ಮೂಡುಬಿದಿರೆ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಆಳ್ವಾಸ್ ಪ್ರೌಢಶಾಲೆಯ ಎಲ್ಲ 442 ಮಂದಿ ಉತ್ತೀರ್ಣರಾಗಿ ಶೇ. 100 ಫಲಿತಾಂಶ ದಾಖಲಾಗಿದೆ. 277 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು 51 ಮಂದಿ 600ಕ್ಕೂ ಹೆಚ್ಚು, 15 ಮಂದಿ 610ಕ್ಕೂ ಅಧಿಕ ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇಶಾನ್ (619), ಮನೀಷಾ ಎನ್ (618), ಮಾನ್ಯ ಎನ್. ಪೂಜಾರಿ (617), ಋತುರಾಜ್ ರಾಮಕೃಷ್ಣ (617), ಮುರುಗೇಶ್ ಬಿರಾದರ್ (616), ಗೋಪಾಲ್ ಕೆಂಚಪ್ಪ (617), ಮಲ್ಲಿಕಾರ್ಜುನ ರಾಮಲಿಂಗಯ್ಯ (614), ಅನ್ನಪೂರ್ಣ ಕಾಮತ್ (612), ಪ್ರಣೀತಾ (612), ಭೂಮಿಕಾ (612), ಗೋಪಾಲ ಪರಮಾನಂದ (611), ಲಕ್ಷ್ಮೀ ಹನಮಂತ ( 611), ಅರ್ಪಿತಾ (610), ಪ್ರಜ್ವಲ್ ಗಣಪತಿ (610), ಸುಪ್ರೀಯಾ ಮಹಾಂತೇಶ್ (610) ಅಂಕ ಗಳಿಸಿದ್ದಾರೆ.
92 ಮಂದಿ ಶೇ. 95ಕ್ಕೂ ಅಧಿಕ, 189 ಮಂದಿ ಶೇ. 90ಕ್ಕೂ ಅಧಿಕ, ಇಬ್ಬರು 4 ವಿಷಯಗಳಲ್ಲಿ ಶೇ. 100, ಐವರು ವಿದ್ಯಾರ್ಥಿಗಳು 3 ವಿಷಯಗಳಲ್ಲಿ ಶೇ. 100 ಅಂಕ ಪಡೆದಿದ್ದಾರೆ. 25 ವಿದ್ಯಾರ್ಥಿಗಳು 2 ವಿಷಯಗಳಲ್ಲಿ, 101 ವಿದ್ಯಾರ್ಥಿಗಳು ಒಂದು ವಿಷಯ ಶೇ. 100 ಅಂಕ ಪಡೆದಿದ್ದಾರೆ.
ಪ್ರಥಮ ಭಾಷೆ ಕನ್ನಡದಲ್ಲಿ 12, ದ್ವಿತೀಯ ಭಾಷೆ ಕನ್ನಡದಲ್ಲಿ 17, ತೃತೀಯ ಭಾಷೆ ಕನ್ನಡದಲ್ಲಿ 15, ದ್ವಿತೀಯ ಭಾಷೆ ಇಂಗ್ಲಿಷ್ 4, ಪ್ರಥಮ ಭಾಷೆ ಸಂಸ್ಕೃತ 18, ತೃತೀಯ ಭಾಷೆ ಹಿಂದಿಯಲ್ಲಿ 29, ತೃತೀಯ ಭಾಷೆ, ಸಂಸ್ಕೃತದಲ್ಲಿ 11, ಗಣಿತದಲ್ಲಿ 1, ಸಮಾಜ ವಿಜ್ಞಾನದಲ್ಲಿ ಐವರು ವಿದ್ಯಾರ್ಥಿಗಳು ಶೇ. 100 ಅಂಕ ಪಡೆದಿದ್ದಾರೆ ಎಂದರು.
ಮುಖ್ಯ ಶಿಕ್ಷಕರಾದ ಪ್ರಶಾಂತ್ ಬಿ. (ಕನ್ನಡ ಮಾಧ್ಯಮ), ವಿಜಯಾ ಟಿ. ಮೂರ್ತಿ (ಆಂಗ್ಲ ಮಾಧ್ಯಮ), ಆಡಳಿತಾಧಿಕಾರಿ ಪ್ರೀತಂ ಕುಂದರ್ ಹಾಗೂ ಸ.ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.