Advertisement

ಸಚಿವ ಶ್ರೀಮಂತ ಪಾಟೀಲ್‌ರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

01:04 AM Feb 12, 2021 | Team Udayavani |

ಉಳ್ಳಾಲ: ಮಂಗಳೂರು ವಿಧಾನಸಭೆ ಕ್ಷೇತ್ರ ಉಳ್ಳಾಲ ತಾಲೂಕು ಆಗಿ ಘೋಷಣೆಯಾಗುತ್ತಿದ್ದಂತೆ ಶಿಕ್ಷಣ ಕ್ಷೇತ್ರಕ್ಕೂ ಆದ್ಯತೆ ನೀಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಡಿ ಶೈಕ್ಷಣಿಕ ಕ್ಷೇತ್ರಕ್ಕೆ ಸರಕಾರದ ಅನುದಾನ ಬಿಡುಗಡೆಯಾಗುತ್ತಿದ್ದು, ಗುರುವಾರ ದ.ಕ. ಜಿಲ್ಲಾಡಳಿತ ಹಾಗೂ ಅಲ್ಪ ಸಂಖ್ಯಾಕರ ಕಲ್ಯಾಣ ಇಲಾಖೆಯಡಿ 37 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಲ್ಪಸಂಖ್ಯಾಕ ಬಾಲಕರ ವಸತಿ ಶಾಲೆ ನೂತನ ಕಟ್ಟಡ ಮತ್ತು ಕೊಣಾಜೆ ಅಸೈಗೋಳಿಯಲ್ಲಿ ನಿರ್ಮಾಣ ಗೊಂಡ ಮೊರಾರ್ಜಿ ದೇಸಾಯಿ ಹೆಣ್ಮಕ್ಕಳ ಪ್ರೌಢಶಾಲೆಯ ನೂತನ ಕಟ್ಟಡವನ್ನು ಜವಳಿ, ಕೈಮಗ್ಗ ಹಾಗೂ ಅಲ್ಪಸಂಖ್ಯಾಕ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಉದ್ಘಾಟಿಸಿದರು.

Advertisement

ಈ ಸಂದರ್ಭ 10 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಕೊಣಾಜೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಸಹಿತ 7 ಕೋ.ರೂ. ವೆಚ್ಚದಲ್ಲಿ ಬೋಳಿಯಾರ್‌, ಮಂಜನಾಡಿ, ಪುದು ಪರಂಗಿಪೇಟೆ ಇಲ್ಲಿ ನಿರ್ಮಾಣಗೊಳ್ಳಲಿರುವ ಮೌಲಾನಾ ಆಜಾದ್‌ ಮಾದರಿ ಶಾಲೆಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಕೊಣಾಜೆ ಅಲ್ಪಸಂಖ್ಯಾಕ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿ ನಿಯರಲ್ಲಿ ವ್ಯವಸ್ಥೆಯ ಬಗ್ಗೆ ಸಮಾಲೋಚಿಸಿದರು.

ಕಳಪೆ ಕಾಮಗಾರಿ: ಸಚಿವರಿಂದ ಅಸಮಾಧಾನ
ಕೊಣಾಜೆ ಅಸೈ ಮದಕ ಅಲ್ಪಸಂಖ್ಯಾಕ ವಸತಿ ಶಾಲೆಯನ್ನು ಉದ್ಘಾಟಿಸಿದ ಸಚಿವರು, ಕಟ್ಟಡದ ಗುಣಮಟ್ಟ ವೀಕ್ಷಿಸಿ ಕಟ್ಟಡಕ್ಕೆ ಅಳವಡಿಸಿದ ಕಬ್ಬಿಣದ ಸರಳುಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕಟ್ಟಡದ ವಿನ್ಯಾಸದಲ್ಲಿ ಲೋಪಗಳಿವೆ ಎಂದು ತಿಳಿಸಿದ ಅವರು ಕರಾವಳಿ ಸಮುದ್ರ ತೀರಭಾಗದಲ್ಲಿ ವಿದ್ಯಾರ್ಥಿಗಳು ಇರುವ ಜಾಗ ದಲ್ಲಿ ತೆಳುವಾದ ಸರಳು ಅಳವಡಿಸಿದರೆ ಅಪಾಯ ಸಂಭವಿಸಬಹುದು. ಮುಂದಿನ ಯೋಜನೆಗಳಲ್ಲಿ ಇಂತಹ ಬೇಜವಾಬ್ದಾರಿ ಪುನರಾವರ್ತನೆ ಆಗಬಾರದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next