Advertisement

ಕರಾವಳಿಯಲ್ಲಿ 2ನೇ ದಿನದ ಎಸೆಸೆಲ್ಸಿ  ಪರೀಕ್ಷೆ ಯಶಸ್ವಿ 

01:45 AM Jul 23, 2021 | Team Udayavani |

ಉಡುಪಿ/ಮಂಗಳೂರು: ಕೊರೊನಾ ಮುನ್ನೆಚ್ಚರಿಕೆಯನ್ನು ಪಾಲಿಸಿಕೊಂಡು ಎಸೆಸೆಲ್ಸಿಯ ಎರಡನೇ ದಿನದ ಪರೀಕ್ಷೆಯು ಅವಿಭಜಿತ ದ.ಕ. ಜಿಲ್ಲೆಯಾದ್ಯಂತ ಗುರುವಾರ ಯಶಸ್ವಿಯಾಗಿದೆ.

Advertisement

ಶಾಲಾ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ನೋಂದಾಯಿಸಿದ್ದ ವಿದ್ಯಾರ್ಥಿಗಳ ಪೈಕಿ ಪ್ರಥಮ ಭಾಷೆಗೆ 14, ದ್ವಿತೀಯ ಭಾಷೆಗೆ 13, ತೃತೀಯ ಭಾಷೆಗೆ 13 ಮಂದಿ ಗೈರು ಹಾಜರಾಗಿದ್ದರು. ದ.ಕ. ಜಿಲ್ಲೆಯಲ್ಲಿ ನೋಂದಾಯಿಸಿದ್ದ ವಿದ್ಯಾರ್ಥಿಗಳ ಪೈಕಿ ಪ್ರಥಮ ಭಾಷೆಗೆ 25 ಮಂದಿ, ದ್ವಿತೀಯ ಪರೀಕ್ಷೆಗೆ 27 ಮಂದಿ, ತೃತೀಯ ಭಾಷಾ ಪರೀಕ್ಷೆಗೆ 29 ಮಂದಿ ಗೈರು ಹಾಜರಾಗಿದ್ದರು.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ 5 ಮಂದಿ ಹಾಗೂ ದ.ಕ.ಜಿಲ್ಲೆಯ 15 ವಿದ್ಯಾರ್ಥಿಗಳು ವಿವಿಧ ತಾಲೂಕಿನ ವಿವಿಧ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಪರೀಕ್ಷೆ ಬರೆದಿದ್ದು, ಕೇರಳದ ನೋಂದಾಯಿತ 331 ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದಾರೆ. 37 ವಿದ್ಯಾರ್ಥಿಗಳು ಅನಾರೋಗ್ಯ ಕಾರಣದಿಂದಾಗಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ.

ಪರೀಕ್ಷೆ ಎದುರಿಸಲು ಉಭಯ ಜಿಲ್ಲಾಡಳಿತ ಕಳೆದ ಒಂದು ತಿಂಗಳಿನಿಂದ ಭಾರೀ ಸಿದ್ಧತೆ ನಡೆಸಿತ್ತು. ಉಡುಪಿಯ 72 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 179 ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಅನುಸರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆ ಯಲು ಅವಕಾಶ ಕಲ್ಪಿಸಲಾಗಿತ್ತು.

ಗೊಂದಲ ಮೂಡಿಸಿದ ಪ್ರಶ್ನೆ :

Advertisement

ಕುಂದಾಪುರ: ಎಸೆಸೆಲ್ಸಿಯ ಕನ್ನಡ ಭಾಷಾ ಪರೀಕ್ಷೆಯ ಪ್ರಶ್ನೆಯೊಂದಕ್ಕೆ ನೀಡಿದ 4 ಆಯ್ಕೆಯ ಉತ್ತರಗಳು ವಿದ್ಯಾರ್ಥಿಗಳಿಗೆ ಗೊಂದಲ ಮೂಡಿಸಿದೆ.

ಪರೀಕ್ಷೆಯ 19ನೇ ಪ್ರಶ್ನೆ “ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆ ಕಡಿದವನು’ ಎಂದಿತ್ತು. ಇದಕ್ಕೆ ಪಠ್ಯಪುಸ್ತಕದಂತೆ ಶಿಕ್ಷಕರು ಬೋಧಿಸಿರುವ ಪ್ರಕಾರ ಸರಿಯುತ್ತರ ಬಾಲ. ಆದರೆ ಇಲ್ಲಿ ನೀಡಿರುವ ಆಯ್ಕೆಗಳು ಎ) ರಾಮ, ಬಿ) ಭೀಮ, ಸಿ) ಹನುಮ ಹಾಗೂ ಡಿ) ಚಡಗ ಎಂದಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದರು. ಪರೀಕ್ಷೆ ಮುಗಿದ ಬಳಿಕ ಅನೇಕ ಮಂದಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಸಂಪರ್ಕಿಸಿ, ಈ ಬಗ್ಗೆ ಪ್ರಶ್ನಿಸಿದ್ದಾರೆ. ಇಲ್ಲಿ ಬಾಲ ಅನ್ನುವ ಆಯ್ಕೆಯನ್ನು ನೀಡದ ಕಾರಣ ಅಂಕ ಕಳೆದುಕೊಳ್ಳುವ ಚಿಂತೆ ವಿದ್ಯಾರ್ಥಿಗಳದ್ದಾಗಿದೆ.

ಈ ಬಗ್ಗೆ ಉಡುಪಿ ಡಿಡಿಪಿಐ ಎಚ್‌.ಎಸ್‌. ನಾಗೂರ ಉದಯವಾಣಿ ಜತೆ ಮಾತನಾಡಿ, ಪ್ರಶ್ನೆ ಅಥವಾ ಉತ್ತರ ತಪ್ಪಾಗಿದ್ದರ ಬಗ್ಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆತಂಕ ಬೇಡ. ರಾಜ್ಯವ್ಯಾಪಿ ಇದೇ ರೀತಿಯಾಗಿದ್ದರೆ, ಪ್ರೌಢಶಿಕ್ಷಣ ಮಂಡಳಿಯಿಂದ ಹೆಚ್ಚುವರಿ ಅಂಕ ನೀಡುವ ಸಾಧ್ಯತೆಗಳಿವೆ. ಎಲ್ಲರನ್ನೂ  ಉತ್ತೀರ್ಣಗೊಳಿಸುತ್ತಿರುವುದರಿಂದ ಈ ಬಗ್ಗೆ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next