Advertisement

ಶೃಂಗೇರಿ ಜಗದ್ಗುರುಗಳಿಗೆ ಗುರುವಂದನೆ

12:05 PM Mar 12, 2017 | |

ಕೆ.ಆರ್‌.ನಗರ: ಭಗವಂತನಿಗೆ ಏನನ್ನೂ ಮಾಡಬೇಕಾದ್ದಿಲ್ಲ, ಏನನ್ನೂ ಪಡೆಯಬೇಕಾದ್ದಿಲ್ಲ, ಆತ ನಿತ್ಯತೃಪ್ತ ಹಾಗೂ ನಿತ್ಯ ಮುಕ್ತ. ಈಶ್ವರನ ಈ ಸೃಷ್ಟಿ ಲೋಕೋಪಕಾರವೇ ಹೊರತು ಬೇರೇನೂ ಅಲ್ಲ ಎಂದು ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ಸಂಜೆ ಇಲ್ಲಿನ ಯೋಗಾನಂದೇಶ್ವರ ಸರಸ್ವತಿ ಮಠದಲ್ಲಿ ನಡೆದ ಗುರುವಂದನಾ ಸಭಾ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಎಡತೊರೆ ಮಠ ಸನಾತನ ಸಂಪ್ರ ದಾಯಕ್ಕೆ ಅನುಸಾರವಾಗಿ ನಡೆದುಕೊಂಡು ಬಂದಿದೆ. ಶ್ರೀ ಶಂಕರಭಾರತೀಸ್ವಾಮೀಜಿ ಈ ಮಠದ ಮೂಲಕ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವುದರ ಜೊತೆಗೆ ನಮಗೆ ವಿಧೇಯ ಶಿಷ್ಯರಾಗಿ, ನಿಷ್ಠೆಯಿಂದ ನಡೆದುಕೊಂಡು ಬಂದಿರುವುದು ಸಂತೋಷ ಉಂಟು ಮಾಡಿದೆ ಎಂದರು.

ಕಿರಿಯ ಜಗದ್ಗುರು ಶ್ರೀ ವಿಧುಶೇಖರಸ್ವಾಮೀಜಿ  ಮಾತನಾಡಿ,   ಮನಸ್ಸನ್ನು ಶುದ್ಧವಾಗಿಟ್ಟುಕೊ ಳ್ಳುವುದರಿಂದ ಆತ್ಮದ ಸಾûಾತ್ಕಾರವಾಗುತ್ತದೆ. ತಮೋ ಮತ್ತು ರಜೋಗುಣವನ್ನು ಕಡಿಮೆ ಮಾಡಿ ಸತ್ವಗುಣವನ್ನು ಹೆಚ್ಚಿಸಿಕೊಳ್ಳಬೇಕು. ನಿಷ್ಕಾಮದಿಂದ ಧರ್ಮಾಚರಣೆ ಮಾಡಬೇಕು ಎಂದರು. 

ಶ್ರೀಶಂಕರ ಭಾರತೀ ಸ್ವಾಮಿಗಳು ಮಾತನಾಡಿ, ಹತೊoಬತ್ತನೆಯ ಶತಮಾನದಿಂದಲೂ ಶೃಂಗೇರಿ ಮಠಕ್ಕೂ ಯೋಗಾನಂದೇಶ್ವರ ಸರಸ್ವತೀಮಠಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀ ಶಂಗೇರಿ ಜಗದ್ಗುರುಗಳ ಪ್ರೀತಿ ಮಠದ ಯಶಸ್ಸಿಗೆ ಕಾರಣ. ಅವರ ಆಶೀರ್ವಾದ ನಮ್ಮ ಮೇಲಿರಲಿ ಎಂದರು.

ಜಗದ್ಗುರುಗಳು ಸಮಾರಂಭದಲ್ಲಿ ನಾಲ್ಕು ಧರ್ಮ ಗ್ರಂಥಗಳನ್ನು ಲೋಕಾರ್ಪಣೆ ಮಾಡಿದರು. ಶಾಸಕ ಸಾರಾ.ಮಹೇಶ್‌ ಸ್ವಾಗತಿಸಿದರು. ಮಾಜಿ ಸಂಸದ ಎಚ್‌.ವಿಶ್ವನಾಥ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಶಾಂತ್‌ ಹೆಗ್ಡೆ ಅಭಿನಂದನಾ ಪತ್ರ ಸಮರ್ಪಿಸಿದರು.

Advertisement

ಪುರಪಿತೃಗಳವರು,ವಿವಿಧ ಸಂಘಸಂಸ್ಥೆಗಳವರು ಫ‌ಲಸಮರ್ಪಣೆ ಮಾಡಿದರು.  ಸಭಾ ಕಾರ್ಯಕ್ರಮಕ್ಕೆ ಮುಂಚೆ ಸಂಜೆ ಆಗಮಿಸಿದ ಉಭಯ ಜಗದ್ಗುರುಗಳನ್ನು ಪುರಗಣ್ಯರು ಹಾಗೂ ಭಕ್ತ ಸಮೂಹ ಪಟ್ಟಣದ ಗರುಡಗಂಭ ವೃತ್ತದ ಬಳಿ ಅತ್ಯಂತ ಭಕ್ತಿ ಪೂರ್ವಕವಾಗಿ ಸ್ವಾಗತಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next