Advertisement

Sringeri: ಲಾಡ್ಜ್ ನಲ್ಲಿ ಲೆಡ್ಜರ್ ಪುಸ್ತಕ ಕದ್ದು CCTV ಎದುರು ನೃತ್ಯ ಮಾಡಿದ ಕಳ್ಳ…

03:06 PM Jun 26, 2024 | Team Udayavani |

ಚಿಕ್ಕಮಗಳೂರು: ಒಂದೇ ದಿನದಲ್ಲಿ ಹಲವು ಲಾಡ್ಜ್ ಗಳಿಗೆ ಕನ್ನ ಹಾಕಿದ ಕಳ್ಳರ ತಂಡವೊಂದು ಲಾಡ್ಜ್ ನಲ್ಲಿದ್ದ ಹಣ, ಅಮೂಲ್ಯ ವಸ್ತುಗಳನ್ನು ಬಿಟ್ಟು ಕೇವಲ ಲೆಡ್ಜರ್ ಪುಸ್ತಕಗಳನ್ನು ಎಗರಿಸಿದ ವಿಚಿತ್ರ ಘಟನೆಯೊಂದು ಶೃಂಗೇರಿ ಪಟ್ಟಣದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

Advertisement

ಲಾಡ್ಜ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಲೆಡ್ಜರ್ ಪುಸ್ತಕ ಕಳವು ಮಾಡುವ ದೃಶ್ಯ ಸೆರೆಯಾಗಿದ್ದು ಯುವಕ ಕೇವಲ ಪುಸ್ತಕ ಮಾತ್ರ ಕಳವು ಮಾಡಿರುವ ಹಿಂದೆ ಯಾವುದಾದರೂ ಕ್ರೈಂ ಹಿಸ್ಟರಿ ಮುಚ್ಚಿ ಹಾಕುವ ಉದ್ದೇಶ ಇರಬಹುದೇ ಅಥವಾ ಸೈಬರ್ ಸ್ಕ್ಯಾಮ್ ಗೆ ಡಾಟಾ ದುರ್ಬಳಕೆ ಮಾಡುವ ಉದ್ದೇಶವೇ ಎಂಬ ಅನುಮಾನ ಕಾಡ ತೊಡಗಿದೆ.

ಅಲ್ಲದೆ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಯುವಕನೊಬ್ಬ ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ನಗರದ ಹಲವು ಲಾಡ್ಜ್ ಗಳಿಗೆ ತೆರಳಿ ಅಲ್ಲಿರುವ ಕೌಂಟರ್ ನಲ್ಲಿ ಲೆಡ್ಜರ್ ಪುಸ್ತಕ ಕಡಿಯುವ ದೃಶ್ಯ ಸೆರೆಯಾಗಿದೆ ಅಲ್ಲದೆ ಒಂದು ಲಾಡ್ಜ್ ನಲ್ಲಿ ಯುವಕ ಪುಸ್ತಕ ಕದ್ದು ಹೋಗುವ ವೇಳೆ ಸಿಸಿ ಕ್ಯಾಮೆರಾಕ್ಕೆ ಮುಖ ಮಾಡಿ ನೃತ್ಯ ಮಾಡುವುದನ್ನು ಕಾಣಬಹುದು.

ಇದೀಗ ಯುವಕನ ಕೃತ್ಯ ಶೃಂಗೇರಿ ನಗರದಲ್ಲಿರುವ ಹಲವು ಲಾಡ್ಜ್ ಗಳ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅಲ್ಲದೆ ಲಾಡ್ಜ್ ನಲ್ಲಿದ್ದ ಲೆಡ್ಜರ್ ಪುಸ್ತಕ ಕಳವಾಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಸದ್ಯ ಘಟನೆ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಯುವಕನ ಪತ್ತೆಗೆ ಬಲೆ ಬೀಸಿದ್ದಾರೆ.

Advertisement

ಇದನ್ನೂ ಓದಿ: Bollywood: ವರುಣ್‌ ಧವನ್‌ ʼಬೇಬಿ ಜಾನ್‌ʼ ರಿಲೀಸ್‌ ಔಟ್:‌ ಆಮೀರ್‌ ಚಿತ್ರಕ್ಕೆ ಟಕ್ಕರ್?

Advertisement

Udayavani is now on Telegram. Click here to join our channel and stay updated with the latest news.

Next