Advertisement

ಕೋವಿಡ್ ನಿಂದ ಶಿಸ್ತಿನ ಪಾಠ

06:51 PM Jun 25, 2020 | Naveen |

ಶೃಂಗೇರಿ: ಕೋವಿಡ್‌-19 ನಮಗೆ ಶಿಸ್ತಿನ ಪಾಠ ಕಲಿಸಿದೆ. ಇದರಿಂದ ನಮ್ಮ ಸೇವಾ ಚಟುವಟಿಕೆ ಕುಂಠಿತಗೊಂಡಿದ್ದರೂ ನಮಗಿರುವ ಸೇವಾ ಅವಕಾಶ ಬಳಸಿಕೊಂಡು ಸೇವೆ ಮಾಡಲಾಗಿದೆ ಎಂದು ಲಯನ್ಸ್‌ ರಾಜ್ಯಪಾಲ ರೊನಾಲ್ಡ್‌ ಗೋಮ್ಸ್‌ ಹೇಳಿದರು.

Advertisement

ಪಟ್ಟಣದ ಹೊರವಲಯದ ಶಾರದಾ ಕಂಫರ್ಟ್ಸ್ ನಲ್ಲಿ ಲಯನ್ಸ್‌ ಕ್ಲಬ್‌ ಏರ್ಪಡಿಸಿದ್ದ ಲಯನ್ಸ್‌ ರಾಜ್ಯಪಾಲರ ಅಧಿಕೃತ ಭೇಟಿ ಸಂದರ್ಭದಲ್ಲಿ ಮಾತನಾಡಿದರು. ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕ್ಲಬ್‌ನಿಂದ 90 ಲಕ್ಷ ರೂ.ವೆಚ್ಚದ ವೆಂಟಿಲೇಟರ್‌ ಸಹಿತ ವೈದ್ಯಕೀಯ ಉಪಕರಣ ನೀಡಲಾಗಿದೆ. ಜಿಲ್ಲೆಯಲ್ಲೂ ಕ್ಲಬ್‌ನಿಂದ ಅನೇಕ ಸೇವಾ ಕಾರ್ಯ ಮಾಡಲಾಗಿದೆ ಎಂದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ಬೇಗಾನೆ ವಿವೇಕ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯಪಾಲರು ಇದಕ್ಕೂ ಮೊದಲು ಪಟ್ಟಣದ ವಿವಿಧೆಡೆ ಮಾರ್ಗಸೂಚಿ ಫಲಕ,ನವೀಕರಿಸಿದ ಬಸ್‌ ನಿಲ್ದಾಣ ಉದ್ಘಾಟಿಸಿದರು. ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ರೋಗಿಗೆ ಧನಸಹಾಯ ಮಾಡಲಾಯಿತು. ವೇದಿಕೆಯಲ್ಲಿ ಎಚ್‌.ಜಿ.ವೆಂಕಟೇಶ್‌, ಅನಿತಾ ಗೋಮ್ಸ್‌, ಸಂದೀಪ್‌ ಶೆಟ್ಟಿ, ವಸಂತಕುಮಾರ ಶೆಟ್ಟಿ, ಜಗದೀಶ ನಾಯ್ಕ, ಡಾ| ಸೀತಾರಾಮ, ಉಮೇಶ್‌ ಪುದುವಾಳ್‌, ಎಚ್‌.ಕೆ.ಸುಬ್ರಹ್ಮಣ್ಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next