Advertisement

Srinagar: ಉಸಿರುಗಟ್ಟಿ ಒಂದೆ ಕುಟುಂಬದ 5 ಮಂದಿ ಸಾವು

01:25 AM Jan 07, 2025 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಚಳಿಯ ತೀವ್ರತೆ ದಿನೇದಿನೇ ಹೆಚ್ಚುತ್ತಿದ್ದು, ಜಮ್ಮು -ಕಾಶ್ಮೀರದ ಶ್ರೀನಗರದಲ್ಲಿ ಉಸಿರುಗಟ್ಟಿ ಒಂದೇ ಕುಟುಂಬದ 5 ಮಂದಿ ಮೃತಪಟ್ಟ ಘಟನೆ ನಡೆದಿದೆ. ತೀವ್ರ ಚಳಿಯ ಹಿನ್ನೆಲೆಯಲ್ಲಿ ಕುಟುಂಬವು ಮನೆಯೊಳಗೆ ಬ್ಲೋವರ್‌ ಬಳಸುತ್ತಿತ್ತು. ಅದರಿಂದ ಹೊರಬಂದ ಕಾರ್ಬನ್‌ ಮೋನಾಕ್ಸೆ„ಡ್‌ನಿಂದಾಗಿ ತಂದೆ, ತಾಯಿ, 3 ಮಕ್ಕಳು ಅಸುನೀಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಇದೇ ವೇಳೆ, ಕಾಶ್ಮೀರದಲ್ಲಿ ರಾತ್ರಿಯ ಕನಿಷ್ಠ ತಾಪಮಾನ ರವಿವಾರ ರಾತ್ರಿ ಹಿಮ ವರ್ಷದಿಂದಾಗಿ ಮತ್ತಷ್ಟು ಏರಿಕೆಯಾಗಿದೆ. ಶ್ರೀನಗರದಲ್ಲಿ ಮೈನಸ್‌ 0.5 ಡಿ.ಸೆ., ಗುಲ್ಮಾರ್ಗ್‌ನಲ್ಲಿ ಮೈನಸ್‌ 4.5 ಡಿಗ್ರಿ, ಪಹಲ್ಗಾಂನಲ್ಲಿ ಮೈನಸ್‌ 1.4 ಡಿಗ್ರಿ ತಲುಪಿದೆ. ಇನ್ನು, ದಿಲ್ಲಿಯಲ್ಲೂ ಚಳಿ ಮುಂದುವರಿದಿದ್ದು, 9.6 ಡಿ.ಸೆ. ತಾಪಮಾನ ದಾಖಲಾಗಿದೆ. ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಸಣ್ಣಮಟ್ಟಿಗೆ ಮಳೆಯೂ ಆಗಿದೆ.

60 ವಿಮಾನ ಸಂಚಾರ ವಿಳಂಬ: ಪಶ್ಚಿಮ ಬಂಗಾಲದಲ್ಲೂ ದಟ್ಟ ಮಂಜು ಆವರಿಸಿದ್ದು, ಗೋಚರತೆ ಕ್ಷೀಣಿಸಿದ ಕಾರಣ ಕೋಲ್ಕತಾ ಏರ್‌ಪೋರ್ಟ್‌ನಲ್ಲಿ 60 ವಿಮಾನಗಳ ಸಂಚಾರ ವಿಳಂಬವಾಗಿದೆ. ಕೋಲ್ಕತಾಗೆ ಬರಬೇಕಿದ್ದ ಹಲವು ವಿಮಾನಗಳ ಮಾರ್ಗ ಬದಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next