ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ತಾಂತ್ರಿಕ ಪ್ರಾಜೆಕ್ಟ್ಗಳ ಪ್ರದರ್ಶನ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಎಜಿಯೋನ್ ಟೆಕ್ನಾಲಜೀಸ್‌ನ ಮುಖ್ಯ ಕಾರ್ಯಾಧಿಕಾರಿ ರವಿ ಕಿರಣ್ ಮಾತನಾಡಿ, ವಿದ್ಯಾರ್ಥಿಗಳು ಸಾಮಾನ್ಯಜ್ಞಾನ ಮತ್ತು ಕೌಶಲವನ್ನು ಶೈಕ್ಷಣಿಕವಾಗಿ ಅಳವಡಿಸಿಕೊಂಡು ಮುಂದುವರಿ ಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವ ವಿದ್ಯಾಲಯದ ಕುಲಪತಿ ಹಾಗೂ ಎ.ಶಾಮ ರಾವ್ ಪ್ರತಿಷ್ಠಾನದ ಅಧ್ಯಕ್ಷ ಎ. ರಾಘವೇಂದ್ರ ರಾವ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜಕ್ಕೆ ಉಪಯೋಗವಾಗುವ ಕೌಶಲಯುತ ಪ್ರಾಜೆಕ್ಟ್ಗಳನ್ನು ಕಂಡು ಹುಡುಕಬೇಕು ಎಂದರು.
ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲ ಯದ ಪ್ರಾಂಶುಪಾಲ ಡಾ| ಶ್ರೀನಿವಾಸ ಮಯ್ಯ ಡಿ., ಪ್ರೊಜೆಕ್ಟ್ ಸಂಯೋ ಜಕ ಡಾ| ರಾಮಚಂದ್ರ ಉಪಸ್ಥಿತರಿದ್ದರು.
ಈ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಒಟ್ಟು383 ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಲಾಗು ತ್ತಿವೆ. ಇವುಗಳಲ್ಲಿ 175 ಪ್ರಾಜೆಕ್ಟ್ ಅಂತಿಮ ವರ್ಷದ ತಾಂತ್ರಿಕ ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾಗುತ್ತಿವೆ. ಇದಲ್ಲದೆ 208ಕಿರು ಪ್ರಾಜೆಕ್ಟ್ಗಳು ತೃತೀಯ ವರ್ಷದ ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾಗು ತ್ತಿವೆ. ಈ ಸಂದರ್ಭ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಗುವುದು.
ವಿದ್ಯಾರ್ಥಿಗಳಾದ ಚೈತನ್ಯ ಪಿ. ಸ್ವಾಗತಿಸಿದರು. ಮಧು ಶ್ರೀ ಆಳ್ವ ವಂದಿಸಿದರು. ಸೂರಜ್, ಶಿವಾನಿ ಕಾರ್ಯಕ್ರಮ ನಿರೂಪಿಸಿದರು.