Advertisement

ಬಂಟ ಸಮಾಜವು ಅಶಕ್ತರ ಪಾಲಿನ ಆಶಾಕಿರಣವಾಗಲಿ

05:16 PM Sep 05, 2018 | |

ಪುಣೆ: ಪುಣೆ ಬಂಟರ ಸಂಘದ ಮುಖಾಂತರ ಸಮಾಜ ಬಾಂಧವರೆಲ್ಲರನ್ನು ಒಗ್ಗೂಡಿಸಿಕೊಂಡು ಶ್ರದ್ಧಾ ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪುಣ್ಯ ಪರ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸುತ್ತಿರುವುದು ಪುಣ್ಯದ ಕಾರ್ಯವಾಗಿದೆ. ಆತ್ಮಸಾಕ್ಷಿಯಾಗಿ ಗೋವಿಂದನನ್ನು ಭಕ್ತಿಯಿಂದ ನಮಿಸಿದರೆ ನಮ್ಮೊಳಗಿನ ವೈಮನಸ್ಸುಗಳು ದೂರವಾಗಿ, ಜೀವನದ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಿ ಬದುಕು ಪಾವನವಾಗುತ್ತದೆ. ಪುರಾತನ ಇತಿಹಾಸವುಳ್ಳ ಬಾಕೂìರು ಮಹಾಸಂಸ್ಥಾನವನ್ನು  ಸಮುದಾಯದ ಅಭ್ಯುದಯದ ಆಶಯದೊಂದಿಗೆ ಕಟ್ಟುವ ಕಾರ್ಯ ಮಾಡಲಾಗಿದೆ. ಕೇವಲ ಗುರುಸ್ಥಾನದಲ್ಲಿ ಇದ್ದುಕೊಂಡು ತನ್ನ ಸ್ವಾರ್ಥಕ್ಕಾಗಿ ಎನನ್ನೂ ಬಯಸದೆ ಕೇವಲ ಬಂಟ ಸಮಾಜವನ್ನು ಒಗ್ಗೂಡಿಸಿ ಆ ಮೂಲಕ ಸಮುದಾಯದ ಅಭಿವೃದ್ಧಿಯ ಚಿಂತನೆಯೇ ನನ್ನ ಉದ್ದೇಶವಾಗಿದೆ. ಸಮುದಾಯದ ಅದೆಷ್ಟೋ ಜನರು ಬಡತನದಿಂದ ಜೀವಿಸುತ್ತಿ¨ªಾರೆ. ಮಾರಕ ಕಾಯಿಲೆಗಳಿಗೆ ಬಲಿಯಾಗಿ ಚಿಕಿತ್ಸೆಗಾಗಿ ಪರಿತಪಿಸುತ್ತಿ¨ªಾರೆ. ಅಂತಹ ಅಶಕ್ತರ ಬಾಳಿಗೆ ಬೆಳಕಾಗುವ ಮೂಲಕ ಅವರ ಕಣ್ಣೊರೆಸುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದು ಬಾಕೂìರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ  ಸಂತೋಷ ಭಾರತಿ ಶ್ರೀಪಾದರು ನುಡಿದರು.

Advertisement

ಅವರು ಸೆ. 3 ರಂದು ಪುಣೆ ಬಂಟರ ಸಂಘದ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ  ಬಂಟ್ಸ್‌  ಅಸೋಸಿಯೇಶನ್‌ ಪುಣೆ ಹಾಗೂ ಬಂಟರ ಸಂಘ ಪಿಂಪ್ರಿ-ಚಿಂಚಾÌಡ್‌ ಸಹಕಾರದೊಂದಿಗೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿ, ಅವರು ಮಾತನಾಡುತ್ತಾ ದೇವರ ಹೆಸರಿನಲ್ಲಿ ಆಡಂಬರದ ಪೂಜೆ ಸರಿಯಲ್ಲ. ಮೊದಲು ಧಾರ್ಮಿಕ ಜಾಗೃತಿ ಅಗತ್ಯವಾಗಿದೆ. ದೇವಸ್ಥಾನಗಳಿಗೆ ಚಿನ್ನದ ಹೊದಿಕೆ ಹೊದಿಸುವುದರಿಂದ ಸಮಾಜಕ್ಕೆ ಪ್ರಯೋಜನವಾಗದು. ಇದರ ಬದಲು ಬಡವರ ಚಿಕಿತ್ಸೆಗೆ ನೆರವಾಗುವ ಸುಸಜ್ಜಿತ ಆಸ್ಪತ್ರೆಯೊಂದು  ನಿರ್ಮಾಣವಾದರೆ ಸಮಾಜದ ಉದ್ಧಾರ ಸಾಧ್ಯ. ಧರ್ಮ ನಮಗೆ ಸಂಸ್ಕಾರವಂತರಾಗಿ ಹೇಗೆ ಬಾಳಬೇಕೆಂಬುದನ್ನು ತಿಳಿಸಿದೆ. ಆದುದರಿಂದ ನಮ್ಮ ಮಕ್ಕಳಿಗೆ ಸಭ್ಯ ಸಂಸ್ಕಾರವನ್ನು ನೀಡುವ ಕಾರ್ಯ ಆಗಬೇಕಾಗಿದೆ. ಬಂಟರ ಮದುವೆಯ  ಆಚರಣೆಯಾದ ಮದರಂಗಿ ಕಾರ್ಯಕ್ರಮಕ್ಕೆ ತನ್ನದೇ ಆದ ಧಾರ್ಮಿಕ ಮಹತ್ವವಿದೆ. ಅದನ್ನು ತಿಳಿದುಕೊಂಡು ಆಡಂಬರದ ಆಚರಣೆಗಳಿಗೆ ಆಸ್ಪದ ನೀಡದಿರಿ. ಭಗವಂತನ ಮುಂದೆ ಎಲ್ಲರೂ ಅಹಂ ಬೆಳೆಸಿಕೊಳ್ಳದೆ ಪರಸ್ಪರ ದ್ವೇಷ, ಭಿನ್ನಾಭಿಪ್ರಾಯಗಳನ್ನು ಬಿಟ್ಟು  ಬದುಕಬೇಕಾಗಿದೆ. ಪುಣೆಯಲ್ಲಿ ಬಾಕೂìರು ಮಹಾಸಂಸ್ಥಾನದ ಘಟಕವೊಂದನ್ನು ಸ್ಥಾಪಿಸುವ ಮೂಲಕ ಸಮುದಾಯದ ಸೇವೆಗೆ ಆದ್ಯತೆ ನೀಡಬೇಕಾಗಿದೆ ಎಂದರು.

ಬಾಕೂìರು ಮಹಾಸಂಸ್ಥಾನದ ವಿಶ್ವಸ್ಥರಾದ ಕರುಣಾಕರ ಎಂ. ಶೆಟ್ಟಿ ಅವರು ಮಾತನಾಡಿ, ಪುಣೆ ಬಂಟರ ಸಂಘದ ಆಶ್ರಯದಲ್ಲಿ ಪೂಜ್ಯ ಗುರುಗಳ ಉಪಸ್ಥಿತಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಭಕ್ತರ ಅಪೇಕ್ಷೆಯಂತೆ ಭಕ್ತಿ ಸಂಭ್ರಮದಿಂದ  ನಡೆಸಲಾಗಿದೆ. ಗುರುಗಳ ಆಶಯದಂತೆ ಬಾಕೂìರು ಸಂಸ್ಥಾನವನ್ನು ಸಮಾಜದ ಕ್ಷೇಮದ ನೆಲೆಯಲ್ಲಿ ಕಟ್ಟಲಾಗಿದ್ದು ಮುಂಬಯಿಯ ಗುರುಭಕ್ತರು ಸಹಕಾರ ನೀಡಿ ಬೆಂಬಲಿಸಿ¨ªಾರೆ. ಅದೇ ರೀತಿ ಪುಣೆಯ ಸಮಾಜ ಬಾಂಧವರೂ ಸಹಕರಿಸಿ ಎಂದರು.

ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಬಿ. ಶೆಟ್ಟಿ, ಬಂಟ್ಸ್‌  ಅಸೋಸಿಯೇಶನ್‌ ಪುಣೆ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಎರ್ಮಾಳ್‌ ನಾರಾಯಣ ಕೆ. ಶೆಟ್ಟಿ, ಎರ್ಮಾಳ್‌ ವಿಶ್ವನಾಥ ಶೆಟ್ಟಿ, ವಿಠಲ್‌ ಶೆಟ್ಟಿ  ಮತ್ತಿತರ ಆಹ್ವಾನಿತ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಳಗ್ಗಿನಿಂದ ಆರಂಭಗೊಂಡ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸುಪ್ರಭಾತ ಸೇವೆ, ದೇವರಿಗೆ ವಿಶೇಷ ಅಭಿಷೇಕ, ಇನ್ನಿತರ ಪರಂಪರಾಗತ ವೈಧಿಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ವೆಂಕಟರಮಣ ದೇವರ ಬಣ್ಣ-ಬಣ್ಣದ ಹೂವಿನಿಂದ ಅಲಂಕೃತ  ಮಂಟಪ ವಿಶೇಷವಾಗಿ ಶೋಭಿಸುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ  ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಯಿಂದ ಪುಳಕಿತಗೊಂಡರು. ಈ ಸಂದರ್ಭ ವಿಶ್ವ ಸಂತೋಷ ಭಾರತಿ ಶ್ರೀಗಳು ಸೆ. 9 ರಂದು ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮಿಲನದ ಆಮಂತ್ರಣ ಪತ್ರಿಕೆಯನ್ನು ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು.

Advertisement

ಬಾಕೂìರು ಸಂಸ್ಥಾನದ ವತಿಯಿಂದ ಸಂತೋಷ್‌ ಗುರೂಜಿಯವರ ಭಾವಚಿತ್ರವನ್ನು ಪುಣೆ ಬಂಟರ ಸಂಘಕ್ಕೆ  ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಸಾಂಪ್ರದಾಯಿಕ ಭೋಜನ ವ್ಯವಸ್ಥೆ, ಬೆಳಗ್ಗಿನ ಉಪಾಹಾರ ವ್ಯವಸ್ಥೆ ಎಲ್ಲರ ಗಮನ ಸಳೆಯಿತು. ಕಾರ್ಯಕ್ರಮವನ್ನು ಪುಣೆ ಬಂಟರ ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ಮತ್ತು ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ ನೇತೃತ್ವದಲ್ಲಿ ಸಂಘಟಿಸಲಾಯಿತು.

ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಉಪಾಧ್ಯಕ್ಷರಾದ  ರಾಮಕೃಷ್ಣ ಶೆಟ್ಟಿ, ಮಾಧವ ಆರ್‌. ಶೆಟ್ಟಿ, ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ವಿವೇಕಾನಂದ ಶೆಟ್ಟಿ ಆವರ್ಸೆ, ಪ್ರಶಾಂತ್‌ ಎ. ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಪ್ರವೀಣ್‌ ಶೆಟ್ಟಿ, ಸತೀಶ್‌ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಶಶೀಂದ್ರ ಶೆಟ್ಟಿ, ಗಣೇಶ್‌ ಹೆಗ್ಡೆ,  ಮಿಯ್ನಾರು ರಾಜ್‌ ಕುಮಾರ್‌ ಶೆಟ್ಟಿ, ಸುಜಿತ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಮತ್ತು ಸದಸ್ಯರು, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್‌ ಜೆ. ಶೆಟ್ಟಿ ಮತ್ತು ಸದಸ್ಯರು, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು ಮತ್ತು ಪದಾಧಿಕಾರಿಗಳು ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಪುಣೆ ಬಂಟರ ಭವನದಲ್ಲಿ ಬಾಕೂìರು ಮಹಾಸಂಸ್ಥಾನದ ಪೂಜ್ಯ ಗುರುವರ್ಯರಾದ ಸಂತೋಷ ಗುರೂಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ದೃಷ್ಟಿಯಿಂದ ಶೀನಿವಾಸ ಕಲ್ಯಾಣೋತ್ಸವ ನಡೆಸಲಾಗಿದ್ದು, ಈ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ನೆರವಾದ ಸಂಘದ ಎಲ್ಲ ಪದಾಧಿಕಾರಿಗಳು, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘ ಹಾಗೂ ಬಂಟ್ಸ್‌ ಅಸೋಸಿಯೇಶನ್‌ ಪುಣೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ  ಕೃತಜ್ಞತೆಗಳು. ಸಮಾಜದವರ ಸಹಕಾರ ಸದಾ ಇರಲಿ.
ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು  ,   
ಅಧ್ಯಕ್ಷರು : ಪುಣೆ ಬಂಟರ ಸಂಘ

ಭವ್ಯ ಇತಿಹಾಸದ ಬಾಕೂìರು ಸಂಸ್ಥಾನವು ಪೂಜ್ಯ ಗುರುಗಳ ಮಾರ್ಗದರ್ಶನದೊಂದಿಗೆ ಸಮಾಜದ ಅಭ್ಯುದಯದ ಕಾರ್ಯವನ್ನು ಮಾಡುತ್ತಿದೆ. ಸಮಾಜದ ಅಶಕ್ತರ ಸೇವೆ, ಬಂಟರ ಇತಿಹಾಸ, ಕಟ್ಟುಕಟ್ಟಳೆ, ಯುವ ಪೀಳಿಗೆಗೆ ಸಂಸ್ಕೃತಿಯನ್ನು ಬಿತ್ತರಿಸುವಂತಹ ಕಾರ್ಯವನ್ನು ಮಾಡುತ್ತಿದೆ. ಪುಣೆಯಲ್ಲಿ  ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಿದ ಪುಣೆ ಬಂಟರ ಸಂಘಕ್ಕೆ ಅಭಿನಂದನೆಗಳು.
ಡಾ| ಸತ್ಯಪ್ರಕಾಶ್‌ ಶೆಟ್ಟಿ ,   
ಅಧ್ಯಕ್ಷರು : ಬಾಕೂìರು ಮಹಾಸಂಸ್ಥಾನದ ಮುಂಬಯಿ ಘಟಕ  

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next