Advertisement

ಶ್ರೀರಂಗರ ಒಡನಾಡಿ, ರಂಗಭೂಮಿ ಹಿರಿಯ ನಿರ್ದೇಶಕ ಎಚ್.ವಿ. ವೆಂಕಟಸುಬ್ಬಯ್ಯ ವಿಧಿವಶ

12:09 PM Sep 13, 2022 | Team Udayavani |

ಬೆಂಗಳೂರು: ಕನ್ನಡ ರಂಗಭೂಮಿ ಹಿರಿಯ ನಿರ್ದೇಶಕ ಎಚ್.ವಿ. ವೆಂಕಟಸುಬ್ಬಯ್ಯ (85ವರ್ಷ) ಅವರು ಸೋಮವಾರ (ಸೆಪ್ಟೆಂಬರ್ 13) ಬೆಳಗ್ಗೆ ನಿಧನ ಹೊಂದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಶೇಷಾದ್ರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Advertisement

ಇದನ್ನೂ ಓದಿ:ವಿದ್ಯಾರ್ಥಿಗಳನ್ನು ಅಟ್ಟಿಸಿಕೊಂಡು ಬಂದ ಬೀದಿ ನಾಯಿಗಳು: ವಿಡಿಯೋ ನೋಡಿ

ಪತ್ನಿ ಡಾ.ಶಾರದಾ, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಜೀವಮಾನ ಸಾಧನೆಗಾಗಿ ವೆಂಕಟಸುಬ್ಬಯ್ಯನವರು ಬಿ.ವಿ.ಕಾರಂತ ಪ್ರಶಸ್ತಿಗೆ ಭಾಜನರಾಗಿದ್ದರು. ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ವೆಂಕಟಸುಬ್ಬಯ್ಯನವರಿಗೆ ಸಂದಿತ್ತು.

ಬುಧವಾರ(ಸೆ.14) ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಈ ವೇಳೆ ಅಮೆರಿಕದಲ್ಲಿ ನೆಲೆಸಿರುವ ಮಕ್ಕಳಾದ ಮಾಳವಿಕಾ ಮತ್ತು ಮಾನಸ ಬೆಂಗಳೂರಿಗೆ ಆಗಮಿಸಲಿದ್ದು, ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ರಂಗ ಸಂಪದದ ಜೆ.ಲೋಕೇಶ್ ತಿಳಿಸಿದ್ದಾರೆ.

ರಂಗಸಂಪದ ತಂಡವನ್ನು ಕಟ್ಟಿ ಬೆಳೆಸಿದ್ದ ಪ್ರಮುಖರಲ್ಲಿ ವೆಂಕಟಸುಬ್ಬಯ್ಯನವರು ಕೂಡಾ ಒಬ್ಬರಾಗಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರು ನಿರ್ದೇಶಿಸಿದ ಶ್ರೀರಂಗರ ಸಮಗ್ರ ಮಂಥನ ನಾಟಕ ಅಂದು ಸಂಚಲನ ಮೂಡಿಸಿತ್ತು.

Advertisement

ಕನ್ನಡ ರಂಗಭೂಮಿಯಲ್ಲಿ ಸುಬ್ಬಣ್ಣ ಎಂದೇ ಜನಪ್ರಿಯರಾಗಿದ್ದ ಎಚ್.ವಿ.ವೆಂಕಟಸುಬ್ಬಯ್ಯನವರು 1936ರಲ್ಲಿ ಮೈಸೂರಿನ ಹಂಪಾಪುರದಲ್ಲಿ ಜನಿಸಿದ್ದರು. ಎಚ್.ವಿ. ಸೌಂಡ್ ಎಂಜಿನಿಯರಿಂಗ್ ಮತ್ತು ನಾಟಕ ಕಲೆಯಲ್ಲಿ ಡಿಪ್ಲೊಮಾ ಮಾಡಿದ್ದರು. ಎಲ್.ಆರ್.ಡಿ.ಇಯಲ್ಲಿ ತಾಂತ್ರಿಕ ಅಧಿಕಾರಿಯಾಗಿ 1996ರವರೆಗೆ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ವೆಂಕಟಸುಬ್ಬಯ್ಯನವರು ನಾಟಕಕಾರ ಶ್ರೀರಂಗರ ಒಡನಾಡಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next