Advertisement

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

11:48 AM Mar 29, 2021 | Team Udayavani |

ದೊಡ್ಡಬಳ್ಳಾಪುರ: ನಗರದ ಅರ್ಕಾವತಿ ತೀರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ತೃತೀಯ ವರ್ಷದ ಬ್ರಹ್ಮರಥೋತ್ಸವ ಸರಳವಾಗಿ ನೆರವೇರಿತು.

Advertisement

ಕೋವಿಡ್‌ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತಾದಿಗಳು ಸೇರಲು ನಿರ್ಬಂಧವಿದ್ದರಿಂದ ಮಧ್ಯಾಹ್ನ 12 ಗಂಟೆ ನಂತರ ನಡೆಯಬೇಕಿದ್ದ ರಥೋತ್ಸವವನ್ನು ಅವಧಿಗೆ ಮುನ್ನವೇ ನಡೆಸಲಾಯಿತು. 4 ಅಡಿಯ ಕಲ್ಲಿನ ಚಕ್ರಗಳ ಮೇಲೆ, ವಿವಿಧ ದೇವತಾ ಮೂರ್ತಿಗಳ ಕೆತ್ತನೆಯುಳ್ಳ ವಿಶೇಷ ತೇರು ನವೀನವಾಗಿ ರೂಪು ಗೊಂಡಿದ್ದು ಭಕ್ತಾದಿಗಳ ಗಮನ ಸೆಳೆಯಿತು. ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ರಥಕ್ಕೆ ಹಣ್ಣು ದವನ ಸಮರ್ಪಿಸಿ ಸ್ವಾಮಿಯ ದರ್ಶನ ಪಡೆದರು. ಬ್ರಹ್ಮರಥೋತ್ಸವ ಅಂಗವಾಗಿ ತಿರು ಕಲ್ಯಾಣೋತ್ಸವ ಮೊದಲಾದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಕ್ತಾದಿಗಳಿಗೆ ಅರವಂಟಿಗೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಮಾ.29ರಂದು ಸಂಜೆ 5.30ಕ್ಕೆ ಪುಷ್ಪಯಾಗಂ, ಶಯನೋತ್ಸವ, ತೀರ್ಥಗೋಷ್ಠಿ ಮೊದಲಾದ ಪೂಜಾ ಕಾರ್ಯಕ್ರಮಗಳಿವೆ.ಆವಲಬೆಟ್ಟ ನರಸಿಂಹಸ್ವಾಮಿ ಆಗಮನ: ನಗರದಕುಚ್ಚಪ್ಪನ ಪೇಟೆಯ ವೇಣುಗೋಪಾಲ ಸ್ವಾಮಿದೇವಾಲಯದಲ್ಲಿನ ನರಸಿಂಹಸ್ವಾಮಿ ಮೂರ್ತಿಗೆ ಕದರಿಪೌರ್ಣಮಿ ಅಂಗವಾಗಿ ವಿಶೇಷ ಅಲಂಕಾರ,ಆವಲಬೆಟ್ಟದ (ಧೇನುಗಿರಿ) ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಉತ್ಸವ ಮೂರ್ತಿಯನ್ನು ಕರೆ ತಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಕದರಿ ಪೌರ್ಣಮಿ ವಿಶೇಷ: ಕದರಿ ಹುಣ್ಣಿಮೆ ಪ್ರಯುಕ್ತ ನಗರದ ವಡ್ಡರಪೇಟೆಯಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.

ತೂಬಗೆರೆಯಲ್ಲಿ ಶ್ರೀ  ಪ್ರಸನ್ನ ಲಕ್ಷ್ಮೀ ವೆಂಕಟರಮಣಸಾಮಿ ಬ್ರಹ್ಮ ರಥೋತ್ಸವ :

Advertisement

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಸಡಗರದಿಂದ ನಡೆಯಿತು.

ಕೋವಿಡ್‌ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತಾದಿಗಳು ಸೇರದಂತೆ ಸರಳವಾಗಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.

ತೂಬಗೆರೆ ಹೋಬಳಿಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ರಥಕ್ಕೆ ಹಣ್ಣುದವನ ಸಮರ್ಪಿಸಿ ಸ್ವಾಮಿಯ ದರ್ಶನ ಪಡೆದರು.ಬ್ರಹ್ಮರಥೋತ್ಸವದ ಅಂಗವಾಗಿ, ಕಲ್ಯಾಣೋತ್ಸವ, ಗರುಡೋತ್ಸವ ಹಾಗೂ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಲಕ್ಷ್ಮೀ  ವೆಂಕಟೇಶ್ವರ ಸ್ವಾಮಿಗೆ ವಿಶೇಷವಾಗಿ ಅಭಿಷೇಕ ಸುಪ್ರಭಾತ ಸೇವೆ ದೇವರಿಗೆ ತೋಮಾಲೆ ಸೇವೆ ನವಗ್ರಹ ಪೂಜೆ ರಥದ ಮುಂಭಾಗದಲ್ಲಿ ಹೋಮ ನಡೆಸಲಾಯಿತು. ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ತೂಬಗೆರೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಅರವಂಟಿಗೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next