Advertisement

ಶ್ರೀರಂಗಪಟ್ಟಣ ದಸರಾ ಜಂಜೂ ಸವಾರಿಗೆ ಆನೆಗಳ ಮೆರಗು

12:31 PM Oct 09, 2021 | Team Udayavani |

ಶ್ರೀರಂಗಪಟ್ಟಣ: ಈ ಬಾರಿಯ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಜಂಬೂ ಸವಾರಿಗೆ ಆನೆ ಗಳನ್ನು ಕರೆಸಲಾಗಿದೆ.

Advertisement

ಅರಣ್ಯ ಇಲಾಖೆಯ ಸಹಯೋಗದಲ್ಲಿ ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಗೆ ಗೋಪಾಲಸ್ವಾಮಿ ಮತ್ತು ಕಾವೇರಿ ಎಂಬ ಆನೆಗಳು ಇಂದು ಆಗಮಿಸಿದ್ದು, ಆನೆಗಳಿಗೆ ಸ್ಥಳೀಯ ತಾಲೂಕು ಆಡಳಿತದಿಂದ ಧಾರ್ಮಿಕ ಸಂಪ್ರದಾಯ ದಂತೆ ದಸರಾ ಬನ್ನಿಮಂಟದ ಬಳಿ ಬರಮಾಡಿ ಕೊಳ್ಳಲಾಯಿತು.

ಆಗಮಿಸಿರುವ ಆನೆ ಮೇಲೆ ಮರದ ಅಂಬಾರಿ ಕಟ್ಟಿ ಅದರಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಇರಿಸಿ ಪಟ್ಟಣದ ರಂಗನಾಥ ಮೈದಾನವರೆಗೂ ಜಂಜೂಸವಾರಿ ಮೆರವಣಿಗೆ  ನಡೆಯಲಿದೆ.

Advertisement

ಆನೆಗಳನ್ನು ಬರಮಾಡಿಕೊಳ್ಳುವ ವೇಳೆ ಎಸಿ ಶಿವಾನಂದ್ ಮೂರ್ತಿ, ಪುರಸಭಾ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಪ್ರಕಾಶ್, ಪುರೋಹಿತ ಡಾ.ಭಾನುಪ್ರಕಾಶ್ ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next