Advertisement

ಸಂಶೋಧನೆ, ವಿಮರ್ಶೆಗೆ ಮಂತ್ರಾಲಯ ಮಠ ಸಿದ್ಧ: ಶ್ರೀ ಸುಬುಧೇಂದ್ರ ತೀರ್ಥರು 

11:09 PM Aug 28, 2022 | Team Udayavani |

ರಾಯಚೂರು: ಮುಕ್ತವಾದ ಚರ್ಚೆ, ಸಂವಾದ ನಡೆಯಲು ಮಂತ್ರಾಯದ ಶ್ರೀಮಠವು ವೇದಿಕೆಯಾಗಲಿದೆ. ಸಂಶೋಧನೆ, ವಿಮರ್ಶೆಗೆ ಶ್ರೀಮಠ ಸದಾ ಸಿದ್ಧವಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

Advertisement

ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ, ಶ್ರೀ ಸುಬುಧೇಂದ್ರ ಸೇವಕ ತಂಡಗಳ ಸಹಯೋಗದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರವಿವಾರ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಜನ್ಮ ಸುವರ್ಣ ಮಹೋತ್ಸವ ಹಾಗೂ 10ನೇ ಚಾತುರ್ಮಾಸ್ಯ ನಿಮಿತ್ತ ಹಮ್ಮಿಕೊಂಡಿದ್ದ ಲಿಪಿ ಶಾಸನ ಹಸ್ತಪ್ರತಿ ಗ್ರಂಥ ಸಂಪಾದನೆ, ಇತಿಹಾಸ ಹಾಗೂ ಪ್ರತಿಮಾ ಲಕ್ಷಣ ತಜ್ಞರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಸಂದೇಶ ನೀಡಿದರು.

ಸಂಶೋಧನೆಯ ಮೂಲ ಉದ್ದೇಶ ಸತ್ಯಶೋಧನೆ ಯಾಗಿರಬೇಕು. ಗುರುರಾಯರು ಒಂದು ಕ್ರಮ ಹಾಕಿಕೊಟ್ಟಿದ್ದಾರೆ. ನಾವು ವಾದವನ್ನು ವಿರೋಧಿ ಸಬೇಕೇ ವಿನಾ ವ್ಯಕ್ತಿಯನ್ನಲ್ಲ. ವಾದ, ವಿಮರ್ಶೆ, ಸಂಶೋಧನೆ ಆಳವಾಗಿ ಪರಿಣಾಮಕಾರಿಯಾಗಿ ನಡೆಯಬೇಕು. ಅಭಿಪ್ರಾಯಗಳನ್ನು ವಿಷಯಾ ಧಾರಿತವಾಗಿ ರೂಪಿಸಿಕೊಳ್ಳಬೇಕು ಎಂದರು.

ಸಂಶೋಧನೆಯ ಸಮಾವೇಶದ ಉದ್ದೇಶ ಸತ್ಯಾ ನ್ವೇಷಣೆಗೆ ಪೂರಕ ವಾತಾವರಣ ನಿರ್ಮಿಸುವು ದಾಗಿದೆ. ಕರ್ನಾಟಕದ ಎಲ್ಲ ವಿದ್ವಾಂಸರು ಇಲ್ಲಿ ಸೇರಿರುವುದು ಸಂಶೋಧನ ಕ್ಷೇತ್ರಕ್ಕೆ ಹೊಸ ಜೀವ ಬಂದಿದೆ. ಮಂತ್ರಾಲಯ ಮಠ ಬಹಳ ಹಿಂದಿನಿಂದಲೂ ಸಂಶೋಧನೆ, ಸಂಗ್ರಹ, ಪ್ರಕಟನೆಯ ಕಾರ್ಯ ಕೈಗೊಂಡಿದೆ. ಮುಂದೆಯೂ ಈ ಕಾರ್ಯಕ್ರಮ ಬೃಹತ್‌ ಪ್ರಮಾಣದಲ್ಲಿ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next