Advertisement

ಶೃಂಗೇರಿ ಮಠದಲ್ಲಿ ಸಹಸ್ರ ಚಂಡಿಕಾಯಾಗ ಆರಂಭ

03:45 AM Feb 06, 2017 | Team Udayavani |

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಶ್ರೀ ಶಾರದಾಂಬಾ ದೇವಸ್ಥಾನದ ಕುಂಭಾಭಿಷೇಕದ ಅಂಗವಾಗಿ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠದಲ್ಲಿ ಮುಂದುವರಿದಿದೆ.

Advertisement

ಶ್ರೀಮಠದ ಎದುರಿನ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಭಾನುವಾರದಿಂದ ಸಹಸ್ರ ಚಂಡಿಕಾಯಾಗ ಆರಂಭಗೊಂಡಿದೆ. ಐದು ದಿನಗಳ ಕಾಲ ನಡೆಯುವ ಈ ಯಾಗವು ಫೆ.12 ರಂದು ಸಮಾಪನಗೊಳ್ಳಲಿದೆ. ಶ್ರೀ ಶಾರದಾ ಸನ್ನಿಧಿಯಲ್ಲಿ ಕೋಟಿ ಕುಂಕುಮಾರ್ಚನೆ ನಡೆಯುತ್ತಿದ್ದು, ಇನ್ನೊಂದು ಯಾಗಶಾಲೆಯಲ್ಲಿ ಅತಿರುದ್ರ ಮಹಾಯಾಗ ನಡೆಯುತ್ತಿದೆ. 

ಭಾನುವಾರ ಬೆಳಗ್ಗೆ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಗೌರಿಶಂಕರ್‌ ಚಂಡಿಕಾಯಾಗಕ್ಕೆ ಸಂಕಲ್ಪ ಕೈಗೊಂಡರು. ಚಂಡಿಕಾಯಾಗದ ಅಂಗವಾಗಿ ದೇವಿ ಸಪ್ತಶತಿ ಪಾರಾಯಣವನ್ನು ನೂರು ಋತ್ವಿಜರು ಏಕಕಾಲಕ್ಕೆ ಆರಂಭಿಸಿದರು .ಐದು ದಿನ ನಡೆಯುವ ಈ ಯಾಗದಲ್ಲಿ ಪ್ರತಿ ದಿನವೂ ದೇವಿ ಸಪ್ತಶತಿ ಪಾರಾಯಣವನ್ನು ಜಪಿಸಲಾಗುತ್ತಿದ್ದು, ಪ್ರತಿ ದಿನವೂ ಸಂಜೆ ಜಪ ಪಠಣ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next