Advertisement
ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತಾದಿಗಳು ಸೇರಲು ನಿರ್ಬಂಧವಿದ್ದರಿಂದ ಮಧ್ಯಾಹ್ನ 12 ಗಂಟೆ ನಂತರ ನಡೆಯಬೇಕಿದ್ದ ರಥೋತ್ಸವವನ್ನು ಅವಧಿಗೆ ಮುನ್ನವೇ ನಡೆಸಲಾಯಿತು. 4 ಅಡಿಯ ಕಲ್ಲಿನ ಚಕ್ರಗಳ ಮೇಲೆ, ವಿವಿಧ ದೇವತಾ ಮೂರ್ತಿಗಳ ಕೆತ್ತನೆಯುಳ್ಳ ವಿಶೇಷ ತೇರು ನವೀನವಾಗಿ ರೂಪು ಗೊಂಡಿದ್ದು ಭಕ್ತಾದಿಗಳ ಗಮನ ಸೆಳೆಯಿತು. ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ರಥಕ್ಕೆ ಹಣ್ಣು ದವನ ಸಮರ್ಪಿಸಿ ಸ್ವಾಮಿಯ ದರ್ಶನ ಪಡೆದರು. ಬ್ರಹ್ಮರಥೋತ್ಸವ ಅಂಗವಾಗಿ ತಿರು ಕಲ್ಯಾಣೋತ್ಸವ ಮೊದಲಾದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಕ್ತಾದಿಗಳಿಗೆ ಅರವಂಟಿಗೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
Related Articles
Advertisement
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಸಡಗರದಿಂದ ನಡೆಯಿತು.
ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತಾದಿಗಳು ಸೇರದಂತೆ ಸರಳವಾಗಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ತೂಬಗೆರೆ ಹೋಬಳಿಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ರಥಕ್ಕೆ ಹಣ್ಣುದವನ ಸಮರ್ಪಿಸಿ ಸ್ವಾಮಿಯ ದರ್ಶನ ಪಡೆದರು.ಬ್ರಹ್ಮರಥೋತ್ಸವದ ಅಂಗವಾಗಿ, ಕಲ್ಯಾಣೋತ್ಸವ, ಗರುಡೋತ್ಸವ ಹಾಗೂ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಗೆ ವಿಶೇಷವಾಗಿ ಅಭಿಷೇಕ ಸುಪ್ರಭಾತ ಸೇವೆ ದೇವರಿಗೆ ತೋಮಾಲೆ ಸೇವೆ ನವಗ್ರಹ ಪೂಜೆ ರಥದ ಮುಂಭಾಗದಲ್ಲಿ ಹೋಮ ನಡೆಸಲಾಯಿತು. ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ತೂಬಗೆರೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಅರವಂಟಿಗೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.