Advertisement

ತ್ರಿಪುರ ಸುಂದರಿ ಅಮ್ಮನಿಗೆ ಭಕ್ತರಿಂದ ಬಾಯಿ ಬೀಗ ಸೇವೆ

03:37 PM Jan 10, 2023 | Team Udayavani |

ಮೂಗೂರು: ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೂಗೂರು ಗ್ರಾಮದ ದೇವತೆ ಶ್ರೀತ್ರಿಪುರ ಸುಂದರಿ ಅಮ್ಮನವರ ಜಾತ್ರೆ ಮಹೋತ್ಸವದ 4ನೇ ದಿನ ಸೋಮವಾರ ಅಮ್ಮನವರ ಚಿಗುರು ಕಡಿಯುವ (ಒಡೆಯುವುದು) ಹಿನ್ನೆಲೆಯಲ್ಲಿ ಮುಂಜಾನೆಯಿಂದಲೆ ಅಮ್ಮನಿಗೆ ವಿವಿಧ ಪೂಜೆ ಅಭಿಷೇಕ ನಡೆದವು. ಬೆಳಗ್ಗೆನಿಂದಲೆ ಭಕ್ತರು ಬಾಯಿಬೀಗ ಸೇವೆ, ಉರುಳು ಸೇವೆ ಹಾಗೂ ದೀವಟಿಗೆ ಸೇವೆ ಹರಕೆ ತೀರಿಸಿದರು.

Advertisement

ಭಕ್ತರು ಅಮ್ಮ ನವರ ದೇವಾಲಯದಿಂದ ಹೊಸಹಳ್ಳಿ ಚಿಗುರು ಕಡಿಯುವ ಮೂಲಸ್ಥಾನ ದವರೆಗೂ ನಡಿಗೆಯಲ್ಲಿ ಹೋಗಿ ಭಕ್ತರು ನಮ್ಮ ಕಷ್ಟಕಾರ್ಪಣ್ಯಗಳನ್ನು ನೆರವೇರಿಸಿ ಎಂದು ಅಮ್ಮನವರಲ್ಲಿ ಪ್ರಾರ್ಥಿಸಿದರು. ಮೂಗೂರು ಚಿಗುರು ಕಡಿಯುವುದು ಎಂದರೆ ಬಹಳ ಹೆಸರುವಾಸಿಯಾಗಿದೆ. ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆ ಹಾಕಿಸಿ ನಂತರ ಮಧ್ಯಾಹ್ನ 2 .30ಕ್ಕೆ ಅಮ್ಮನವರನ್ನು ಪಲ್ಲಕ್ಕಿಯಲ್ಲಿ ಮೂಗೂರಿನಿಂದ ಹೊಸಳ್ಳಿಗೆ ಕರೆ ತರಲಾಗುವುದು. ರಥೋತ್ಸವದ ರಾತ್ರಿ ನೇರಳೆ ಮರದ ಕೊಂಬೆಯನ್ನು ಸವರಿ ಬಂದಿರುತ್ತಾರೆ. ಬಳಿಕ ಹೊಸಳ್ಳಿ ಗ್ರಾಮದ ಕೆರೆಯ ಪಕ್ಕದಲ್ಲಿ ಪುರಾತನಕಾಲದ ನೇರಳೆ ಮರವಿದ್ದು ಅಲ್ಲಿ ವಿವಿಧ ಪೂಜೆಗಳು ನೆರವೇರುತ್ತವೆ. ಈ ಬಾರಿ 9 ಚಿಗುರು ಬಂದಿದ್ದು, ಇದು ಶುಭ ಸಂಖ್ಯೆಯಾಗಿದ್ದು ಗ್ರಾಮ ಮತ್ತು ರಾಜ್ಯಕ್ಕೆ ಶುಭವಾಗಲಿದೆ ಹಾಗೂ ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎಂದು ಅರ್ಚಕರು ನುಡಿದರು.

ಚಿಗುರು ಕಡಿಯುವುದು ಎಂದರೆ ಚಿಗುರು ಒಡೆಯುವುದು ಎಂದರ್ಥ ಆ ನೇರಳೆ ಮರದ ಹಲವು ಕೊಂಬೆಗಳಲ್ಲಿ ಒಂದು ಕೊಂಬೆಯನ್ನು ಸವರಿ ಅದಕ್ಕೆ ಅರಿಶಿನದ ಬಟ್ಟೆಯನ್ನು ಕಟ್ಟುತ್ತಾರೆ. ಆ ಚಿಗುರನ್ನು ಅರ್ಚಕರು ಪೂಜೆ ಮಾಡಿ ಹೊಸಳ್ಳಿಯಿಂದ ಮೂಗೂರಿನ ಅಮ್ಮನವರ ದೇವಸ್ಥಾನಕ್ಕೆ ತರುತ್ತಾರೆ. ಅಮ್ಮನವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಒಂದು ವಾರದ ನಂತರ ಮೈಸೂರು ಅರಮನೆಗೆ ಚಿಗುರು ಕೊಡುವುದು ವಾಡಿಕೆಯಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next