ವಾಷಿಂಗ್ಟನ್: ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್ʼ ಸಿನೆಮಾ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ಬಳಿಕ ಎಂ.ಎಂ.ಕೀರವಾಣಿ ಅವರಿಗೆ ಉತ್ತಮ ಸಂಗೀತಕ್ಕಾಗಿ “ಲಾಸ್ ಏಂಜಲೀಸ್ ಫಿಲ್ಮ್ ಕ್ರಿಟಿಕ್’ ಪ್ರಶಸ್ತಿ ಲಭಿಸಿದ್ದು, ಈ ವೇಳೆ ʼಅವತಾರ್ʼ ಸರಣಿಯ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರನ್ನು ಭೇಟಿಯಾಗಿದ್ದಾರೆ.
ಇತ್ತೀಚೆಗೆ ರಾಜಮೌಳಿ ಹಾಲಿವುಡ್ ನಲ್ಲಿ ಮಾಸ್ಟರ್ ಆಫ್ ಸ್ಟೋರಿ ಟೇಲಿಂಗ್ ಎಂದೇ ಖ್ಯಾತರಾಗಿರುವ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ (Steven Spielberg) ಅವರನ್ನು ರಾಜಮೌಳಿ ಗೋಲ್ಡನ್ ಗ್ಲೋಬ್ ಅವಾರ್ಡ್ ನಲ್ಲಿ ಭೇಟಿಯಾಗಿರುವ ಫೋಟೋವನ್ನು ಹಂಚಿಕೊಂಡು, “ನಾನು ದೇವರನ್ನು ಭೇಟಿಯಾದೆ” ಎಂದು ಬರೆದುಕೊಂಡಿದ್ದರು.
ಇದೀಗ ಲಾಸ್ ಏಂಜಲೀಸ್ ನಲ್ಲಿ ಪ್ರಶಸ್ತಿ ಸಮಾರಂಭದಲ್ಲಿ ರಾಜಮೌಳಿ ಜೇಮ್ಸ್ ಕ್ಯಾಮೆರಾನ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಜಮೌಳಿ ಅವರʼಆರ್ ಆರ್ ಆರ್ʼ ಸಿನಿಮಾದ ಬಗ್ಗೆ ಜೇಮ್ಸ್ ಕ್ಯಾಮೆರಾನ್ ಮಾತಾನಾಡಿದ್ದಾರೆ.
ಇದನ್ನೂ ಓದಿ: ಅಂದು ಸಹ ಪೈಲೆಟ್ ಆಗಿದ್ದ ಪತಿ ಸಾವು; ಇಂದು ಸಹ ಪೈಲೆಟ್ ಆಗಿ ಪತ್ನಿಯೂ ಸಾವು.!
Related Articles
ಜೇಮ್ಸ್ ಕ್ಯಾಮೆರಾನ್ ಹಾಗೂ ಅವರ ಪತ್ನಿ ಇಬ್ಬರೂ ರಾಜಮೌಳಿ ಅವರೊಂದಿಗೆ ಮಾತಾನಾಡುವ ಪೋಟೋವನ್ನು ಎಂ.ಎಂ.ಕೀರವಾಣಿ ಹಂಚಿಕೊಂಡಿದ್ದಾರೆ. ದಿಗ್ಗಜ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರು ನಮ್ಮ ʼಆರ್ ಆರ್ ಆರ್ʼ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇದಲ್ಲದೆ ಅವರು ಪತ್ನಿಗೂ ಸಿನಿಮಾ ನೋಡುವಂತೆ ಹೇಳಿ, ಅವರೊಂದಿಗೆ ಮತ್ತೊಮ್ಮೆ ಸಿನಿಮಾ ನೋಡುವುದಾಗಿ ಹೇಳಿದ್ದಾರೆ ಎಂದು ರಾಜಮೌಳಿ ಟ್ವಿಟರ್ ನಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ.
ಚಿತ್ರದ ಮ್ಯೂಸಿಕನ್ನು ಅವರು ಮೆಚ್ಚಿಕೊಂಡು ಶ್ಲಾಘಿಸಿದ್ದಾರೆ. ಅರು ಎರಡು ಬಾರಿ ಸಿನಿಮಾವನ್ನು ನೋಡಿದ್ದಾರರೆ ಎಂದು ಎಂ.ಎಂ.ಕೀರವಾಣಿ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.