ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಎನ್ ವಿಷನ್ – 2023, ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭ 2023ರ ಮಾರ್ಚ್ 28 ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿಯ ಟ್ಯಾಲೆಂಟ್ ಅಕ್ವಿಸಿಷನ್ ರೋಬೋಸಾಫ್ಟ್ ಟೆಕ್ನಾಲಜೀಸ್ ನ ಅಸೋಸಿಯೇಟ್ ಮ್ಯಾನೇಜರ್ ಲಕ್ಷ್ಮಿ ಶೆಟ್ಟಿ, ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ ಮಯ್ಯ ಡಿ. ಅಧ್ಯಕ್ಷತೆ ವಹಿಸಿದ್ದರು. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಶಬರಾಯ ಗೌರವ ಅತಿಥಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮೀ ಶೆಟ್ಟಿ, ವಿದ್ಯಾರ್ಥಿಗಳು ತಮ್ಮ ಆತ್ಮವಿಶ್ವಾಸ, ಸಂವಹನ, ಮತ್ತು ನಾಯಕತ್ವದ ಸಾರ‍್ಥ್ಯಗಳನ್ನು ಹೆಚ್ಚಿಸುವ ಸಾಧನವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಭಾಗವಹಿಸುವುದರ ಮಹತ್ವವನ್ನು ತಿಳಿಸಿದರು.
ಇದಲ್ಲದೆ, ಪ್ರತಿಷ್ಠಿತ ಕಂಪನಿಗಳಲ್ಲಿ ಸ್ಥಾನಗಳನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅನ್ವೇಷಣೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು.
Related Articles
ಡಾ. ರಾಮಕೃಷ್ಣ ಶಬರಾಯರು ಮಾತನಾಡಿ, ಉದಯೋನ್ಮುಖ ಇಂಜಿನಿರ್ ಗಳಿಗೆ ಎನ್ವಿಷನ್ ಒಂದು ಕನಸು. ಇದರಲ್ಲಿ ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳನ್ನು ಮತ್ತು ಪ್ರತಿಭೆಯನ್ನು ಪ್ರರ‍್ಶಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಡಾ.ಶ್ರೀನಿವಾಸ ಮಯ್ಯ ಡಿ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲು ಅವರ ನವೀನ ಆಲೋಚನೆಗಳನ್ನು ಆಧರಿಸಿ ಎನ್ವಿಷನ್ ಪ್ರತಿ ವರ್ಷ ನಿರಂತರವಾಗಿ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸುತ್ತದೆ ಎಂದು ಹೇಳಿದರು. ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ಎನ್ವಿಷನ್-2023 ರ ಎಲ್ಲಾ ಸಂಘದ ಸಂಯೋಜಕರು ಮತ್ತು ಸ್ವಯಂಸೇವಕರನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಸಂಚಾಲಕ ಡಾ.ಪ್ರಸಾದ್ ಪಿ. ಕಾಲೇಜಿನ ವಿವಿಧ ವಿಭಾಗಗಳಿಂದ ನಡೆಸುತ್ತಿರುವ ವಿವಿಧ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು.
ಎನ್ವಿಷನ್-2023 ರ ಸಂಘಟನಾ ಕಾರ್ಯದರ್ಶಿ ಎನ್. ಶಂಕರ್ ಸ್ವಾಗತಿಸಿದರು. ಎನ್ವಿಷನ್ ಜಂಟಿ ಕಾರ್ಯದರ್ಶಿ ಅನುಷಾ ಪಿ. ನಾಯಕ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶೆಲ್ಟನ್ ಫ್ರಾನ್ಸಿಸ್ ಕುಟಿನ್ಹಾ ವಂದಿಸಿದರು. ರಿಚಾಲ್ ಮೋಹನ್ ಮತ್ತು ನಾಜ್ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು.