ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಥಬೀದಿಯಲ್ಲಿ ರವಿವಾರ ನಡೆದ ನೃತ್ಯೋತ್ಸವ ಮೆರವಣಿಗೆಗೆ ಪರ್ಯಾಯ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಡೋಲು ಉತ್ಸವಕ್ಕಾಗಿ ರಚಿಸಿದ ಶ್ರೀ ಕೃಷ್ಣನ ಮಣ್ಣಿನ ಮೂರ್ತಿ ಹಾಗೂ ತೊಟ್ಟಿಲು ಸಹಿತ ವಿವಿಧ ಭಜನ ತಂಡಗಳಿಂದ ಕುಣಿತದ ಭಜನೆಯೊಂದಿಗೆ ರಥಬೀದಿಯಲ್ಲಿ ಮೆರವಣಿಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರೊಂದಿಗೆ ಶ್ರೀಪಾದರು ರಾಜಾಂಗಣಕ್ಕೆ ಬಂದರು. ರಾಜಾಂಗಣದಲ್ಲಿ ವಿಶೇಷ ರೀತಿಯಲ್ಲಿ ನೃತ್ಯೋತ್ಸವನ್ನು ಉದ್ಘಾಟಿಸಲಾಯಿತು.
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಬೆಣ್ಣೆ ತಿನ್ನುವ ಕೃಷ್ಣನೇ ಉಡುಪಿಯಲ್ಲಿ ನೆಲೆ ನಿಂತಿದ್ದಾನೆ. ದೇವಕಿ ಮೊಸರು ಕಡೆಯುವಾಗ ಶ್ರೀ ಕೃಷ್ಣ ಬೆಣ್ಣೆ ಕದ್ದು ದೂರಕ್ಕೆ ಹೋಗಿ ಬೆಣ್ಣೆ ತಿನ್ನುತ್ತಿರುವಾಗ ರುಕ್ಮಿಣಿ ದೇವಿಯು ಪ್ರಾರ್ಥಿಸಿದ ಸಂದರ್ಭವನ್ನು ದೇವ ಶಿಲ್ಪಿಯು ಕಡಗೋಲ ಕೃಷ್ಣನ ಮೂರ್ತಿ ರಚಿಸಿದ್ದಾನೆ. ಹೀಗಾಗಿಯೇ ಉಡುಪಿ ಅನ್ನ ಬ್ರಹ್ಮನ ನಾಡು. ಇಲ್ಲಿ 800 ವರ್ಷಗಳಿಂದಲೂ ನಿತ್ಯ ಅನ್ನದಾನ ನಡೆಯುತ್ತಾ ಬಂದಿದೆ. ಆ ಮೂಲಕ ಶ್ರೀ ಕೃಷ್ಣನ ಆರಾಧನೆ, ಪೂಜೆ ನಡೆಯುತ್ತದೆ ಎಂದು ಅನುಗ್ರಹಿಸಿದರು.
ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಂಆರ್‌ಜಿ ಗ್ರೂಪ್‌ನ ಮುಖ್ಯಸ್ಥ ಡಾ| ಬಂಜಾರ ಪ್ರಕಾಶ್ ಶೆಟ್ಟಿ, ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆ, ಶಿಕ್ಷಣಕ್ಕೆ ನೀಡುತ್ತಾ ಬಂದಿದ್ದೇನೆ. ಕಠಿನ ಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದರು.
ಪದ್ಮಶಾಲಿ ಸಮಾಜದ ರತ್ನಾಕರ ಇಂದ್ರಾಳಿ, ಯಾದವ ಸಮಾಜದ ಶಶಿಕುಮಾರ್ ತಿಮ್ಮಯ್ಯ, ದಿಲ್ಲಿ ಗುರುವನ ಆಶ್ರಮದ ಹರೀಶ್ ಮಧ್ಯಸ್ಥ, ವಯನಾಡಿನ ಶ್ರೀವತ್ಸ ಆಚಾರ್ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಸಾಯಿರಾಧಾ ಸಮೂಹ ಸಂಸ್ಥೆಯ ಮುಖ್ಯಸ್ಥ ಮನೋಹರ್ ಶೆಟ್ಟಿ, ಮಾಜಿ ಕ್ರಿಕೆಟಿಗ ವಿಜಯ ಭಾರದ್ವಾಜ್, ಪ್ರಮುಖರಾದ ಕೆ.ಎನ್.ರಾಘವೇಂದ್ರ ರಾವ್, ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಶ್ರೀಪಾದರು ಬಹುಮಾನ ವಿತರಿಸಿದರು. ಮಠದ ರಮೇಶ್ ಭಟ್ ಸ್ವಾಗತಿಸಿ, ಡಾ| ಬಿ.ಗೋಪಾಲಾಚಾರ್ಯ ನಿರೂಪಿಸಿದರು.
ಭಾರತೀಯ ಆಹಾರ ಪದ್ಧತಿ ಕೈಬಿಟ್ಟ ಕಾರಣ ಸಮಸ್ಯೆ
ಆಹಾರತಜ್ಞೆ ಡಾ| ಪ್ರೇಮಾ ಎಚ್.ಎಸ್. ಅವರು ಭಗವದ್ಗೀತೆ ಹೇಳಿದ ಆಹಾರಕ್ರಮ ಎಷ್ಟು ಪ್ರಸ್ತುತ? ಎಂಬ ವಿಷಯ ಬಗ್ಗೆ ಉಪನ್ಯಾಸ ನೀಡಿ, ಭಾರತೀಯ ಆಹಾರ ಪದ್ಧತಿಯನ್ನು ನಾವು ಮರೆಯುತ್ತಿರುವುದರಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದರು.
ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ವಿವಿಧ ಸ್ಪರ್ಧೆಗಳು, ಮಡಕೆಯಲ್ಲಿ ಬಣ್ಣದ ಚಿತ್ತಾರ…
ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಲಗೋರಿ ಸೇರಿದಂತೆ ವಿವಿಧ ಸ್ಪರ್ಧೆಗಳು…
ಗೀತಾಮಂದಿರದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ಲಾನಿಟೋರಿಯಂ ವಿಶ್ವರೂಪ ದರ್ಶನ ಉದ್ಘಾಟನೆ…