ಹೊಸದಿಲ್ಲಿ: ಮಂಗಳವಾರ ಅರ್ಹತಾ ಸುತ್ತಿನ ಸ್ಪರ್ಧೆಗಳ ಮೂಲಕ ಆರಂಭವಾಗಲಿರುವ “ಜರ್ಮನ್ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯಿಂದ ಕಳೆದ ಸಲದ ಫೈನಲಿಸ್ಟ್ ಕೆ. ಶ್ರೀಕಾಂತ್ ಹಿಂದೆ ಸರಿದಿದ್ದಾರೆ.
ಲಕ್ಷ್ಯ ಸೇನ್ ಮತ್ತು ನೂತನ ರಾಷ್ಟ್ರೀಯ ಚಾಂಪಿಯನ್ ಮಿಥುನ್ ಮಂಜುನಾಥ್ ಭಾರತದ ಅಗ್ರ ಆಟಗಾರರಾಗಿದ್ದಾರೆ. ಕಳೆದ ವರ್ಷದ ಸೆಮಿಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿದ ಹೆಗ್ಗಳಿಕೆ ಲಕ್ಷ್ಯ ಸೇನ್ ಅವರದಾಗಿತ್ತು.
ಈ ಬಾರಿ ಫ್ರಾನ್ಸ್ನ ಕ್ರಿಸ್ಟೊ ಪೊಪೋವ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಮಿಥುನ್ ಮಂಜುನಾಥ್ ಮಾಜಿ ವಿಶ್ವ ಚಾಂಪಿಯನ್ ಲೋಹ್ ಕೀನ್ ವ್ಯೂ ವಿರುದ್ಧ ಆಡುವರು.
ವನಿತಾ ವಿಭಾಗದಲ್ಲಿ ಸೈನಾ ನೆಹ್ವಾಲ್, ಮಾಳವಿಕಾ ಬನ್ಸೋಡ್, ಮಿಶ್ರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ-ಬಿ. ಸುಮಿತ್ ರೆಡ್ಡಿ ಸೆಣಸುವರು.