Advertisement

ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ ಪ್ರಸಾದ್‌ ವಾಗ್ಧಾಳಿ

06:23 AM May 07, 2019 | Team Udayavani |

ಚಾಮರಾಜನಗರ: “ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕವಚನ ಪ್ರಯೋಗ ಮಾಡಿರುವುದು ಸಿದ್ದರಾಮಯ್ಯ ಎಂಥ ವ್ಯಕ್ತಿತ್ವವುಳ್ಳವರು ಎಂಬುದನ್ನು ತೋರಿಸುತ್ತದೆ’ ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ವಾಗ್ಧಾಳಿ ನಡೆಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “130 ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನಿಯವರನ್ನು ಟೀಕೆ ಮಾಡುವಾಗ ಬಳಕೆ ಮಾಡುವ ಪದಗಳು ಹೇಗಿರಬೇಕೆಂಬ ಸಾಮಾನ್ಯ ಜ್ಞಾನವೂ ಆತನಿಗಿಲ್ಲ. ಇಂಥ ದರ್ಪದ, ದುರಹಂಕಾರಿ ವ್ಯಕ್ತಿ ನಮ್ಮ ರಾಜ್ಯ ಮುಖ್ಯಮಂತ್ರಿಯಾಗಿದ್ದರು ಎಂಬುದು ನಾಚಿಕೆಗೇಡು’ ಎಂದು ಟೀಕಿಸಿದರು.

“ರಾಜ್ಯದ ಜನರು ಈತನ ನಾಯಕತ್ವದ ವಿರುದ್ಧ ಮತ ಹಾಕಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಜನರು 34 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದರು. ಇನ್ನೂ ಸಿದ್ದರಾಮಯ್ಯನಿಗೆ ಬುದ್ಧಿ ಬಂದಿಲ್ಲ. ಈ ಚುನಾವಣೆ ಫ‌ಲಿತಾಂಶ ಬಂದ ಬಳಿಕ ಮನೆಗೆ ಯಾರೂ ಕಳುಹಿಸಬೇಕಾಗಿಲ್ಲ. ಅವರೇ ಹೋಗುತ್ತಾರೆ. ಈ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ತನ್ನ ವಿರುದ್ಧ ಏಕವಚನ ಬಳಸುತ್ತಿದ್ದಾರೆಂದು ಹೇಳುತ್ತಿದ್ದರು.

ಈಗ ಅವರ ಪಕ್ಷದ ನಾಯಕರು ಮಾತನಾಡಿರುವುದು ಬಹುವಚನವೇ?’ ಎಂದು ಪ್ರಸಾದ್‌ ಪ್ರಶ್ನಿಸಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುನ್ನಡೆ ದೊರೆತಿದ್ದು, ತಾವು ಗೆಲ್ಲುವ ವಿಶ್ವಾಸವಿದೆ. ಕೇಂದ್ರದಲ್ಲಿ ನರೇಂದ್ರಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next