡುಪಿ ಕ್ರಿಶ್ಚಿಯನ್‌ ಪ್ರೌಢಶಾಲೆಯಲ್ಲಿ ಭದ್ರತಾ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ.

ಫ‌ಲಿತಾಂಶ ಹೆಚ್ಚಳಕ್ಕೆ ಕ್ರಮಗಳು
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಉಡುಪಿ ವಲಯ ಹೆಚ್ಚಿನ ಮುತುವರ್ಜಿ ವಹಿಸಿದೆ. ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ವಿಶೇಷ ತರಬೇತಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ, ಕೆಲವು ಶಾಲೆಗಳಲ್ಲಿ ಸಂಜೆ ತರಬೇತಿ,  ಎಸೆಸೆಲ್ಸಿ ವಿದ್ಯಾರ್ಥಿಗಳ ಪೋಷಕರಿಗೆ ಶಾಲೆಯಲ್ಲಿ ಮಾರ್ಗದರ್ಶನ ನೀಡಲಾಗಿದೆ.

ಬ್ರಹ್ಮಾವರ: 2,927 ವಿದ್ಯಾರ್ಥಿ ಗಳು
ಈ ವಲಯದಲ್ಲಿ ಒಟ್ಟು 2,927 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ 1541 ಬಾಲಕರು, 1386 ಬಾಲಕಿಯರು ಸೇರಿದ್ದಾರೆ.  

Advertisement

ವಲಯದಲ್ಲಿ 23 ಸರಕಾರಿ, 22 ಅನುದಾನಿತ, 13 ಅನುದಾನ ರಹಿತ ಒಟ್ಟು 58 ಪ್ರೌಢ ಶಾಲೆಗಳಿವೆ. 11 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್‌. ಪ್ರಕಾಶ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next