Advertisement

ಶ್ರೀರಂಗಪಟ್ಟಣ : ವಿಷ ಆಹಾರ ಸೇವಿಸಿ 9 ಮೇಕೆಗಳು ಸಾವು

08:25 PM Apr 30, 2022 | Team Udayavani |

ಶ್ರೀರಂಗಪಟ್ಟಣ: ವಿಷ ಆಹಾರ ಸೇವಿಸಿ 9 ಮೇಕೆಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗೇಶ್ ಎಂಬುವವರಿಗೆ ಸೇರಿದ್ದ 9 ಮೇಕೆಗಳು ಸಾವನ್ನಪ್ಪಿವೆ.

Advertisement

ಎಂದಿನಂತೆ ಗ್ರಾಮದ ಹೊರಗೆ ಕ್ರಿಮಿಮಿನಾಶಕ ಸಿಂಪಡಣೆ ಮಾಡಲಾಗಿದ್ದು ಇದರಿಂದಲೇ ಸಾವನ್ನಪ್ಪಿರಬಹುದು ಎನ್ನಲಾಗಿದ್ದು, ಖಚಿತ ಮಾಹಿತಿ ತಿಳಿದು ಬಂದಿಲ್ಲ. ಪಾಲಹಳ್ಳಿ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಘಟನೆಯಿಂದ ರೈತ ನಾಗೇಶ್ ಜೀವನಕ್ಕೆ ದಾರಿಯಾಗಿದ್ದ ಮೇಕೆಗಳ ಸಾವಿನಿಂದ ಕಂಗಾಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಪಶು ಇಲಾಖೆ ಹಾಗೂ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬಿರುಸಾಗಿ ಆಡಳಿತ ಮಾಡಿದರೆ ಡಿಕೆಶಿಯವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ: ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next