Advertisement
ಸಮಾಜ ಸೇವಕ, ಉದ್ಯಮಿ ವಿರಾರ್ ಶಂಕರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಡೊಂಬಿವಲಿಯ ಹೊಟೇಲ್ ಅಸೋಸಿಯೇಶನ್ ಇದರ ಪದಾಧಿಕಾರಿಗಳು, ಡೊಂಬಿವಲಿ ಪರಿಸರದ ತುಳು- ಕನ್ನಡಿಗರ ಸಂಘ-ಸಂಸ್ಥೆಗಳ ಸಹಕಾರ ದೊಂದಿಗೆ ನಡೆದ ಮಹೋತ್ಸವದಲ್ಲಿ ಸಂಜೆ ತಿರುಪತಿ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಸಿ. ಆರ್. ಆನಂದ ತೀರ್ಥಾಚಾರ್ಯರ ನೇತೃತ್ವದಲ್ಲಿ ಶ್ರೀನಿವಾಸ ದೇವರಿಗೆ ಪ್ರಿಯವಾದ ತಿರುಮಂಜನ ಅಭಿಷೇಕ, ಪುಷ್ಪಯಾಗ ನಡೆಯಿತು. ವಿವಿಧ ಪೂಜಾದಿಗಳನ್ನು ತಿರುಪತಿಯಿಂದ ಆಗಮಿಸಿದ ಪುರೋಹಿತ ವರ್ಗದರು ನಡೆಸಿಕೊಟ್ಟರು.
Related Articles
Advertisement
ಶ್ರೀನಿವಾಸ ಕಲ್ಯಾಣೋತ್ಸವದ ಮೈದಾನದ ಹೊರಾಂಗಣದಲ್ಲಿ ಶ್ರೀ ಮಹಾವಿಷ್ಣುವಿನ ಶೇಷಶಯ, ಶ್ರೀನಿವಾಸ ದೇವರ ಕಲ್ಯಾಣೋತ್ಸವ, ಶ್ರೀ ಮಹಾವಿಷ್ಣು ದೇವರ ವಿವಿಧ ಅವತಾರಗಳ ಚಿತ್ತಾಕರ್ಷಕ ವಿದ್ಯುದ್ದಿಪಾಲಂಕೃತ ಆಕೃತಿಗಳು ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದವು. ಮಹಾಮಂಗಳಾರತಿಯ ಆನಂದರ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ 16 ಬಗೆಯ ಖಾದ್ಯವನ್ನೊಳಗೊಂಡ ಅನ್ನ ಸಂತರ್ಪಣೆ ನಡೆಯಿತು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ 10 ಬಗೆಯ ಖಾದ್ಯವನ್ನೊಳಗೊಂಡ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಮೈದಾನದುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಡೊಂಬವಲಿ, ಕಲ್ಯಾಣ್, ಭಿವಂಡಿ ಪರಿಸರದ ಜನರು ಜಾತಿ, ಮತ, ಭೇದವನ್ನು ಮರೆತು ಪಾಲ್ಗೊಂಡಿದ್ದರು. ಉತ್ಸವದಲ್ಲಿ ಡೊಂಬಿವಲಿಯ ಪ್ರತಿಷ್ಠಿತ ಸಂಘ-ಸಂಸ್ಥೆಗಳಾದ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವ ಮಂಡಳ, ಕರ್ನಾಟಕ ಸಂಘ ಡೊಂಬಿವಲಿ, ಬಂಟ್ಸ್ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಪ್ರಾದೇಶಿಕ ಸಮಿತಿ, ಕುಲಾಲ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಶ್ರೀ ಸಾಯಿನಾಥ ಮಿತ್ರ ಮಂಡಳ, ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ, ದುರ್ಗಾಂಬಿಕಾ ಭಜನಾ ಮಂಡಳ, ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆàರ್ ಫೌಂಡೇಷನ್, ಮುಂಬ್ರಾ ಮಿತ್ರ ಭಜನ ಮಂಡಳಿ, ಯಕ್ಷಕಲಾ ಸಂಸ್ಥೆ, ಶ್ರೀ ಮಾತಾ ಅಮೃತಾನಂದಮಯಿ ಸತ್ಸಂಗ, ಶ್ರೀ ಜಗದಂಬಾ ಮಂದಿರ ಡೊಂಬಿವಲಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಕ್ತ ಮಂಡಳಿ ಹಾಗೂ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಭಕ್ತರು ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಉದ್ಯಾವರ