Advertisement
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿಯವರು ನೀಡಿರುವ ಮಾರ್ಗಸೂಚಿಗಳ ಅನುಸಾರವೇಶಾಲೆಗಳನ್ನು ಪುನರ್ ಪ್ರಾರಂಭಿಸಲಾಗುತ್ತಿದೆ. ಜನವರಿ 10ರಂದು ಎಸ್ಸೆಸ್ಸೆಲ್ಸಿ ಮತ್ತು 12ನೇ ತರಗತಿ ಪ್ರಾರಂಭಿಸಿ ನಂತರ ಜನವರಿ 15ರಿಂದ 11ನೇ ತರಗತಿಪ್ರಾರಂಭೋತ್ಸವದ ಕುರಿತು ನಿರ್ಧರಿಸಲಾಗುವುದು ಎಂದರು. ಎಸ್ಸೆಸ್ಸೆಲ್ಸಿ ತರಗತಿಗಳನ್ನು ಬೆಳಗ್ಗೆ 10ರಿಂದಮಧ್ಯಾಹ್ನ 12:30ರ ವರೆಗೆ 45 ನಿಮಿಷ ಅವ ಧಿಯಮೂರು ಅವ ಧಿಯಲ್ಲಿ ವಾರದ ಆರು ದಿನಗಳಲ್ಲಿತರಗತಿ ನಡೆಸಲಾಗುವುದು. ಪ್ರತಿ ತರಗತಿಯಲ್ಲಿಗರಿಷ್ಠ 20 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದು. ಶಿಕ್ಷಕರು ಜ.1ಕ್ಕೂ ಮುನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಬಂದರೆ ಮಾತ್ರ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕೆಂದು ತಿಳಿಸಿದರು.
Related Articles
Advertisement
ಜಿಲ್ಲಾದ್ಯಂತ ಮೂರು ಸಾವಿರ ಶಾಲೆಗಳಿದ್ದು, 40 ಸಾವಿರಕ್ಕೂ ಅಧಿಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಪ್ರತಿ ದಿನ ಶಿಕ್ಷಕರು ಶಾಲೆಗೆ ಬರುವ ವಿದ್ಯಾರ್ಥಿಗಳನ್ನು
ಅವಲೋಕಿಸಿ ಕೊರೊನಾ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಲು ಸಮನ್ವಯತೆ ಸಾಧಿಸಬೇಕೆಂದು ಸೂಚಿಸಲಾಗಿದೆ. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರನ್ನು ತರಬೇಕು. ಶಾಲೆಯಲ್ಲಿ ಬಿಸಿ ನೀರು ಕೊಡುವ ವ್ಯವಸ್ಥೆ ಮಾಡಲುಶಾಲೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು. ಶಾಲೆಯ ಪ್ರಾರಂಭೋತ್ಸವದ ಕುರಿತು ಮುಖ್ಯ ಶಿಕ್ಷಕರು ಹಳ್ಳಿಗಳಲ್ಲಿ ಡಂಗೂರ ಬಾರಿಸಿ ಪ್ರಚಾರಕಾರ್ಯ ಕೈಗೊಳ್ಳಬೇಕು. ಶಿಕ್ಷಕರು ಡಿ.31ರ ವರೆಗೆ ಮಕ್ಕಳ ಮನೆ-ಮನೆಗೆ ಭೇಟಿ ನೀಡಿ, ಪೋಷಕರ ಒಪ್ಪಿಗೆ ಪತ್ರ ಸಮೇತ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆತಿಳಿಸಬೇಕು. ಶಾಲೆಯಲ್ಲಿ ಮಧ್ಯಾಹ್ನದ ಉಪಹಾರಬದಲು ಆಹಾರಧಾನ್ಯ ವಿತರಿಸುತ್ತಿರುವುದನ್ನು ಮುಂದುವರಿಸಲಾಗುವುದು. ವಸತಿ ಶಾಲೆಗೆ ಬರುವ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿ ವರ್ಗ ಕಳೆದ 72 ಗಂಟೆಯಲ್ಲಿ ಪಡೆಯಲಾದ ಕೋವಿಡ್ ನೆಗೆಟಿವ್ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದರು.
ಡಿಡಿಪಿಐ ಎಸ್. ಪಿ. ಬಾಡಂಗಡಿ ಮತ್ತು ಡಿಎಚ್‌ಒ ಡಾ| ರಾಜಶೇಖರ ಮಾಲಿ ಇದ್ದರು.
ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತು ಸೋಂಕಿನಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಪ್ರತಿದಿನ 15ರಿಂದ 20 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಜಿಮ್ಸ್ ಹಾಗೂ ಇಎಸ್‌ಐ ಆಸ್ಪತ್ರೆಗಳನ್ನು ನಾನ್ ಕೋವಿಡ್ ಆಸ್ಪತ್ರೆಗಳೆಂದು ಘೋಷಿಸಲಾಗಿದ್ದು, ನಾಗರಿಕರು ಎಲ್ಲ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು. -ಡಾ| ರಾಜಾ ಪಿ., ಸಿಇಒ, ಜಿ.ಪಂ