Advertisement

ವೀಳ್ಯದೆಲೆಯೊಂದಿಗೆ ಅಂಕಗಳನ್ನು ಕಟ್ಟಿದ ದೀಪಾ

12:14 PM May 20, 2022 | Team Udayavani |

ರಬಕವಿ-ಬನಹಟ್ಟಿ: ದಿನಂಪ್ರತಿ ತೋಟದ ಕೆಲಸದಲ್ಲಿ ಭಾಗಿಯಾಗಿ ವೀಳ್ಯದೆಲೆಯನ್ನು ಗಿಡದಿಂದ ಹರಿದು ಅವುಗಳನ್ನು ಕಟ್ಟಿ ಶಾಲೆಗೆ ಬರುವ ವಿದ್ಯಾರ್ಥಿನಿಯೋರ್ವಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ.

Advertisement

ಬನಹಟ್ಟಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ದೀಪಾ ಅಣ್ಣಪ್ಪ ತಳವಾರ ಚಿಮ್ಮಡದ ಕೆರೆ ರಸ್ತೆಯಲ್ಲಿನ ತೋಟದ ಮನೆಯಲ್ಲಿ ವಾಸವಾಗಿದ್ದು, ಪ್ರತಿ ದಿನ ತೋಟದಲ್ಲಿ ವೀಳ್ಯದೆಲೆ ಕಟ್ಟಿಯೇ ಶಾಲೆಗೆ ಬರಬೇಕಾದ ಅನಿವಾರ್ಯತೆಯಲ್ಲೂ ಸಾಧನೆ ಅಮೋಘ ಆಗಿದೆ.

ಪ್ರತಿ ದಿನ ನಡೆಯುವ ತರಗತಿಗಳನ್ನು ಆಲಿಸುತ್ತ ದಿನಕ್ಕೆ ಮೂರ್‍ನಾಲ್ಕು ಗಂಟೆ ಓದಿನೊಂದಿಗೆ ತನ್ನ ಕಾಯಕದಲ್ಲಿ ತೊಡಗಿ ಪ್ರಸಕ್ತ ಎಸ್‌ ಎಸ್‌ಎಲ್‌ಸಿ ಫಲಿತಾಂಶದಲ್ಲಿ 625 ಕ್ಕೆ 586 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ಗಳಿಸಿದ್ದಾರೆ. ಕನ್ನಡ-124, ಇಂಗ್ಲಿಷ್‌-99, ಹಿಂದಿ-94, ಸಮಾಜ ವಿಜ್ಞಾನ-98, ವಿಜ್ಞಾನ-90, ಗಣಿತ-81 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ.

ಶಾಲೆಯಲ್ಲಿ ನಡೆಯುವ ಪಾಠಗಳಲ್ಲಿ ಹೆಚ್ಚು ಗಮನದಲ್ಲಿಟ್ಟು ಕೇಳುತ್ತಿದ್ದೆ. ಆಟದ ಸಮಯದಲ್ಲಿ ಆಟವಾಡಿ ಮತ್ತೆ ಚೈತನ್ಯದೊಂದಿಗೆ ಓದಿನತ್ತ ಗಮನಹರಿಸುತ್ತಿದ್ದೆ. ಪರೀಕ್ಷೆ ಸಂದರ್ಭ ಮಾತ್ರ ಓದದೆ ದಿನಾಲೂ ಮೂರ್‍ನಾಲ್ಕು ಗಂಟೆ ಓದಿನತ್ತ ಗಮನ ಸದಾವಿರುತ್ತಿತ್ತು. ಎಷ್ಟು ಓದಿದೆ ಎಂಬುದರ ಬದಲಾಗಿ ಏನನ್ನು ಓದಿದ್ದೇನೆ ಎಂಬುದು ಮುಖ್ಯ. ಇದರಿಂದ ಮನನ ಶಕ್ತಿ ಹೆಚ್ಚಾಗುವಲ್ಲಿ ನನಗೆ ಕಾರಣವಾಗಿದೆ ಎನ್ನುತ್ತಾರೆ ದೀಪಾ.

Advertisement

Udayavani is now on Telegram. Click here to join our channel and stay updated with the latest news.

Next