Advertisement

ನೆಲದ ಮೇಲೆ ಕುಳಿತು ಸಮಸ್ಯೆ ಆಲಿಸಿದ ಸಚಿವ

09:53 AM Sep 21, 2019 | Team Udayavani |

ಬಾಗಲಕೋಟೆ : ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸಚಿವ ಶ್ರೀರಾಮುಲು, ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆ ಆವರಣದ ನೆಲದ ಮೇಲೆ ಕುಳಿತು ರೋಗಿಗಳ, ವೈದ್ಯರ ಹಾಗೂ ಸಿಬ್ಬಂದಿ ಸಮಸ್ಯೆ ಆಲಿಸಿದರು.

Advertisement

ಜಿಲ್ಲಾ ಆಸ್ಪತ್ರೆಯಲ್ಲಿರುವ ಎಲ್ಲ ವಾರ್ಡಗಳಲ್ಲಿ ಸಂಚರಿಸಿ, ನಂತರ ಬಾಣಂತಿಯರ ಕೊಠಡಿಗೆ ತೆರಳಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಚಿಕ್ಕಶೆಲ್ಲಿಕೇರಿಯ ಹನಮವ್ವ ಭಜಂತ್ರಿ ಅವರನ್ನು ಭೇಟಿ ಮಾಡಿ, ಇದೇ ವೇಳೆ ಮಕ್ಕಳನ್ನು ಎತ್ತಿಕೊಂಡು, ತಾಯಿ ಮಗುವಿನ ಆರೋಗ್ಯ ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next