Advertisement

ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ; ರಾಜ್ಯದಲ್ಲಿ 3,305 ಕೇಂದ್ರಗಳು

10:49 PM Mar 29, 2023 | Team Udayavani |

ಬೆಂಗಳೂರು: 2023ರ ಸಾಲಿನ ಎಸೆಸೆಲ್ಸಿ ಅಂತಿಮ ಪರೀಕ್ಷೆಯು ಮಾ. 31ರಿಂದ ಎ. 15ರ ವರೆಗೆ ನಡೆಯಲಿದೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.

Advertisement

ಒಟ್ಟು 15,498 ಶಾಲೆಗಳಿಂದ 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 5,833 ಸರಕಾರಿ ಶಾಲೆಗಳಿಂದ 3.60 ಲಕ್ಷ ವಿದ್ಯಾರ್ಥಿಗಳು, 3,605 ಅನುದಾನಿತ ಶಾಲೆಗಳಿಂದ 2.20 ಲಕ್ಷ, 6,060 ಅನುದಾನ ರಹಿತ ಶಾಲೆಗಳಿಂದ 2.61 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

7.94 ಲಕ್ಷ ಶಾಲಾ ವಿದ್ಯಾರ್ಥಿಗಳು, 20,750 ಪುನರಾವರ್ತಿತ ವಿದ್ಯಾರ್ಥಿಗಳು, 18,272 ಖಾಸಗಿ ವಿದ್ಯಾರ್ಥಿಗಳು, 8,862 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 2010ಕ್ಕಿಂತ ಹಿಂದಿನ 316 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ.

3,305 ಕೇಂದ್ರಗಳು
ರಾಜ್ಯಾದ್ಯಂತ ಒಟ್ಟು 3,305 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ 1,845 ರೆಗ್ಯುಲರ್‌ ಕ್ಲಸ್ಟರ್‌ ಪರೀಕ್ಷಾ ಕೇಂದ್ರಗಳು, 1,354 ರೆಗ್ಯುಲರ್‌ ನಾನ್‌ ಕ್ಲಸ್ಟರ್‌, 106 ಖಾಸಗಿ ಪರೀಕ್ಷಾ ಕೇಂದ್ರಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next